ನವದೆಹಲಿ: ರಜನಿಕಾಂತ್ ಚಿತ್ರಗಳೆಂದರೆ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಸೃಷ್ಟಿಸುವಂತಹ ಸಿನಿಮಾಗಳು.ಈಗ ರೋಬೋಟ್ ಚಿತ್ರದ ಮುಂದುವರೆದ ಭಾಗವೆಂದು ಹೇಳಲಾದ 2.0 ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.
ಈ ಚಿತ್ರ ವಿಭಿನ್ನ ರೀತಿಯ ವಿಎಫ್ಎಕ್ಷ್ ಎಫೆಕ್ಟ್ ನಿಂದಲೇ ಭಾರಿ ಸುದ್ದಿ ಮಾಡಿದೆ.ಇದೇ ಮೊದಲ ಬಾರಿಗೆ ಅಕ್ಷಯ್ ಕುಮಾರ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಬೆಳ್ಳಿತೆರೆಯ ಮೇಲೆ ಒಟ್ಟಾಗಿ ಅಭಿನಯಿಸಿದ್ದಾರೆ. ಈಗ ಕೇವಲ ಒಂದೇ ವಾರದಲ್ಲಿ 500 ಕೋಟಿ ರೂ ಗಳಿಸಿದೆ ಎಂದು ತಿಳಿದುಬಂದಿದೆ.
A box office PHENOMENA!!!! 500 crores worldwide!!!!! We at @DharmaMovies are so proud to be associated with the HINDI version of this movie marvel!!!! @shankarshanmugh #RAJNISIR @akshaykumar @LycaProductions pic.twitter.com/JNJaeCaR1X
— Karan Johar (@karanjohar) December 6, 2018
ಈ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ಬಗ್ಗೆ ಕರಣ್ ಜೋಹರ್ ಟ್ವಿಟ್ಟರ್ ಮೂಲಕ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.ತ್ರಿಡಿ ಎಫೆಕ್ಟ್ ನಲ್ಲಿ ಶೂಟ್ ಮಾಡಿದ ಮೊದಲ ಭಾರತೀಯ ಚಲನಚಿತ್ರ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಈ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದಾರೆ.
ಈ ಹಿಂದೆ 2010 ರಲ್ಲಿ ರಜನಿಕಾಂತ್ ಮತ್ತು ಐಶ್ವರ್ಯ ರೈ ಅವರು ನಟಿಸಿದ್ದ ಎಂಧಿರನ್ ಚಿತ್ರವನ್ನು ಶಂಕರ್ ನಿರ್ದೇಶಿಸಿದ್ದರು. ಈಗ ಈ ಚಿತ್ರದ ಮುಂದುವರೆದ ಭಾಗವಾಗಿ 2.0 ಚಿತ್ರವನ್ನು ನಿರ್ಮಿಸಿದ್ದಾರೆ. ಈಗ ನವಂಬರ್ 29 ರಂದು ಜಗತ್ತಿನಾದ್ಯಂತ ಈ ಸಿನಿಮಾ ಬಿಡುಗಡೆಯಾದ ಈ ಸಿನಿಮಾ ಬಾಕ್ಸ್ ಆಫಿಸ್ ನಲ್ಲಿ ಕೊಳ್ಳೆ ಹೊಡೆಯುತ್ತಿದೆ.