ಖ್ಯಾತ ಇತಿಹಾಸಕಾರ ಮುಶಿರುಲ್ ಹಸನ್ ಇನ್ನಿಲ್ಲ

ಖ್ಯಾತ ಇತಿಹಾಸಕಾರ ಮುಶಿರುಲ್ ಹಸನ್ (69) ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

Last Updated : Dec 10, 2018, 01:08 PM IST
ಖ್ಯಾತ ಇತಿಹಾಸಕಾರ ಮುಶಿರುಲ್ ಹಸನ್ ಇನ್ನಿಲ್ಲ  title=
Photo courtesy: Facebook

ನವದೆಹಲಿ: ಖ್ಯಾತ ಇತಿಹಾಸಕಾರ ಮುಶಿರುಲ್ ಹಸನ್ (69) ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಈ ಹಿಂದೆ 2014 ರಲ್ಲಿ ದೆಹಲಿಯಿಂದ ಮೆವಾತಗೆ ಹೋಗುವ ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ ಹಸನ್ ಅವರ ಆರೋಗ್ಯ ಕುಸಿದಿತ್ತು.ರಾಜಕೀಯ ತಜ್ಞರಾಗಿರುವ ಜೋಯಾ ಹಸನ್ ಇವರ ಪತ್ನಿಯಾಗಿದ್ದಾರೆ.

ಆಲಿಘಢ್ ಮುಸ್ಲಿಂ ವಿಶ್ವವಿದ್ಯಾನಿಲಯ ಮತ್ತು ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಅಧ್ಯಯನ ಮಾಡಿದ್ದ  ಹಸನ್ ಮುಂದೆ ಜಾಮಿಯ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದ ಉಪಕುಲಪತಿ. ಭಾರತದ ರಾಷ್ಟ್ರೀಯ ದಾಖಲೆಗಳ ಡೈರಕ್ಟರ್ ಜನರಲ್ ಮತ್ತು ಭಾರತೀಯ ಇತಿಹಾಸ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮುಸಿರುಲ್ ಇಸ್ಲಾಂ ಮತ್ತು ದಕ್ಷಿಣ ಏಷ್ಯಾದ ಮುಸ್ಲಿಮರ ಕುರಿತಾಗಿ ಬರೆದಿದ್ದಾರೆ. ದಾಖಲಿಸಿದ್ದಾರೆ. ಅವರ 'ಇಂಡಿಯಾ ಪಾರ್ಟಿಷನ್: ದ ಅದರ್ ಫೇಸ್ ಆಫ್ ಫ್ರೀಡಮ್,' ಪುಸ್ತಕವು ಭಾರತ-ಪಾಕ್ ವಿಭಜನೆ ಕುರಿತಾದ ಸಂಗತಿಗಳನ್ನು ದಾಖಲಿಸಿದೆ.ವೆನ್ ಸ್ಟೋನ್ ವಾಲ್ಸ್ ಕ್ರೈ ಎಂಬ ತನ್ನ ಪುಸ್ತಕದಲ್ಲಿ ಹಸನ್ ಅವರು ನೆಹರು ಜೈಲಿನ ಜೀವನದ ಅಜ್ಞಾತ ಸಂಗತಿಗಳ ಮೇಲೆ ಬೆಳಕು ಚಲ್ಲುತ್ತದೆ. 

ಈಗ ಮುಶಿರುಲ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಸೀತಾರಾಂ ಯೆಚೂರಿ" ಇತಿಹಾಸಕಾರ, ಶಿಕ್ಷಕ, ಕುಲಪತಿಯಾಗಿದ್ದ ಮುಶೀರ್ ಉಲ್ ಹಸನ್ ನಮ್ಮ ಸಿಂಕ್ರೆಟಿಕ್ ಸಂಸ್ಕೃತಿ ಉತ್ತಮ ಗುಣಗಳನ್ನು ಒಳಗೊಂಡಿದ್ದಾರೆ ಅವರು ನಮ್ಮ ಅರಿವಿನ ಆಕಾರ ಎಂದು ಸಂತಾಪ ವ್ಯಕ್ತಪಡಿಸಿದರು.

Trending News