Signs Of High Cholesterol On Body Parts: ಕೆಟ್ಟ ಆಹಾರ ಪದ್ಧತಿ ಹಾಗೂ ಅವ್ಯವಸ್ಥಿತ ಜೀವನಶೈಲಿಯ ಕಾರಣ ಇತ್ತೀಚಿಗೆ ಜನರು ರೋಗಗಳ ಕಪಿಮುಷ್ಠಿಗೆ ಸಿಳುಕಿಕೊಳ್ಳುತ್ತಿದ್ದಾರೆ. ಈ ಕಾಯಿಲೆಗಳಲ್ಲಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆ ಇಂದು ಸಾಮಾನ್ಯವಾಗಿದೆ. ಕೊಲೆಸ್ಟ್ರಾಲ್ನಲ್ಲಿ ಎರಡು ವಿಧಗಳಿವೆ, ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ನಾವು ಇದನ್ನು ಎಚ್‌ಡಿಎಲ್ ಮತ್ತು ಎಲ್‌ಡಿಎಲ್ ಕೊಲೆಸ್ಟ್ರಾಲ್ ಎಂದೂ ಕರೆಯುತ್ತೇವೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಅನೇಕ ಇತರ ಪ್ರಮುಖ ಕಾಯಿಲೆಗಳ ಅಪಾಯ ಎದುರಾಗುತ್ತದೆ. ಹೀಗಾಗಿ ದೇಹದಲ್ಲಿ ಸಮತೋಲಿತ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದು ತುಂಬಾ ಮುಖ್ಯವಾಗಿದೆ. ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ, ರಕ್ತದ ಹರಿವಿನ ಮೇಲೆ ವಿಶೇಷ ಪರಿಣಾಮ ಉಂಟಾಗುತ್ತದೆ .
ಇಂತಹ ಪರಿಷ್ಟಿತಿಯಲ್ಲಿ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಲಕ್ಷಣಗಳು ಯಾವುವು ಎಂಬುದನ್ನು ನಾವು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿ ಬಿಡುತ್ತದೆ. ನಮ್ಮ ದೇಹದ ಅಂಗಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಸಮಯ ಇರುವಾಗಲೇ ನಾವು ಅವುಗಳನ್ನು ಅರಿತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಹಾಗಾದರೆ ದೇಹದ ಯಾವ ಭಾಗಗಳು ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣಗಳನ್ನು ಮೊದಲು ತೋರಿಸುತ್ತವೆ ತಿಳಿದುಕೊಳ್ಳೋಣ ಬನ್ನಿ,
ಕಣ್ಣುಗಳ ಮೇಲೆ ಪರಿಣಾಮ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ, ಮೊದಲನೆಯದಾಗಿ ಅದರ ಲಕ್ಷಣಗಳು ನಾವು ನಮ್ಮ ಕಣ್ಣುಗಳಲ್ಲಿ ಕಾಣಬಹುದು. ನೀವು ದೃಷ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದು ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತವಾಗಿದೆ ಎಂದು ಅರ್ಥಮಾಡಿಕೊಳ್ಳಿ. ವಾಸ್ತವದಲ್ಲಿ, ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ವ್ಯಕ್ತಿಯ ಕಣ್ಣುಗಳ ಕಾರ್ನಿಯಾದ ಹೊರ ಭಾಗದಲ್ಲಿ ಮೇಲಿನ ಮತ್ತು ಕೆಳಭಾಗದಲ್ಲಿ ನೀಲಿ ಅಥವಾ ಬಿಳಿ ಬಣ್ಣದ ಗುಮ್ಮಟದ ಆಕಾರವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
ಕೈಯಲ್ಲಿ ನೋವು
ಕೈಯಲ್ಲಿ ನೋವು ಅಧಿಕ ಕೊಲೆಸ್ಟ್ರಾಲ್ನ ಸಂಕೇತವಾಗಿರಬಹುದು. ನಿಮ್ಮ ಕೈಯಲ್ಲಿ ಆಗಾಗ್ಗೆ ನೋವು ಇದ್ದರೆ, ಅದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಳದ ಸಂಕೇತವಾಗಿದೆ. ವಾಸ್ತವದಲ್ಲಿ, ಸೆಲ್ಯುಲಾರ್ ತ್ಯಾಜ್ಯ, ಕೊಬ್ಬು-ಸಮೃದ್ಧ ಪದಾರ್ಥಗಳು ಮತ್ತು ಕ್ಯಾಲ್ಸಿಯಂನಿಂದ ಮಾಡಲ್ಪಟ್ಟ ನಮ್ಮ ಅಪಧಮನಿಗಳ ಒಳ ಪದರದಲ್ಲಿ ಪ್ಲೇಕ್ ಅಂದರೆ ಕೊಬ್ಬು ಸಂಗ್ರಹವಾದಾಗ. ಈ ಕಾರಣದಿಂದಾಗಿ, ರಕ್ತದ ಹರಿವು ಅಡಚಣೆಯಾಗುತ್ತದೆ. ಇದರಿಂದಾಗಿ ಕೈಗಳಲ್ಲಿ ನೋವು ಇರುತ್ತದೆ.
ಇದನ್ನೂ ಓದಿ-Cholesterol: ಹೈ ಕೊಲೆಸ್ಟ್ರಾಲ್ ನಿಂದ ಮುಕ್ತಿ ಪಡೆಯಲು ನಿತ್ಯ ಈ ಜ್ಯೂಸ್ ಸೇವಿಸಿ
ಚರ್ಮದ ಮೇಲೆ ಗುರುತುಗಳು
ಚರ್ಮದ ಮೇಲೆ ಯಾವುದೇ ಬದಲಾವಣೆ ಕಂಡರೆ ತಕ್ಷಣ ಎಚ್ಚೆತ್ತುಕೊಳ್ಳಿ, ಉದಾಹರಣೆಗೆ ಕಣ್ಣುಗಳ ಕೆಳಗೆ ಚರ್ಮದ ಬಣ್ಣ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗಿದ್ದರೆ, ಅದು ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತವಾಗಿದೆ. ಕೆಲವರ ಕಣ್ಣುಗಳ ಕೆಳಗೆ ನೀವು ಅಂತಹ ರೇಖೆಯನ್ನು ನೀವು ನೋಡಿರಬೇಕು. ಇದಲ್ಲದೇ ಅಂಗೈ ಮತ್ತು ಪಾದದ ಕೆಳಭಾಗದಲ್ಲಿ ಈ ರೀತಿಯ ಬಣ್ಣ ಅಥವಾ ಗೆರೆ ಕಂಡರೆ ಅದನ್ನು ಲಘುವಾಗಿ ಪರಿಗಣಿಸುವ ತಪ್ಪನ್ನು ಮಾಡಬೇಡಿ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಇದನ್ನೂ ಓದಿ-ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ರಾಮಬಾಣ ಈ ಪಾನೀಯಗಳು
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.