/kannada/photo-gallery/shukra-gochar-laxmi-narayana-yoga-bless-this-zodiac-signs-with-huge-wealth-and-success-221344 Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು Laxmi Narayana Yoga: ಈ ರಾಶಿಯವರಿಗೆ ಭಾಗ್ಯೋದಯ, ಸಿಗಲಿದೆ ಅಪಾರ ಕೀರ್ತಿ ಯಶಸ್ಸು 221344

ಬೆಂಗಳೂರು : ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗದೇ  ಹೋದಾಗ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿ ಬಿಡುತ್ತದೆ. ಹೃದಯ ಹೀಗೆ ಕೆಲಸ ಮಾಡುವುದನ್ನು ನಿಲ್ಲಿಸುವುದಕ್ಕೆ  ಹೃದಯಾಘಾತ ಎನ್ನುತ್ತಾರೆ.  ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಲಕ್ಷಣಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ದೇಹ ನೀಡುವ ಈ ಮುನ್ಸೂಚನೆ ಗಳನ್ನು  ಅರ್ಥ ಮಾಡಿಕೊಂಡರೆ ಸಂಭವಿಸಬಹುದಾದ ದೊಡ್ಡ ಅಪಘಾತವನ್ನು ತಡೆಯಬಹುದು. 

ಹೃದಯಾಘಾತದ ಇತರ ಲಕ್ಷಣಗಳು : 
ಎದೆನೋವಿನ ಹೊರತಾಗಿ, ಹೃದಯಾಘಾತಕ್ಕೂ ಮೊದಲು  ಅನೇಕ ಲಕ್ಷಣಗಳು ಕಾಣಿಸುತ್ತವೆ. ಚರ್ಮವು ತಿಳಿ ಬೂದು ಬಣ್ಣಕ್ಕೆ ತಿರುಗುತ್ತದೆ. ಪದೇ ಪದೇ ವಿನಾ ಕಾರಣ ಬೆವರೂ ಬರುತ್ತದೆ. ವಾಕರಿಕೆ,, ಉಸಿರಾಟದಲ್ಲಿ ತೊಂದರೆ, ಆತಂಕ, ತಲೆಸುತ್ತುವುದು ಮುಂತಾ ಲಕ್ಷಣಗಳು ಕಾಣಿಸುತ್ತವೆ. 

ಇದನ್ನೂ ಓದಿ : ಬಿಳಿ ಕೂದಲಿನ ಶಾಶ್ವತ ಪರಿಹಾರಕ್ಕೆ ಸೇವಿಸಿ ಈ ಆಹಾರಗಳನ್ನು

ಮಹಿಳೆ ಮತ್ತು ಪುರುಷರಲ್ಲಿ ಭಿನ್ನವಾಗಿರುತ್ತದೆ ಈ ಲಕ್ಷಣಗಳು : 
ಪುರುಷರಿಗೆ  ಹೃದಯಾಘಾತಕ್ಕೂ ಮುನ್ನ ಎದೆ ನೋವು ಕಾಣಿಸಿಕೊಂಡರೆ,   ಮಹಿಳೆಯರಿಗೆ ಉಸಿರಾಟದ ತೊಂದರೆ, ಕುತ್ತಿಗೆ ಮತ್ತು ದವಡೆಯಲ್ಲಿ ನೋವು  ಕಾಣಿಸಿಕೊಳ್ಳುತ್ತದೆ. 

ಬ್ಲಡ್ ಶುಗರ್  :
ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಇನ್ನೊಂದು ಕಾರಣವೆಂದರೆ ಮಧುಮೇಹ. ಮಧುಮೇಹ ಹೃದಯಾಘಾತದ ಅತ್ಯಂತ   ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ ರೋಗಿಗೆ ಸೌಮ್ಯವಾದ ಎದೆಯುರಿ ಅಥವಾ ಎದೆ ನೋವು ಕಾಣಿಸುತ್ತದೆ. ಬಹುತೇಕ ಮಂದಿ ಈ ಹಂತವನ್ನು ನಿರ್ಲಕ್ಷಿಸಿ ಬಿಡುತ್ತಾರೆ. 

ಅಪಾಯವನ್ನು ಕಡಿಮೆ ಮಾಡುವುದು  ಹೇಗೆ ?
ಆರೋಗ್ಯಕರ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಸಹಾಯದಿಂದ ಮಾತ್ರ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು.  ದೇಹ ತೂಕವನ್ನು ಕಾಪಾಡಿಕೊಳ್ಳುವುದು, ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು  ಸೇವಿಸುವ ಮೂಲಕ ಈ ಅಪಾಯವನ್ನು ತಳ್ಳಿ ಹಾಕಬಹುದು. 

ಇದನ್ನೂ ಓದಿ : Diabetes: ಬೇಸಿಗೆಯಲ್ಲಿ ಮಧುಮೇಹವನ್ನು ನಿಯಂತ್ರಿಸುವ 5 ಸುಲಭ ವಿಧಾನಗಳು

ತರಕಾರಿಗಳ ಸೇವನೆ :
ಆಹಾರದಲ್ಲಿ ತರಕಾರಿಗಳನ್ನು ಸೇರಿಸಿಕೊಳ್ಳಬೇಕು. ತರಕಾರಿಗಳು ಅನೇಕ ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ. ಆರೋಗ್ಯಕರ ಆಹಾರವು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್‌ ಪುಷ್ಠಿಕರಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Section: 
English Title: 
heart attack symptoms on skin
News Source: 
Home Title: 

ಹೃದಯಾಘಾತದ ಮುನ್ಸೂಚನೆಯನ್ನು ನಿಮ್ಮ ಚರ್ಮವೂ ನೀಡುತ್ತದೆ! ಎಚ್ಚರ   

ಹೃದಯಾಘಾತದ ಮುನ್ಸೂಚನೆಯನ್ನು ನಿಮ್ಮ ಚರ್ಮವೂ ನೀಡುತ್ತದೆ! ಎಚ್ಚರ
Yes
Is Blog?: 
No
Tags: 
Facebook Instant Article: 
Yes
Highlights: 

ಹೃದಯ ಹೀಗೆ ಕೆಲಸ ಮಾಡುವುದನ್ನು ನಿಲ್ಲಿಸುವುದಕ್ಕೆ  ಹೃದಯಾಘಾತ ಎನ್ನುತ್ತಾರೆ.

ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಈ  ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.

ಹೃದಯಾಘಾತಕ್ಕೂ ಮುನ್ನ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ.

Mobile Title: 
ಹೃದಯಾಘಾತದ ಮುನ್ಸೂಚನೆಯನ್ನು ನಿಮ್ಮ ಚರ್ಮವೂ ನೀಡುತ್ತದೆ! ಎಚ್ಚರ
Ranjitha R K
Publish Later: 
No
Publish At: 
Wednesday, April 19, 2023 - 16:17
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No
Word Count: 
225