ಅತ್ತೆ ಮನೆಯಿಂದ ಪುರುಷರು ಈ ವಸ್ತುಗಳನ್ನು ಪಡೆದುಕೊಂಡರೆ ಬೆನ್ನು ಬಿಡದೆ ಕಾಡುತ್ತಾನೆ ರಾಹು!

ಸಾಮಾನ್ಯವಾಗಿ  ಮದುವೆ ವೇಳೆ ವರದಕ್ಷಿಣೆ ಪಡೆಯುತ್ತಾರೆ, ನೀಡುತ್ತಾರೆ. ಆದರೆ ಮದುವೆಯ ನಂತರ ಅತ್ತೆ ಮಾವನ ಮನೆಯಿಂದ ಕೆಲವು ವಸ್ತುಗಳನ್ನು ಪಡೆಯುವಾಗ ಪುರುಷರು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. 

Written by - Ranjitha R K | Last Updated : Jan 3, 2023, 11:23 AM IST
  • ಹುಡುಗರಿಗೆ ಅತ್ತೆ ಮಾವನ ಮನೆಯಲ್ಲಿ ವಿಶೇಷ ಗೌರವ ಸಿಗುತ್ತದೆ.
  • ಅಳಿಯನಿಗೆ ಅಲ್ಲೊಂದು ವಿಶೇಷ ಸ್ಥಾನ ಇದ್ದೇ ಇರುತ್ತದೆ.
  • ಪುರುಷರು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.
ಅತ್ತೆ ಮನೆಯಿಂದ ಪುರುಷರು ಈ ವಸ್ತುಗಳನ್ನು ಪಡೆದುಕೊಂಡರೆ ಬೆನ್ನು ಬಿಡದೆ ಕಾಡುತ್ತಾನೆ ರಾಹು!  title=
Negative Effects of Rahu

ಬೆಂಗಳೂರು : ಪ್ರತಿಯೊಬ್ಬರೂ ಉತ್ತಮ ಜೀವನ ಸಂಗಾತಿಯನ್ನು ಹೊಂದುವ ಕನಸು ಕಾಣುತ್ತಾರೆ. ಹೀಗೆ ಮನಸ್ಸು ಬಯಸಿದ ಸಂಗಾತಿ ಸಿಕ್ಕಿದ ಮೇಲೆ ಜೀವನವೇ ಬದಲಾಗುತ್ತದೆ. ಹುಡುಗರಿಗೆ ಮದುವೆಯ ನಂತರ ಅತ್ತೆ ಮಾವನ ಮನೆಯಲ್ಲಿ ವಿಶೇಷ ಗೌರವ ಸಿಗುತ್ತದೆ. ಅಳಿಯನಿಗೆ ಅಲ್ಲೊಂದು ವಿಶೇಷ ಸ್ಥಾನ ಇದ್ದೇ ಇರುತ್ತದೆ. ಆದರೆ, ಗ್ರಹಗಳ ಚಲನೆ ಯಾವಾಗ ಬದಲಾಗುತ್ತದೆ ಎಂದು ಹೇಳಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಎಚ್ಚರವಾಗಿರುವುದು ಬಹಳ ಮುಖ್ಯ. ಸಾಮಾನ್ಯವಾಗಿ ಮದುವೆ ವೇಳೆ ವರದಕ್ಷಿಣೆ ಪಡೆಯುತ್ತಾರೆ, ನೀಡುತ್ತಾರೆ. ಆದರೆ ಮದುವೆಯ ನಂತರ ಅತ್ತೆ ಮಾವನ ಮನೆಯಿಂದ ಕೆಲವು ವಸ್ತುಗಳನ್ನು ಪಡೆಯುವಾಗ ಪುರುಷರು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. 

ರಾಹು ಅತ್ತೆಯ ಕಡೆಯ ಅಂಶವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅತ್ತೆ-ಮಾವನ ಮನೆಗೆ ಹಾಳು ಮಾಡುವ ಕೆಲಸವನ್ನು ಯಾವತ್ತೂ ಮಾಡಬಾರದು. ಅದರಲ್ಲೂ ಯಾರ ಜಾತಕದಲ್ಲಿ ರಾಹುವಿನ ಸ್ಥಾನ ಕೆಟ್ಟದಾಗಿರುತ್ತದೆಯೋ ಅವರು ತುಂಬಾ ಜಾಗರೂಕರಾಗಿರಬೇಕು. ಅತ್ತೆ ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಳ್ಳಲೇ ಬಾರದು. 

ಇದನ್ನೂ ಓದಿ : Dream Interpretation: ತಾಯಿ ಲಕ್ಷ್ಮಿ ನಿಮ್ಮ ಮನೆಗೆ ಆಗಮಿಸುವ ಸಂಕೇತ ಈ ಕನಸುಗಳು

ಸ್ಟೀಲ್ ಪಾತ್ರೆಗಳು :
ಅತ್ತೆಯ ಮನೆಯಿಂದ ಯಾವುದೇ ಕಾರಣಕ್ಕೂ ಸ್ಟೀಲ್ ಪಾತ್ರೆಗಳನ್ನು ತೆಗೆದುಕೊಳ್ಳಬಾರದು. ಮದುವೆ ವೇಳೆ, ವರದಕ್ಷಿಣೆ ರೂಪದಲ್ಲಿ ಕೆಲವು ಹೆಣ್ಣು ಮಕ್ಕಳು  ಸ್ಟೀಲ್ ಪಾತ್ರೆಗಳನ್ನು ತರುತ್ತಾರೆ. ಆದರೆ, ರಾಹು ದುರ್ಬಲವಾದಾಗ  ಸ್ಟೀಲ್ ಪಾತ್ರೆಗಳನ್ನು ಪಡೆದುಕೊಳ್ಳದಿರುವುದು ಉತ್ತಮ. ಇಲ್ಲವಾದಲ್ಲಿ ರಾಹುವಿನ ಕಾರಣದಿಂದಾಗಿ, ಜೀವನದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಬಹುದು. 

