ವಿನಾಯಕ ಚತುರ್ಥಿ 2022: ಇಲ್ಲಿದೆ ಪೂಜೆ ವಿಧಾನ, ಮಹತ್ವ ಮತ್ತು ಪ್ರಯೋಜನ

ಪ್ರತಿ ತಿಂಗಳ ಎರಡೂ ಚತುರ್ಥಿ ದಿನಾಂಕವನ್ನು ಗಣಪತಿಗೆ ಸಮರ್ಪಿಸಲಾಗುತ್ತದೆ. ಈ ದಿನ ನಿಯಮಾನುಸಾರ ಪೂಜಿಸುವುದರಿಂದ ಗಣಪತಿಯ ಅನುಗ್ರಹ ದೊರೆಯುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ.  

Written by - Puttaraj K Alur | Last Updated : Apr 30, 2022, 06:38 AM IST
  • ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ
  • ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ
  • ಈ ದಿನ ಪೂರ್ಣ ಭಕ್ತಿಯಿಂದ ಗಣೇಶನ ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ
ವಿನಾಯಕ ಚತುರ್ಥಿ 2022: ಇಲ್ಲಿದೆ ಪೂಜೆ ವಿಧಾನ, ಮಹತ್ವ ಮತ್ತು ಪ್ರಯೋಜನ title=
ವಿನಾಯಕ ಚತುರ್ಥಿ 2022

ನವದೆಹಲಿ: ಪ್ರತಿ ತಿಂಗಳ ಚತುರ್ಥಿ ಮತ್ತು ವಾರದ ಬುಧವಾರವು ಗಣೇಶನಿಗೆ ಸಮರ್ಪಿತವಾಗಿದೆ. ಪ್ರತಿ ತಿಂಗಳು 2 ಚತುರ್ಥಿಗಳು ಬರುತ್ತವೆ. ಕೃಷ್ಣ ಪಕ್ಷದ ಚತುರ್ಥಿಯನ್ನು ಸಂಕಷ್ಟ ಚತುರ್ಥಿ ಎಂದು ಕರೆಯಲಾಗುತ್ತದೆ. ಅದೇ ರೀತಿ ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನಾಂಕವು ಮೇ 4ರ ಬುಧವಾರದಂದು ಬೀಳುತ್ತಿದೆ. ವಿನಾಯಕ ಚತುರ್ಥಿಯ ದಿನದಂದು ವಿಧಿ ವಿಧಾನಗಳೊಂದಿಗೆ ಗಣಪತಿಯನ್ನು ಪೂಜಿಸಲಾಗುತ್ತದೆ. ಈ ದಿನದಂದು ನಿಜವಾದ ಹೃದಯ ಮತ್ತು ಪೂರ್ಣ ಭಕ್ತಿಯಿಂದ ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಇಷ್ಟಾರ್ಥಗಳನ್ನು ಪೂರೈಸುತ್ತವೆ ಎಂದು ನಂಬಲಾಗಿದೆ.

ಜ್ಯೋತಿಷಿಗಳ ಪ್ರಕಾರ ವಿನಾಯಕ ಚತುರ್ಥಿಯಂದು ಮಧ್ಯಾಹ್ನ ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಚಂದ್ರನ ದರ್ಶನವನ್ನು ನಿಷೇಧಿಸಲಾಗಿದೆ. ಅದೇ ಸಮಯದಲ್ಲಿ ಸಂಕಷ್ಟಿ ಚತುರ್ಥಿಯ ಉಪವಾಸದಲ್ಲಿ ಚಂದ್ರ ದರ್ಶನದ ನಂತರವೇ ಉಪವಾಸ ಮುರಿಯುತ್ತಾರೆ. ಈ ದಿನ ಅಪ್ಪಿತಪ್ಪಿಯೂ ಚಂದ್ರನನ್ನು ಕಂಡರೆ ಸುಳ್ಳು ಕಳಂಕ ಬರುತ್ತದೆ ಎಂಬ ನಂಬಿಕೆ ಇದೆ. ವೈಶಾಖ ಮಾಸದ ವಿನಾಯಕ ಚತುರ್ಥಿಯ ದಿನಾಂಕ, ಶುಭ ಮುಹೂರ್ತ ಮತ್ತು ಮಹತ್ವದ ಬಗ್ಗೆ ತಿಳಿದುಕೊಳ್ಳಿರಿ.

ಇದನ್ನೂ ಓದಿ: ಇಂದಿನಿಂದ ಈ ರಾಶಿಯವರಿಗೆ ಏಳೂವರೆ ಮತ್ತು ಎರಡೂವರೆ ವರ್ಷದ ಶನಿ ಕಾಟ ಆರಂಭ

ವಿನಾಯಕ ಚತುರ್ಥಿ 2022 ದಿನಾಂಕ

ಪಂಚಾಗದ ಪ್ರಕಾರ ವೈಶಾಖ ಮಾಸದ ವಿನಾಯಕ ಚತುರ್ಥಿ ದಿನಾಂಕವು ಬುಧವಾರ, ಮೇ 04ರಂದು ಬೆಳಿಗ್ಗೆ 07:32ಕ್ಕೆ ಪ್ರಾರಂಭವಾಗಿ ಮೇ 05ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಕೊನೆಗೊಳ್ಳುತ್ತದೆ. ಉದಯತಿಥಿಯ ಆಧಾರದ ಮೇಲೆ ಮೇ 4ರಂದು ಚತುರ್ಥಿ ತಿಥಿಯ ಉಪವಾಸವನ್ನು ಆಚರಿಸಲಾಗುವುದು.

