ಒಂದೇ ಗುಡಿಯಲ್ಲಿ ಅಪ್ಪು-ಅಂಬಿ ಪುತ್ಥಳಿ : ಸುಮಲತಾ, ಅಶ್ವಿನಿಯವರಿಂದ ನಾಳೆ ಉದ್ಘಾಟನೆ

ರೆಬಲ್‌ ಸ್ಟಾರ್‌ ಅಂಬರೀಶ್‌ ಮತ್ತು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ದೈಹಿಕವಾಗಿ ದೂರವಾಗಿದ್ದರೂ ಸಹ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಅವರು ಸದಾ ಅಮರ. ಇದೀಗ ಪುನೀತ್‌ ರಾಜ್‌ಕುಮಾರ್‌ ಮತ್ತು ಅಂಬರೀಷ್‌ ಅವರ ಅಭಿಮಾನಿಗಳು ಒಂದೇ ಗುಡಿಯಲ್ಲಿ ಇಬ್ಬರು ಮೇರು ನಟರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. 

Written by - Krishna N K | Last Updated : Nov 23, 2022, 05:48 PM IST
  • ರೆಬಲ್‌ ಸ್ಟಾರ್‌ ಅಂಬರೀಶ್‌ ಮತ್ತು ಪವರ್‌ ಸ್ಟಾರ್‌ ಪುನೀತ್‌ ಪುತ್ಥಳಿ ನಿರ್ಮಾಣ
  • ಒಂದೇ ಗುಡಿಯಲ್ಲಿ ಅಂಬಿ-ಪುನೀತ್‌ಗೆ ಪೂಜೆ
  • ಅಂಬಿ-ಅಪ್ಪು ಗುಡಿ ನಿರ್ಮಿಸಿದ ಡಿ.ಹೊಸೂರು ಗ್ರಾಮದ ಅಪ್ಪು ಮತ್ತು ಅಂಬಿ ಫ್ಯಾನ್ಸ್
ಒಂದೇ ಗುಡಿಯಲ್ಲಿ ಅಪ್ಪು-ಅಂಬಿ ಪುತ್ಥಳಿ : ಸುಮಲತಾ, ಅಶ್ವಿನಿಯವರಿಂದ ನಾಳೆ ಉದ್ಘಾಟನೆ title=

ಮಂಡ್ಯ : ರೆಬಲ್‌ ಸ್ಟಾರ್‌ ಅಂಬರೀಶ್‌ ಮತ್ತು ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ದೈಹಿಕವಾಗಿ ದೂರವಾಗಿದ್ದರೂ ಸಹ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಅವರು ಸದಾ ಅಮರ. ಇದೀಗ ಪುನೀತ್‌ ರಾಜ್‌ಕುಮಾರ್‌ ಮತ್ತು ಅಂಬರೀಷ್‌ ಅವರ ಅಭಿಮಾನಿಗಳು ಒಂದೇ ಗುಡಿಯಲ್ಲಿ ಇಬ್ಬರು ಮೇರು ನಟರ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಅಭಿಮಾನ ಮೆರೆದಿದ್ದಾರೆ. 

ಮದ್ದೂರು ತಾಲೂಕಿನ ಡಿ.ಹೊಸೂರು ಗ್ರಾಮದ ಅಪ್ಪು ಮತ್ತು ಅಂಬಿ ಫ್ಯಾನ್ಸ್ ಇಂತಹ ಅಪರೂಪದ ಕಾರ್ಯಕ್ಕೆ ಸಾಕ್ಷಿಯಾಗಿದ್ದಾರೆ. ಒಂದೇ ಗುಡಿಯಲ್ಲಿ ದಿವಂಗತ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಮತ್ತು ರೆಬಲ್‌ ಸ್ಟಾರ್‌ ಅಂಬರೀಷ್‌ ಅವರ ಪುತ್ಥಳಿಗಳನ್ನು ನಿರ್ಮಿಸಿದ್ದಾರೆ. 12 ಲಕ್ಷ ರೂ. ವೆಚ್ಚದಲ್ಲಿ ಈ ಗುಡಿಯನ್ನು ಕಟ್ಟಲಾಗಿದೆ. ಅಲ್ಲದೆ, ನಾಳೆ ಸಂಜೆ ಇಬ್ಬರ ಪುತ್ಥಳಿಗಳನ್ನು ಸಂಸದೆ ಸುಮಲತಾ ಹಾಗೂ ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರು ಅನಾವರಣಗೊಳಿಸಲಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಓಟಿಟಿಯಲ್ಲಿ ಕನ್ನಡಿಗನ ʼಕಾಂತಾರʼದ ಅಬ್ಬರ ಶುರು..!