ಸ್ಟೌವ್ :
ಅನೇಕರು ಹುಡುಗಿಯ ಮನೆಯವರು ಗ್ಯಾಸ್ ಸ್ಟೌವ್ ಕೂಡಾ ನೀಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಗಂಡಸರು ಅಪ್ಪಿತಪ್ಪಿಯೂ ಅತ್ತೆಯ ಮನೆಯಿಂದ ಸ್ಟೌವ್ ತೆಗೆದುಕೊಳ್ಳಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ಟೌವ್ ತೆಗೆದುಕೊಂಡು ಬರುವುದು ಎಂದರೆ ಹೊಸ ಮನೆಗೆ ಹುಡುಗಿ ಪ್ರವೇಶ ಮಾಡುತ್ತಿದ್ದಂತೆಯೇ, ಒಲೆಯನ್ನು ಬೇರ್ಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ : Importance Of Coconut: ನೀವು ಮಾಡುವ ಈ ಸಣ್ಣ ಉಪಾಯದಿಂದ ನಿಮ್ಮ ಮನೆ ಧನ-ಧಾನ್ಯದಿಂದ ತುಂಬಿ ತುಳುಕುತ್ತದೆ

ಮರ :
ಹೌದು, ಅತ್ತೆಯ ಮನೆಯಿಂದ ಮರದ ವಸ್ತುವನ್ನು ತೆಗೆದುಕೊಳ್ಳುವುದರಿಂದ ರಾಹುವಿನ ಕೋಪಕ್ಕೆ ಗುರಿಯಾಗಬೇಕಾಗಬಹುದು. ಹೀಗೆ ಅತ್ತೆ ಮನೆಯಿಂದ ಮರದ ಸಾಮಗ್ರಿಗಳನ್ನು ಪಡೆದುಕೊಂಡರೆ, ಅತ್ತೆ ಮನೆಯೊಂದಿಗಿನ ಸಂಬಂಧ ಹಾಳಾಗಲಿದೆ. ಹಾಗಾಗಿ ಅತ್ತೆಯ ಮನೆ ಕಡೆಯಿಂದ ಮರದ ಸಾಮಗ್ರಿಗಳನ್ನು ಎಂದಿಗೂ ತೆಗೆದುಕೊಳ್ಳಬಾರದು. 

ರಾಹು ಮತ್ತು ಕೇತು ಇಬ್ಬರೂ ದುಷ್ಟ ಗ್ರಹಗಳಲ್ಲಿ ಬರುತ್ತಾರೆ. ಮೊದಲೇ ದುಷ್ಟ ಗ್ರಹ ಅದರ ಜೊತೆ ಅಶುಭ ಸ್ಥಾನದಲ್ಲಿದ್ದರೆ ಮಾನಸಿಕ ನೋವಿಗೆ ಕಾರಣರಾಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಮತ್ತು ಕೇತುವಿನ ಸ್ಥಾನ ಹುಡುಗಿಯ ಜಾತಕದಲ್ಲಿ ಅಶುಭವಾಗಿದ್ದರೆ, ಮದುವೆಯ ನಂತರದ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಇದನ್ನೂ ಓದಿ : Astrology: ಚಪಾತಿ ಲಟ್ಟಿಸುವಾಗ ಬರುವ ಈ ಸದ್ದು ನಿಮ್ಮನ್ನು ದರಿದ್ರರನ್ನಾಗಿಸಬಹುದು, ಮರೆತೂ ಈ ತಪ್ಪು ಮಾಡಬೇಡಿ

ಪರಿಹಾರಗಳು ಯಾವುವು ? :
ರಾಹುವನ್ನು ಶಾಂತವಾಗಿರಿಸಲು ಶಿವನನ್ನು ಆರಾಧಿಸಬೇಕು. ಹಣೆಯ ಮೇಲೆ ಶ್ರೀಗಂಧದ ತಿಲಕವನ್ನು ಹಚ್ಚಿ ಮತ್ತು ಮನೆಯಲ್ಲಿ ಬೆಳ್ಳಿಯ ಆನೆಯನ್ನು ಇರಿಸಿ. ಮತ್ತೊಂದೆಡೆ, ಕೇತುವಿಗೆ, ಹಸು ಅಥವಾ ನಾಯಿಗೆ ಆಹಾರ ನೀಡಬೇಕು. ಗಣಪತಿಯನ್ನು ಪೂಜಿಸಬೇಕು.  

 

 ( ಸೂಚನೆ : ಇಲ್ಲಿ ನೀಡಲಾದ ಲೇಖನ ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News