ವಿನಾಯಕ ಚತುರ್ಥಿ 2022ರ ಪೂಜಾ ಮುಹೂರ್ತ

ವಿನಾಯಕ ಚತುರ್ಥಿಯಂದು ಮಧ್ಯಾಹ್ನ ಪೂಜೆ ಮಾಡಬೇಕು ಎಂಬ ನಂಬಿಕೆ ಇದೆ. ಈ ದಿನ ಬೆಳಗ್ಗೆ 10.58ರಿಂದ ಮಧ್ಯಾಹ್ನ 01.38ರವರೆಗೆ ಪೂಜೆಯ ಶುಭ ಮುಹೂರ್ತ ನಡೆಯಲಿದೆ. ವಿನಾಯಕ ಚತುರ್ಥಿಯನ್ನು ಶುಭ ಸಮಯದಲ್ಲಿ ಪೂಜಿಸಿದರೆ ಒಳಿತಾಗಲಿದೆ. ಈ ದಿನವು ಬುಧವಾರವಾಗಿರುವುದರಿಂದ ಇದು ಇನ್ನೂ ಉತ್ತಮ ದಿನವಾಗಿದೆ. ಏಕೆಂದರೆ ಬುಧವಾರ ಗಣೇಶನಿಗೆ ಸಮರ್ಪಿತವಾಗಿದೆ.

ವಿನಾಯಕ ಚತುರ್ಥಿ ದಿನವೇ ಸರ್ವಾರ್ಥ ಸಿದ್ಧಿಯೋಗ

ಈ ಬಾರಿಯ ವೈಶಾಖ ಮಾಸದ ವಿನಾಯಕ ಚತುರ್ಥಿ ಸರ್ವಾರ್ಥ ಸಿದ್ಧಿ ಯೋಗದಲ್ಲಿ ಬೀಳುತ್ತಿದೆ. ಈ ಯೋಗದಲ್ಲಿ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಈ ಇಡೀ ದಿನ ಸರ್ವಾರ್ಥ ಸಿದ್ಧಿಯೋಗ ಮತ್ತು ರವಿಯೋಗಕ್ಕೆ ಉತ್ತಮವಾಗಿದೆ. ಆದರೆ, ಈ ದಿನ ಅಭಿಜಿತ್ ಮುಹೂರ್ತ ಆಗಿಲ್ಲ. ನೀವು ಕೆಲವು ಕೆಲಸಗಳನ್ನು ಮಾಡಲು ಯೋಚಿಸುತ್ತಿದ್ದರೆ, ಈ ಯೋಗದಲ್ಲಿ ಕೆಲಸ ಮಾಡುವುದು ಉತ್ತಮ. ಈ ಯೋಗದಲ್ಲಿ ಮಾಡಿದ ಕೆಲಸಗಳು ಸುಗಮವಾಗಿ ಪೂರ್ಣಗೊಳ್ಳುತ್ತವೆ. 

ಇದನ್ನೂ ಓದಿ: 1000 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಅದ್ಭುತ ಸಂಯೋಗ ; ಗ್ರಹಗಳ ಈ ಸ್ಥಿತಿ ಯಾವುದರ ಮುನ್ಸೂಚನೆ ?

ವಿನಾಯಕ ಚತುರ್ಥಿಯ ಪೂಜಾ ವಿಧಾನ

ವಿನಾಯಕ ಚತುರ್ಥಿಯ ದಿನ ಗಣಪತಿಯನ್ನು ಪೂಜಿಸಬೇಕೆಂಬ ನಿಯಮವಿದೆ. ಈ ದಿನ ಗಣೇಶನಿಗೆ ಕೆಂಪು ಹೂವುಗಳು, ಮೋದಕ, ಅಕ್ಷತೆ, ಶ್ರೀಗಂಧ, ಲಡ್ಡು, ಧೂಪ, ದೀಪ ಇತ್ಯಾದಿಗಳಿಂದ ಪೂಜಿಸಬೇಕು. ವಿನಾಯಕ ಚತುರ್ಥಿಯ ದಿನದಂದು ಉಪವಾಸ ಮಾಡುವವರು ಉಪವಾಸದ ಕಥೆಯನ್ನು ಓದಬೇಕು ಅಥವಾ ಕೇಳಬೇಕು. ಪೂಜೆಯ ನಂತರ ಗಣೇಶನಿಗೆ ಆರತಿ ಮಾಡಬೇಕು. ಇದರ ನಂತರ ಗಣೇಶ ಸ್ತುತಿ ಅಥವಾ ಮಂತ್ರವನ್ನು ಪಠಿಸಬೇಕು. ಗಣಪಣ ನೆಚ್ಚಿನ ಮೋದಕ ಅಥವಾ ಲಡ್ಡುಗಳನ್ನು ಅರ್ಪಿಸಬೇಕು. ಈ ವ್ರತವನ್ನು ಆಚರಿಸುವುದರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಸಂತೋಷ, ಅದೃಷ್ಟ ಮತ್ತು ಸಮೃದ್ಧಿಯ ಬೆಳವಣಿಗೆಯೂ ನಿಮಗೆ ಲಭಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News