ಈ ದಿನ ಖಾತೆ ಸೇರುವುದು ಪಿಎಂ ಕಿಸಾನ್ 13ನೇ ಕಂತಿನ ಹಣ.! ಟ್ವೀಟ್ ಮೂಲಕ ರೈತರಿಗೆ ಪ್ರಮುಖ ಮಾಹಿತಿ ನೀಡಿದ ಪ್ರಧಾನಿ

  PM Kisan 13th Installment Update: ಪಿಎಂ ಕಿಸಾನ್ ಯೋಜನೆಯ 12 ನೇ ಕಂತನ್ನು ರೈತರ ಖಾತೆಗೆ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿನ  2000 ರೂಪಾಯಿ ರೈತರ ಖಾತೆಗೆ ವರ್ಗಾವಣೆಯಾಗುತ್ತಿದೆ.

Written by - Ranjitha R K | Last Updated : Nov 17, 2022, 12:15 PM IST
  • ರೈತರ ಖಾತೆ ಸೇರುತ್ತಿದೆ ಪಿಎಂ ಕಿಸಾನ್ 12ನೇ ಕಂತು
  • ಯಾವಾಗ ಬಿಡುಗಡೆಯಾಗಲಿದೆ 13ನೇ ಕಂತಿನ ಹಣ
  • ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಹೇಗೆ ?
 ಈ ದಿನ ಖಾತೆ ಸೇರುವುದು  ಪಿಎಂ ಕಿಸಾನ್ 13ನೇ ಕಂತಿನ ಹಣ.!  ಟ್ವೀಟ್ ಮೂಲಕ  ರೈತರಿಗೆ ಪ್ರಮುಖ ಮಾಹಿತಿ ನೀಡಿದ ಪ್ರಧಾನಿ    title=
PM Kisan 13th Installment Update

PM Kisan 13th Installment Update : ಪಿಎಂ ಕಿಸಾನ್ ಯೋಜನೆಯ 12 ನೇ ಕಂತನ್ನು ರೈತರ ಖಾತೆಗೆ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿನ  2000 ರೂಪಾಯಿ ರೈತರ ಖಾತೆಗೆ ವರ್ಗಾವಣೆಯಾಗುತ್ತಿದೆ.

ಕೇಂದ್ರ ಸರ್ಕಾರವು ನಡೆಸುತ್ತಿರುವ ಈ ಯೋಜನೆಯು ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ.  ಈ ಯೋಜನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅನೇಕ ಕಾರ್ಯಕ್ರಮಗಳಲ್ಲಿ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ,  'ದೇಶವು ನಮ್ಮ ರೈತರ ಬಗ್ಗೆ ಹೆಮ್ಮೆಪಡುತ್ತದೆ. ಅವರು ಎಷ್ಟು ಬಲಶಾಲಿಗಳಾಗಿರುತ್ತಾರೆಯೋ ನವ ಭಾರತವು ಅಷ್ಟೇ ಸಮೃದ್ಧವಾಗಿರುತ್ತದೆ ಎಂದಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬಂಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿ ನೀಡುತ್ತಿರುವುದು ಖುಷಿ ತಂದಿದೆ ಎಂದು ಬರೆದುಕೊಂಡಿದ್ದಾರೆ. 

ಇದನ್ನೂ ಓದಿ : ಇನ್ನೆರಡು ದಿನಗಳಲ್ಲಿ ಪೂರೈಸಿಕೊಳ್ಳಿ ಬ್ಯಾಂಕ್ ಕೆಲಸ, ದೇಶಾದ್ಯಂತ ಮುಷ್ಕರದಿಂದ ಎಟಿಎಂ ಸೇವೆಗಳ ಮೇಲೂ ಬೀರುವುದು ಪರಿಣಾಮ

13ನೇ ಕಂತಿನ ಹಣ ಯಾವಾಗ ಬರುತ್ತದೆ? :
ಪಿಎಂ ಕಿಸಾನ್‌ನ ಮುಂದಿನ ಕಂತು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಯೋಜನೆಯಡಿಯಲ್ಲಿ, ವರ್ಷದ ಮೊದಲ ಕಂತನ್ನು ಏಪ್ರಿಲ್ 1 ರಿಂದ ಜುಲೈ 31 ರವರೆಗೆ ರೈತರಿಗೆ ನೀಡಲಾಗುತ್ತದೆ. ಎರಡನೇ ಕಂತನ್ನು ಆಗಸ್ಟ್ 1 ರಿಂದ ನವೆಂಬರ್ 30 ರವರೆಗೆ ನೀಡಲಾಗುತ್ತದೆ. ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ. ಇದರ ಪ್ರಕಾರ ಪಿಎಂ ಕಿಸಾನ್ ನ 13ನೇ ಕಂತು ಮುಂದಿನ ತಿಂಗಳು ರೈತರ ಖಾತೆ  ಸೇರುವ ನಿರೀಕ್ಷೆಯಿದೆ. 

ಈ ಯೋಜನೆಯಡಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದನ್ನು ತ್ವರಿತವಾಗಿ ಪರಿಹರಿಸಿಕೊಳ್ಳಿ:
ಇದಕ್ಕಾಗಿ ನೀವು ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಮೇಲ್ ಐಡಿಗೆ ಮೇಲ್ ಮಾಡುವ ಮೂಲಕ  ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. 
- ಪಿಎಂ ಕಿಸಾನ್ ಅವರ ಸಹಾಯವಾಣಿ ಸಂಖ್ಯೆ- 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಂಪರ್ಕಿಸಬಹುದು. 
-ನಿಮ್ಮ ದೂರನ್ನು  pmkisan-ict@gov.in ಗೆ ಮೇಲ್ ಮಾಡುವ ಮೂಲಕ ಕೂಡಾ ಬಗೆಹರಿಸಿಕೊಳ್ಳಬಹುದು. 
- ಇಲ್ಲಿಯವರೆಗೆ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೆ, ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ ನೋಂದಾಯಿಸಿ. 

ಇದನ್ನೂ ಓದಿ : ಬೆಸ್ಕಾಂ ಗ್ರಾಹಕರೇ ಎಚ್ಚರ, ಎಚ್ಚರ! ವಿದ್ಯುತ್ ಬಿಲ್ ಪಾವತಿ ವಿಳಂಬವಾದರೆ ಕರೆಂಟ್ ಶಾಕ್!

ಈ ರೀತಿಯ  ಸ್ಟೇಟಸ್ ಚೆಕ್ ಮಾಡಿಕೊಳ್ಳಿ : 
1. ಇದಕ್ಕಾಗಿ ನೀವು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
2. ಇದರ ನಂತರ  ಫಾರ್ಮರ್ಸ್ ಕಾರ್ನರ್  ಮೇಲೆ ಕ್ಲಿಕ್ ಮಾಡಿ.
3. ಈಗ ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
4. ಈಗ ನಿಮ್ಮ ಮುಂದೆ ಹೊಸ  ಪೇಜ್ ತೆರೆದುಕೊಳ್ಳುತ್ತದೆ.
5. ಇಲ್ಲಿ  ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6.  ಇಷ್ಟಾದ ಮೇಲೆ ನಿಮ್ಮ ಸ್ಟೇಟಸ್ ಬಗ್ಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News