ಒಬ್ಬರ ನಟರನ್ನು ಕಂಡರೆ ಇನ್ನೊಬ್ಬ ನಟನ ಅಭಿಮಾನಿಗಳಿಗೆ ಆಗದ ಈ ಕಾಲದಲ್ಲಿ ಒಗ್ಗಟ್ಟಿನಿಂದ ಇಬ್ಬರು ನಟರ ಅಭಿಮಾನಿಗಳಿಂದ ನಿರ್ಮಾಣ ಮಾಡಿರುವ ಅಪ್ಪು-ಅಂಬಿ ಗುಡಿ ನಿಜಕ್ಕೂ ಹೆಮ್ಮೆಯ ವಿಷಯ. ಇನ್ನು ಅಂಬರೀಷ್‌ ಮತ್ತು ಪುನೀತ್‌ ಅವರ ನಡುವೆ ಇದ್ದ ಬಾಂಧವ್ಯದ ಕುರಿತು ಎಲ್ಲರಿಗೂ ತಿಳಿದಿದೆ. ಅಲ್ಲದೆ, ಪುನೀತ್‌ ಅವರು ಸುಮಲತಾ ಅವರನ್ನು ಮದುವೆಯಾಗುತ್ತೇನೆ ಎಂದು ಚಿಕ್ಕವಯಸ್ಸಿನಲ್ಲಿ ಹೇಳುತ್ತಿದ್ದರು ಎಂದು ಸ್ವತಃ ಸುಮಲತಾ ಅವರು ಹೇಳಿಕೊಂಡಿದ್ದರು. ಅಷ್ಟು ಬಾಂಧವ್ಯ ಅಂಬಿ ಫ್ಯಾಮಿಲಿ ಜೊತೆ ಅಪ್ಪು ಅವರಿಗಿತ್ತು.

ಇನ್ನು ಅಭಿಮಾನಗಳು ಅಂಬರೀಷ್‌ ಅವರನ್ನು ಪ್ರೀತಿಯಿಂದ ʼಮಂಡ್ಯದ ಗಂಡುʼ, ʼಕಲಿಯುಗದ ಕರ್ಣʼ ಎಂದು ಕರೆಯುತ್ತಿದ್ದರು. ಚಿತ್ರರಂಗದ ಆಗು ಹೋಗುಗಳಿಗೆ ನೇರವಾಗುತ್ತಿದ್ದ ಅಂಬರೀಷ ಅವರು ಕಂಡ್ರೆ ಸ್ಯಾಂಡಲ್‌ವುಡ್‌ ಮಂದಿಗೆ ಒಂದು ಗೌರವವಿತ್ತು. ಪುನೀತ್‌ ರಾಜಕುಮಾರ್‌ ಅವರ ಬಗ್ಗೆ ಹೇಳುವುದೇ ಬೇಡ, ಅವರು ಅಭಿಮಾನಿಗಳನ್ನು ತಮ್ಮ ಮನೆಯ ದೇವರ ರೂಪದಲ್ಲಿ ಕಂಡ ವೀರ ಕನ್ನಡಿಗ. ಸದಾ ಜನರ ಕಷ್ಟ ನಷ್ಟಕ್ಕೆ ಮಿಡಿಯುತ್ತಿದ್ದ ಜೀವ. ಸದ್ಯ ಇಬ್ಬರ ಮೂರ್ತಿಗಳು ಒಂದೇ ಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವುದು ನಿಜಕ್ಕೂ ಖುಷಿ ವಿಚಾರ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News