ನವರಸಗಳಲ್ಲಿ ಶೃಂಗಾರ ರಸವೂ ಒಂದು. ಶೃಂಗಾರ ಎಂದೊಡನೆ ನೆನಪಾಗುವುದು ಹೆಣ್ಣು ಮಕ್ಕಳು. ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆಯನ್ನು ಪ್ರಸ್ತುತ ಆಡು ಭಾಷೆಯಲ್ಲಿ ಹೆಚ್ಚಾಗಿ ಮೇಕಪ್ ಎಂತಲೇ ಹೇಳಲಾಗುತ್ತದೆ. ಹೆಣ್ಣು ಮಕ್ಕಳು ಮೇಕಪ್ ಪ್ರಿಯರು. ಮೇಕಪ್ ನಲ್ಲಿ ಹೆಚ್ಚಾಗಿ ಎದ್ದು ಕಾಣುವುದು ಹುಡುಗಿಯರ ಕೋಮಲ ತುಟಿಗಳಲ್ಲಿ ಕಾಣುವ ಲಿಪ್ಸ್ಟಿಕ್. ಲಿಪ್ಸ್ಟಿಕ್ ದೀರ್ಘಕಾಲದವರೆಗೆ ಹಾಗೆ ಉಳಿಯಲು ಒಂದೇ ಒಂದು ಸಿಂಪಲ್ ಸಲಹೆ ನಿಮಗೆ ಸಹಕಾರಿ ಆಗಿದೆ. ಈ ಲೇಖನದಲ್ಲಿ ಲಿಪ್ಸ್ಟಿಕ್ ದೀರ್ಘಕಾಲದವರೆಗೆ ಉಳಿಯಲು ಏನು ಮಾಡಬೇಕು ಮತ್ತು ತುಟಿಯ ಆರೈಕೆ ಹೇಗಿರಬೇಕು ಎಂಬ ಬಗ್ಗೆ ತಿಳಿಯೋಣ...
ಹೆಣ್ಣು ಹೆಚ್ಚಾಗಿ ಮೇಕಪ್ ಪ್ರಿಯೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಮಹಿಳೆಯರು ಮೇಕಪ್ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳತ್ತಾರೆ, ಅಲ್ಲದೇ ಮೇಕಪ್ ಗಾಗಿ ಸಾಕಷ್ಟು ವೆಚ್ಚ ಮಾಡುತ್ತಾರೆ ಅನ್ನೋದು ಯುನಿವರ್ಸಲ್ ಟ್ರೂಥ್. ಆದರೆ ಆ ಮೇಕಪ್ ಐಟಮ್ಸ್ ನಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿ ಇಷ್ಟ ಪಡೋದು ಲಿಪ್ಸ್ಟಿಕ್. ಲಿಪ್ಸ್ಟಿಕ್ ಹಾಕಿಲ್ಲ ಅಂದರೆ ಎಷ್ಟೇ ಮೇಕಪ್ ಮಾಡಿದರು ಅದು ಅಪೂರ್ಣ ಅನಿಸುತ್ತೆ. ಆದರೆ, ಎಷ್ಟೇ ದುಬಾರಿಯ ಲಿಪ್ಸ್ಟಿಕ್ ಕೊಂಡರೂ ಕೂಡ ಕೆಲವೊಮ್ಮೆ ಅದು ಬಹಳ ಬೇಗ ಅಳಿಸಿಹೋಗುತ್ತದೆ. ಹಾಗಂತ ಹೋದಲ್ಲೆಲ್ಲಾ ಪದೇ ಪದೇ ಲಿಪ್ಸ್ಟಿಕ್ ಹಚ್ಚಿಕೊಳ್ಳುವುದು ಕೂಡ ಸಮಂಜಸವಲ್ಲ. ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನೀವು ಲಿಪ್ಸ್ಟಿಕ್ ಹಚ್ಚುವಾಗ ಒಂದೇ ಒಂದು ಸಣ್ಣ ಟಿಪ್ಸ್ ಅನುಸರಿಸಿದರೆ ಸಾಕು ನಿಮ್ಮ ತುಟಿಗಳಲ್ಲಿ ಲಿಪ್ಸ್ಟಿಕ್ ದೀರ್ಘಕಾಲದವರೆಗೂ ಉಳಿಯುತ್ತದೆ.
ಕೋಮಲ ತುಟಿಗಳಲ್ಲಿ ಲಿಪ್ಸ್ಟಿಕ್ ದೀರ್ಘಕಾಲದವರೆಗೂ ಉಳಿಯಲು ಈ ಸರಳ ಸಲಹೆ ಅನುಸರಿಸಿ:
ವಾಸ್ತವವಾಗಿ, ನೀವು ಮೇಕಪ್ ಮಾಡಲು ಬಳಸುವ ಫೇಸ್ ಪೌಡರ್ ಸಹಾಯದಿಂದ ನಿಮ್ಮ ಲಿಪ್ಸ್ಟಿಕ್ ಬೇಗನೆ ಅಳಿಸಿ ಹೋಗದಂತೆ ಮಾಡಬಹುದು. ಇದಕ್ಕಾಗಿ, ನೀವು ತುಟಿಗೆ ಲಿಪ್ಸ್ಟಿಕ್ ಹಚ್ಚಿದ ಬಳಿಕ ಅದರ ಮೇಲೆ ಒಂದು ಟಿಶ್ಯೂ ಪೇಪರ್ ಇಡಿ. ನಂತರ ಅದರ ಮೇಲೆ ನೀವು ಬಳಸುವ ಫೇಸ್ ಪೌಡರ್ ಅನ್ನು ಹಾಕಿರಿ. ಈ ರೀತಿ ಮಾಡುವುದರಿಂದ ಲಿಪ್ಸ್ಟಿಕ್ ತುಂಬಾ ಹೊತ್ತು ಉಳಿಯುತ್ತದೆ.
