ಬೆಂಗಳೂರು : ಮಾನವೀಯತೆ ಅನ್ನುವುದು ಎಲ್ಲವನ್ನೂ ಮೀರಿದ್ದು. ಈ ಭೂಮಿಯ ಮೇಲೆ ಪ್ರತಿಯಿಂದು ಜೀವಿಗೂ ಜೀವಿಸುವ ಹಕ್ಕಿದೆ. ಮಾತ್ರವಲ್ಲ ಪ್ರತಿಯಿಂದು ಜೀವಿಯ ಜೀವ ಕೂಡಾ ಅಮೂಲ್ಯವಾದದ್ದು ಎಂದು ಹೇಳಲಾಗುತ್ತದೆ. ಇದನ್ನೂ ಮನಗಂಡ ಬೆಂಗಳೂರಿನ ಟ್ರಾಫಿಕ್ ಪೊಲೀಸ್ ಒಬ್ಬರು, ಕಾಗೆಯನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಕಾಗೆಯ ಪ್ರಾಣ ಉಳಿಸುವ ಸಲುವಾಗಿ ಹಲವಾರು ಅಡಿ ಎತ್ತರದ ಹೋರ್ಡಿಂಗ್ ಬೋರ್ಡ್ ಅನ್ನು ಹತ್ತಿದ್ದಾರೆ. ಹೌದು ಈ ಬೋರ್ಡ್ ನಲ್ಲಿ ಕಾಗೆಯೊಂದು ಸಿಲುಕಿರುವುದನ್ನು ಕಂಡ ಟ್ರಾಫಿಕ್ ಪೊಲೀಸ್ ಸುರೇಶ್ ತನ್ನ ಜೀವದ ಹಂಗನ್ನು ತೊರೆದು ಅದರ ರಕ್ಷಣೆಗೆ ಮುಂದಾಗಿದ್ದಾರೆ. ಯಾವುದೇ ಸುರಕ್ಷತಾ ಸಿಬ್ಬಂದಿ ಇಲ್ಲದೆ ಎತ್ತರದ ಹೋಲ್ಡಿಂಗ್ ಬೋರ್ಡ್ ಮೇಲೆ ಹತ್ತಿ ಆ ಕಾಗೆಯನ್ನು ರಕ್ಷಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಕಾಗೆಯ ಜೀವಕ್ಕೂ ಬೆಲೆ ಕೊಟ್ಟ ಟ್ರಾಫಿಕ್ ಹೆಡ್ ಕಾನ್ಸಟೇಬಲ್ :
ಬೆಂಗಳೂರಿನ ಸಂಚಾರ ಪೊಲೀಸ್ ಉಪ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಟ್ರಾಫಿಕ್ ಹೆಡ್ ಕಾನ್ಸಟೇಬಲ್ ಸುರೇಶ್ ಹೋರ್ಡಿಂಗ್ ಮೇಲೆ ಹತ್ತುತ್ತಿರುವುದನ್ನು ಕಾಣಬಹುದು. ಟವರ್ ವೊಂದರಲ್ಲಿ ಗಾಳಿಪಟದ ದಾರ ಸಿಲುಕಿ ಒದ್ದಾಡುತ್ತಿರುವ ಕಾಗೆಯನ್ನು ಕೂಡಾ ಕಾಣಬಹುದು. ಹೋರ್ಡಿಂಗ್ ಹತ್ತಿದ ಟ್ರಾಫಿಕ್ ಪೊಲೀಸ್ ಕಾಗೆಯ ಕಾಲಿಗೆ ಸಿಕ್ಕಿಕೊಂಡಿದ್ದ ದಾರವನ್ನು ಬಿಚ್ಚಿ ಮತ್ತೆ ಕಾಗೆಯನ್ನು ಸ್ವತಂತ್ರವಾಗಿ ಹಾರಲು ಬಿಡುತ್ತಾರೆ.
ಇದನ್ನೂ ಓದಿ : ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪ್ರಥಮ ಮುದ್ರಣ ಪುಸ್ತಕಗಳ ಆಯ್ಕೆಗೆ ಅರ್ಜಿ ಆಹ್ವಾನ
ಇಲ್ಲಿದೆ ವಿಡಿಯೋ :
The hidden and unexplored side of a policemen. Well done Mr Suresh from @rajajinagartrps pic.twitter.com/D9XwJ60Npz
— Kuldeep Kumar R. Jain, IPS (@DCPTrWestBCP) December 30, 2022
ಇದನ್ನೂ ಓದಿ : ದೂರುದಾರನ ವಾಹನ ನೋಂದಣಿ ಮಾಡಿಕೊಡುವಂತೆ ಆರ್.ಟಿ.ಓ.ಗೆ ಗ್ರಾಹಕರ ಆಯೋಗ ಆದೇಶ
ವೈರಲ್ ಆಯಿತು ವಿಡಿಯೋ :
ವೀಡಿಯೋವನ್ನು ಒಂದು ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದ್ದು, 5,600ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಹಲವಾರು ಇಂಟರ್ನೆಟ್ ಬಳಕೆದಾರರು ಪೋಲಿಸ್ ಕಾನ್ಸ್ಟೇಬಲ್ ಧೈರ್ಯ ಮತ್ತು ನಿಸ್ವಾರ್ಥ ಭಾವವನ್ನು ಶ್ಲಾಘಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.