ಮನೆಯಲ್ಲಿ ನಿತ್ಯ ಬಳಕೆಯಾಗುವ ಈ ವಸ್ತು ತಲೆಹೊಟ್ಟಿನಿಂದ ನೀಡುವುದು ಪರಿಹಾರ !

ಕರ್ಪೂರದಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ನೆತ್ತಿಯ ಸೋಂಕನ್ನು ತೆಗೆದುಹಾಕುತ್ತದೆ. ಕೂದಲಿಗೆ ಕರ್ಪೂರವನ್ನು ಅನ್ವಯಿಸುವ ಮೂಲಕ, ಕೂದಲಿನಲ್ಲಿ ಎಲಾಸ್ಟಿನ್ ಮತ್ತು ಕಾಲಜನ್ ಉತ್ಪಾದನೆ ಹೆಚ್ಚುತ್ತದೆ. ಇದರಿಂದಾಗಿ ಕೂದಲಿನ ವಿನ್ಯಾಸವು ಸರಿಯಾಗಿ ಉಳಿಯುತ್ತದೆ.   

Written by - Ranjitha R K | Last Updated : Feb 13, 2023, 10:25 AM IST
  • ಕರ್ಪೂರವನ್ನು ಸಾಮಾನ್ಯವಾಗಿ ದೇವರ ಕೆಲಸಗಳಲ್ಲಿ ಬಳಸುತ್ತೇವೆ.
  • ಪೂಜೆಯ ವೇಳೆ ಕರ್ಪೂರದ ಆರತಿ ಬೆಳಗಲಾಗುತ್ತದೆ.
  • ಈ ಕರ್ಪೂರ ಕೂದಲಿನ ಅನೇಕ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ.
ಮನೆಯಲ್ಲಿ ನಿತ್ಯ ಬಳಕೆಯಾಗುವ ಈ ವಸ್ತು ತಲೆಹೊಟ್ಟಿನಿಂದ ನೀಡುವುದು ಪರಿಹಾರ !  title=

ಬೆಂಗಳೂರು : ಕರ್ಪೂರವನ್ನು ಸಾಮಾನ್ಯವಾಗಿ ದೇವರ ಕೆಲಸಗಳಲ್ಲಿ ಬಳಸುತ್ತೇವೆ. ಪೂಜೆಯ ವೇಳೆ ಕರ್ಪೂರದ ಆರತಿ ಬೆಳಗಲಾಗುತ್ತದೆ. ಕೆಲವರ ಮನೆಯಲ್ಲಿ ನಿತ್ಯವೂ ಕರ್ಪೂರದ ಆರತಿ ಬೆಳಗುತ್ತಾರೆ. ದೇವರ ಪೂಜೆಯಲ್ಲಿ ಬಳಸುವ ಈ ಕರ್ಪೂರ ಕೂದಲಿನ ಅನೇಕ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ. ಕರ್ಪೂರ ತಲೆಹೊಟ್ಟಿನ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಮೊದಲನೆಯದಾಗಿ ಇದು ತುರಿಕೆಯ ಸಮಸ್ಯೆ  ನಿವಾರಿಸುತ್ತದೆ. ಎರಡನೆಯದಾಗಿ ಇದರಲ್ಲಿ ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ನೆತ್ತಿಯ ಸೋಂಕನ್ನು ತೆಗೆದುಹಾಕುತ್ತದೆ. ಕೂದಲಿಗೆ ಕರ್ಪೂರವನ್ನು ಅನ್ವಯಿಸುವ ಮೂಲಕ, ಕೂದಲಿನಲ್ಲಿ ಎಲಾಸ್ಟಿನ್ ಮತ್ತು ಕಾಲಜನ್ ಉತ್ಪಾದನೆ ಹೆಚ್ಚುತ್ತದೆ. ಇದರಿಂದಾಗಿ ಕೂದಲಿನ ವಿನ್ಯಾಸವು ಸರಿಯಾಗಿ ಉಳಿಯುತ್ತದೆ. 

