Vastu Shastra: ಮನೆಯಲ್ಲಿರುವ ಇಂತಹ ವಸ್ತುಗಳಿಂದ ಧನಹಾನಿ

Vastu Shastra: ಇಂದಿನ ಕಾಲದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಾನು ಸಾಕಷ್ಟು ಹಣವನ್ನು ಹೊಂದಬೇಕೆಂದು ಬಯಸುತ್ತಾನೆ. ವಾಸ್ತವವಾಗಿ, ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಹಣದ ಅಗತ್ಯವಿದೆ. ಈ ಭೌತಿಕ ಯುಗದಲ್ಲಿ ಗೌರವ ಸಂಪತ್ತಿನ ಮೇಲೆ ಅವಲಂಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

Written by - Yashaswini V | Last Updated : Feb 8, 2022, 12:25 PM IST
  • ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಯಾರಿಗೆ ತಾನೇ ಇರುವುದಿಲ್ಲ
  • ಆದರೆ ಹಲವು ಬಾರಿ ಆರ್ಥಿಕ ಸಮಸ್ಯೆಗಳಿಗೆ ವಾಸ್ತು ದೋಷಗಳು ಕಾರಣವಿರಬಹುದು
  • ಮನೆಯಲ್ಲಿರುವ ಕೆಲವು ವಸ್ತುಗಳಿಂದಲೂ ಹಣದ ನಷ್ಟ ಉಂಟಾಗುತ್ತದೆ
Vastu Shastra: ಮನೆಯಲ್ಲಿರುವ ಇಂತಹ ವಸ್ತುಗಳಿಂದ ಧನಹಾನಿ title=
Vastu Tips For Money

Vastu Shastra: 'ಹಣ', ಹಣ ಇದ್ದರೆ ಜೀವನ. ಹಣ ಇದ್ದರೆ ಎಲ್ಲವೂ ಇದ್ದಂತೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಇಂದಿನ ಕಾಲದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಾನು ಸಾಕಷ್ಟು ಹಣವನ್ನು ಹೊಂದಬೇಕೆಂದು ಬಯಸುತ್ತಾನೆ. ವಾಸ್ತವವಾಗಿ, ಸಮಾಜದಲ್ಲಿ ಉತ್ತಮ ಜೀವನ ಸಾಗಿಸಲು ಹಣದ ಅಗತ್ಯವಿದೆ. ಈ ಭೌತಿಕ ಯುಗದಲ್ಲಿ ಗೌರವ ಸಂಪತ್ತಿನ ಮೇಲೆ ಅವಲಂಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಬಹುಶಃ ಈ ಕಾರಣಕ್ಕಾಗಿಯೇ ಮನುಷ್ಯ ಹಣ ಸಂಪಾದಿಸಲು ಹಗಲಿರುಳು ಪ್ರಯತ್ನಿಸುತ್ತಾನೆ. ಆದರೆ ಕೆಲವೊಮ್ಮೆ ಸಾಕಷ್ಟು ಶ್ರಮಿಸಿ ಹಣ ಸಂಪಾದಿಸಿದರೂ ಕೈಯಲ್ಲಿ ಹಣ ಉಳಿಯುವುದಿಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು.  ವಾಸ್ತು ದೋಷವೂ ಕೂಡ ಒಂದು ಕಾರಣವಾಗಿರಬಹುದು.

ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ಅನೇಕ ವಸ್ತುಗಳು ಹಣಕಾಸಿನ ಅಡಚಣೆಯನ್ನು ಉಂಟುಮಾಡುತ್ತವೆ. ಸಾಮಾನ್ಯವಾಗಿ ಜನರು ಈ ವಿಷಯಗಳ ಬಗ್ಗೆ ಗಮನ ಹರಿಸುವುದಿಲ್ಲ. ಇದರಿಂದ ಮನೆಯಲ್ಲಿ ಸದಾ ಹಣದ ನಷ್ಟವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ವಸ್ತುಗಳನ್ನು ತಕ್ಷಣವೇ ಮನೆಯಿಂದ ಹೊರಗೆ ಹಾಕುವುದು ಅತ್ಯಗತ್ಯ.

