ಬೆಂಗಳೂರು : ಇತ್ತೀಚಿಗೆ ʼಸಿಡಿʼ ವಿಚಾರವಾಗಿ ಭಾರಿ ಸುದ್ದಿ ಮಾಡುತ್ತಿರುವ ರಮೇಶ್ ಜಾರಕಿಹೊಳಿ ಕೇಂದ್ರ ನಾಯಕರ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಮೇಶ್ ಜಾರಕಿಹೊಳಿ ಅವರು ಶಾಸಕರು, ಒಬ್ಬ ಮಾಜಿ ಸಚಿವರು ಇವತ್ತು ಅವ್ರು ದೆಹಲಿಗೆ ಬಂದಿದ್ರು, ನನ್ನನ್ನು ಭೇಟಿ ಮಾಡಿದ್ರು ನಿಜ ಎಂದು ಹೇಳಿದರು.
ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗಳಿಗೆ ಮಾತಾನ್ನಾಡಿದ ಜೋಶಿ, ರಮೇಶ್ ಜಾರಕಿಹೊಳಿ ಡೆಲ್ಲಿಗೆ ಬಂದಿದ್ದು ನನ್ನನ್ನು ಬಿಟ್ಟು ಬೇರೆ ಯಾರನ್ನು ಭೇಟಿ ಮಾಡಿದ್ರು ಅಂತಾ ಗೊತ್ತಿಲ್ಲ, ಅವ್ರು ಬೇರೊಂದು ಕಾರಣಕ್ಕೆ ಬಂದು ಹಾಗೇ ನನ್ನನ್ನು ಭೇಟಿ ಮಾಡಿದ್ರು ಅಷ್ಟೇ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡುವ ಬಗ್ಗೆ ನನ್ನ ಬಳಿ ಅವ್ರು ಏನು ಪ್ರಸ್ತಾಪ ಮಾಡಿಲ್ಲ. ಒಂದು ವೇಳೆ ಆ ರೀತಿ ಹೇಳಿದಾಗ ಆ ನಂತರ ಬಂದು ನಿಮ್ಮ ಮುಂದೆ ಹೇಳುವೆ,ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಟ್ಟಿ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿ ಚುನಾವಣೆ ಘೋಷಣೆ ಆದ ಮೇಲೆ ಪಟ್ಟಿ ಪ್ರಕಟ ಆಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: Govind Karjol : 'ನೀರಾವರಿ ಇಲಾಖೆಯಲ್ಲಿ 400 ಹುದ್ದೆ ನೇಮಕಕ್ಕೆ ಅನುಮತಿ'
ನಂತರ ಕೋರ್ ಕಮಿಟಿ ಸಭೆ ಮುನ್ನ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತಾನ್ನಾಡಿ, ಕೇಂದ್ರ ಬಜೆಟ್ ಆಗಿದೆ,ಕರ್ನಾಟಕಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಭದ್ರ ಮೇಲ್ಡಂಡೆ ಯೋಜನೆಗೆ 5,300 ಕೋಟಿ ಹಣ ನೀಡಲಾಗಿದೆ.ರೈಲ್ವೇ ಯೋಜನೆಗೆ ಹೆಚ್ಚು ಒತ್ತು ನೀಡಲಾಗಿದೆ. ಕರ್ನಾಟಕದಲ್ಲಿ ಪ್ರಧಾನಿ ಆವಾಸ್ ಯೋಜನೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಜಲ ಜೀವನ್ ಮಿಷನ್ ಉತ್ತಮವಾಗಿ ನಡೆಯುತ್ತಿದೆ ಎಂದರು.
ಇನ್ನು ಉತ್ತರ ಪ್ರದೇಶಕ್ಕೆ ಹೆಚ್ಚು ಅನುದಾನ ನೀಡಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಉತ್ತರ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಇದೆ.ದೊಡ್ಡ ರಾಜ್ಯವೂ ಕೂಡ ಹೌದು,ಹಾಗಾಗಿ ಹೆಚ್ಚು ಅನುಧಾನ ನೀಡಲಾಗಿದೆ.ಕರ್ನಾಟಕಕ್ಕೂ ಕೂಡ ಹೆಚ್ಚು ಅನುಧಾನ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 26 ಸಾವಿರ ಕೋಟಿ ರೈತರ ಸಾಲವನ್ನ ಮನ್ನಾ ಮಾಡಿದ ಕೀರ್ತಿ ಕುಮಾರಣ್ಣನಿಗೆ....
ಈಶ್ವರಪ್ಪ ಸಚಿವ ಸ್ಥಾನ ಬೇಡ..? : ಮಾಜಿ ಸಚಿವ ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಬೇಡ ಎಂಬ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ,ಅವರೂ ಕೂಡ ಪಕ್ಷದ ನಿಲುವಿಗೆ ಬದ್ದರಾಗಿರಬಹುದು.ಎಲ್ಲರದ್ದೂ ಒಂದೇ ಟಾರ್ಗೆಟ್ ಮತ್ತೆ ಬಿಜೆಪಿಯನ್ನ ರಾಜ್ಯದಲ್ಲಿ ಅಧಿಕಾರಕ್ಕೆ ತರೋದು.ಹಾಗಾಗಿ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಲಿದ್ದಾರೆ ಎಂದರು. ಇದೇ ವೇಳೆ ಯತ್ನಾಳ್ ಹೇಳಿಕೆ ಬಗ್ಗೆ ಕೇಳಿದಾಗ ಈ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.