ಇದಲ್ಲದೆ, ನೀವು ಲಿಪ್ಸ್ಟಿಕ್ ಹಚ್ಚುವಾಗ ಲಿಪ್ ಲೈನರ್ ಬಳಸಿದರೆ ಲಿಪ್ಸ್ಟಿಕ್ ತುಟಿಯಲ್ಲಿ ದೀರ್ಘಕಾಲದವರೆಗೆ ಇರುವಂತೆ ಅದು ರಕ್ಷಿಸುತ್ತದೆ. ಅಲ್ಲದೇ ಲಿಪ್ಸ್ ಸ್ಟಿಕ್ ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಇದನ್ನೂ ಓದಿ- Beauty Tips: ತುಟಿಗಳ ಅಂದ ಹೆಚ್ಚಿಸಲು ಈ ರೀತಿ ಮಾಡಿ..
ತುಟಿಯ ಆರೈಕೆ ಹೇಗಿರಬೇಕು ?
ಯಾವುದೇ ಮೇಕಪ್ನ್ನು ರಿಮೋವ್ ಮಾಡುವಾಗ ತೆಂಗಿನ ಎಣ್ಣೆಯನ್ನ ಬಳಸಿ ;
ಹೌದು, ತೆಂಗಿನ ಎಣ್ಣೆಯಿಂದ ಮೇಕಪ್ ರಿಮೋವ್ ಮಾಡಿದರೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ಜೊತೆಗೆ ಮೇಕಪ್ ಪ್ರಾಡಕ್ಟ್ ಗಳಿಂದ ಉಂಟಾಗುವ ಹಾನಿಯನ್ನು ಕೂಡ ತಪ್ಪಿಸಬಹುದು. ನಿಮ್ಮ ತುಟಿಯ ಆರೈಕೆಯಲ್ಲಿಯೂ ಕೂಡ ತೆಂಗಿನ ಎಣ್ಣೆ ಪ್ರಯೋಜನಕಾರಿ ಆಗಿದೆ. ತುಟಿಗಳಿಗೆ ಕೊಬ್ಬರಿ ಎಣ್ಣೆಯನ್ನು ಅನ್ವಯಿಸುವುದರಿಂದ ತುಟಿ ಒಡೆಯುವುದಿಲ್ಲ.
ಲಿಪ್ ಬಾಮ್ ಬಳಸಿ :
ನೀವು ಪ್ರತಿಬಾರಿ ಲಿಪ್ಸ್ಟಿಕ್ ಬಳಸುವಾಗಲೂ ಲಿಪ್ ಬಾಮ್ ಬಳಸುವುದನ್ನು ಮರೆಯದಿರಿ. ಏಕೆಂದರೆ ಲಿಪ್ಸ್ಟಿಕ್ನಿಂದ ತುಟಿ ಕಪ್ಪಾಗುವ ಸಾದ್ಯತೆಗಳಿರುತ್ತವೆ. ಅಲ್ಲದೇ ಲಿಪ್ ಬಾಮ್ ಚಳಿಗಾಲದಲ್ಲಿ ತುಟಿ ಒಡೆಯದಂತೆ ರಕ್ಷಿಸುತ್ತದೆ. ಆದ್ದರಿಂದ ಲಿಪ್ ಬಾಮ್ ಬಳಸುವುದು ಒಳಿತು.
ಇದನ್ನೂ ಓದಿ- DARK LIPS: ಈ 5 ಕೆಟ್ಟ ಅಭ್ಯಾಸಗಳು ನಿಮ್ಮ ತುಟಿಗಳನ್ನು ಕಪ್ಪಾಗಿಸುತ್ತವೆ
ಉತ್ತಮ ಗುಣಮಟ್ಟದ ಲಿಪ್ಸ್ಟಿಕ್ ಖರೀದಿಸಿ :
ಉತ್ತಮ ಗುಣಮಟ್ಟದ ಲಿಪ್ಸ್ಟಿಕ್ ಖರೀದಿಸಿ. ಉತ್ತಮ ಗುಣಮಟ್ಟ ಎಂದರೆ ದುಬಾರಿ ಲಿಪ್ಸ್ಟಿಕ್ ಎಂದಲ್ಲ, ಒಳ್ಳೆ ಬ್ರಾಂಡೆಡ್ ಲಿಪ್ಸ್ಟಿಕ್ ಅನ್ನು ಖರೀದಿಸಿ. ಇದರಿಂದ ತುಟಿಯು ಸಂದರವಾಗಿರುವುದರ ಜೊತೆಗೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.