ಈ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಹಣದ ನಷ್ಟ ಉಂಟಾಗಬಹುದು:
ಒಣಗಿದ ಸಸ್ಯಗಳು:

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಗಿಡಗಳನ್ನು ನೆಡಲಾಗುತ್ತದೆ. ವಾಸ್ತು ಪ್ರಕಾರ, ಹಸಿರು ಸಸ್ಯಗಳು ವಾಸ್ತು ದೋಷಗಳನ್ನು ನಿವಾರಿಸುತ್ತದೆ. ಆದರೆ ಒಣ ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸಸ್ಯವು ಒಣಗಿದರೆ, ಅದನ್ನು ತಕ್ಷಣವೇ ತೆಗೆದುಹಾಕಬೇಕು. 

ಇದನ್ನೂ ಓದಿ- Valentine Week: ಈ 4 ರಾಶಿಯವರಿಗೆ ಪ್ರೇಮಿಗಳ ವಾರ ತುಂಬಾ ವಿಶೇಷ

ಬಾಗಿಲು ಮತ್ತು ಕಿಟಕಿಯ ಧೂಳು:
ಮನೆಯ ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಶಕ್ತಿಯು ಹರಿಯುತ್ತದೆ ಎಂದು ನೀವು ಕೇಳಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಕಿಟಕಿಗಳು ಮತ್ತು ಬಾಗಿಲುಗಳ ಮೇಲಿನ ಧೂಳು ಮತ್ತು ಕೊಳೆಯನ್ನು ತಕ್ಷಣವೇ ಸ್ವಚ್ಛಗೊಳಿಸಬೇಕು. ಏಕೆಂದರೆ ಕಿಟಕಿ ಮತ್ತು ಬಾಗಿಲುಗಳ ಮೇಲೆ ಸಂಗ್ರಹವಾಗಿರುವ ಧೂಳು ಮತ್ತು ಕೊಳಕು ಶಕ್ತಿಯ ಹರಿವನ್ನು ತಡೆಯುತ್ತದೆ. ಇದರಿಂದ ಆರ್ಥಿಕ ಪ್ರಗತಿ ಕುಂಠಿತವಾಗುತ್ತದೆ.

ಅನುಪಯುಕ್ತ ಕಾಗದಗಳು:
ಸಾಮಾನ್ಯವಾಗಿ ಮನೆಯಲ್ಲಿ ಉಪಯೋಗಕ್ಕೆ ಬಾರದ ಕೆಲವು ವಸ್ತುಗಳನ್ನು ನಾವು ಸಂಗ್ರಹಿಸುತ್ತೇವೆ. ಅವು ನಮಗೆ ಅಗತ್ಯವೋ? ಅಥವಾ ಇಲ್ಲವೇ? ಎಂಬ ಬಗ್ಗೆಯೂ ನಾವು ಯೋಚಿಸುವುದಿಲ್ಲ. ಇದರಿಂದ ಅವು ನಿಷ್ಕ್ರಿಯವಾಗಿ ಉಳಿಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮನೆಯೊಳಗೆ ನಿರುಪಯುಕ್ತ ವಸ್ತುಗಳ ರಾಶಿ ಬಿದ್ದಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು ಅಥವಾ ಅವುಗಳನ್ನು ಬಳಸಬೇಕು. ಆದರೆ, ಚದುರಿದ ಕಾಗದಗಳ ರಾಶಿ ಮನೆಯಲ್ಲಿ ವಾಸ್ತು ದೋಷಗಳನ್ನು (Vastu Dosha) ಸೃಷ್ಟಿಸುತ್ತದೆ. 

ಇದನ್ನೂ ಓದಿ- Surya Gochar: ಸೂರ್ಯನ ಸಂಕ್ರಮಣದಿಂದ ಈ 5 ರಾಶಿಯ ಜನರಿಗೆ ಹಣದ ನಷ್ಟ, ಇಷ್ಟು ದಿನ ಹುಷಾರಾಗಿರಿ

ಕಸದ ಪೆಟ್ಟಿಗೆ:
ಮನೆಯಲ್ಲಿರುವ ಕೊಳೆಯನ್ನು ಕಸದ ಬುಟ್ಟಿಯಲ್ಲಿ ಇಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಮನೆಯೊಳಗೆ ಇಡಬಾರದು. ಡಸ್ಟ್‌ಬಿನ್ ಅನ್ನು ಮನೆಯ ಹೊರಗೆ ಪ್ರತ್ಯೇಕ ಸ್ಥಳದಲ್ಲಿ ಇಡಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ಬಾಗಿಲಿನ ಬಳಿ ಕಸದ ಬುಟ್ಟಿಯನ್ನು ಇಡಬಾರದು, ಏಕೆಂದರೆ ಅದು ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News