 ತಲೆ ಹೊಟ್ಟಿನ  ನಿವಾರಣೆಗೆ ಕರ್ಪೂರವನ್ನು ಹೇಗೆ ಬಳಸುವುದು:
1. ಕರ್ಪೂರ ಮತ್ತು ತೆಂಗಿನ ಎಣ್ಣೆ :
ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಸ್ವಲ್ಪ ಕರ್ಪೂರದ ಪುಡಿಯನ್ನು ಹಾಕಿ ಕರಗಿಸಿ. ಹೀಗೆ ರೆಡಿ ಮಾಡಿಕೊಂಡ ಎಣ್ಣೆಯನ್ನು ನೆತ್ತಿಯ ಮೇಲೆ ಹಚ್ಚಿ ಮಸಾಜ್ ಮಾಡಿ. ಸುಮಾರು ಒಂದು ಗಂಟೆಗಳವರೆಗೆ ಹಾಗೆಯೇ  ಬಿಟ್ಟು ನಂತರ ಸೌಮ್ಯವಾದ ಶಾಂಪೂವಿನಿಂದ ತೊಳೆಯಿರಿ. ಇದರಿಂದ  ತುರಿಕೆ ಕಡಿಮೆಯಾಗುತ್ತದೆ. ವೈರಸ್ ಕಾರಣದಿಂದ ಉಂಟಾಗುವ ತಲೆಹೊಟ್ಟು  ಕಡಿಮೆಯಾಗುತ್ತದೆ. 

ಇದನ್ನೂ ಓದಿ : ಸ್ತ್ರೀಯರ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಚಿಟಿಕೆ ಅರಿಶಿನ

2. ಬೇವು ಮತ್ತು ಕರ್ಪೂರ ಹೇರ್ ಮಾಸ್ಕ್  :
ತಲೆಹೊಟ್ಟು ನಿವಾರಣೆಗೆ ಕರ್ಪೂರ ಮತ್ತು ಬೇವಿನ ಸೊಪ್ಪನ್ನು ರುಬ್ಬಿಕೊಳ್ಳಿ. ಹೀಗೆ ರುಬ್ಬಿಕೊಂಡ ಮಿಶ್ರಣವನ್ನು ಕೂದಲು ಮತ್ತು ನೆತ್ತಿಯ ಮೇಲೆ  ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಮೇಲೆ ಎಷ್ಟು ಹೊತ್ತು ಬಿಡಬೇಕು ಎನ್ನುವುದನ್ನು ನೀವೇ ನಿರ್ಧಾರ ಮಾಡಿಕೊಳ್ಳಬಹುದು. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಈ ಮಿಶ್ರಣ ನಿಮ್ಮ ನೆತ್ತಿಯನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ತಲೆಹೊಟ್ಟು ಮತ್ತು ತುರಿಕೆಯನ್ನು  ನಿವಾರಿಸುತ್ತದೆ. 

3.ಕರ್ಪೂರ, ರೀಟಾ ಮತ್ತು ಮೊಸರಿನ ಮಿಶ್ರಣ ಮಾಡಿ ಹಚ್ಚಿ : 
ಕರ್ಪೂರ, ರೀಟಾ ಮತ್ತು ಮೊಸರಿನ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ರೀತಿಯ ಪ್ರಯೋಜನಗಳಾಗುತ್ತದೆ. ಮೊದಲನೆಯದಾಗಿ, ರೀಟಾ  ಕೂದಲಿನ ಆರೋಗ್ಯಕ್ಕೆ ಹೇಳಿ ಮಾಡಿಸಿದ್ದಾಗಿದೆ. ಕರ್ಪೂರ  ಆಂಟಿಬ್ಯಾಕ್ಟೀರಿಯಲ್ ಆಗಿದ್ದು ಅದು ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ. ಇದಲ್ಲದೆ, ಮೊಸರು ನೆತ್ತಿಯನ್ನು ತಂಪಾಗಿಸುತ್ತದೆ. ಈ ಮಿಶ್ರಣಕ್ಕಾಗಿ ರೀಟಾವನ್ನು ಕುದಿಸಿ ಮತ್ತು ಅದರಲ್ಲಿ ಮೊಸರು ಮತ್ತು ಕರ್ಪೂರವನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈಗ ಇದೆಲ್ಲವನ್ನೂ ನೆತ್ತಿಯ ಮೇಲೆ ಹಚ್ಚಿ ಮತ್ತು 30 ನಿಮಿಷಗಳ ನಂತರ ಶಾಂಪೂ ಮಾಡಿ.

4. ನಿಂಬೆ ಮತ್ತು ಕರ್ಪೂರ : 
ನಿಂಬೆಯನ್ನು  ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಈ ಸಂದರ್ಭದಲ್ಲಿ ಕರ್ಪೂರವನ್ನು ಕೂಡಾ ಸೇರಿಸಿಕೊಳ್ಳಿ. ಹೀಗೆ ರೆಡಿ ಮಾಡಿದ ಕರ್ಪೂರ ಮತ್ತು ನಿಂಬೆಯ ಮಿಶ್ರಣವನ್ನು ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿತ್ತು ನಂತರ ಶಾಂಪೂ ಮಾಡಿ. ಇದು ತುರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮಾತ್ರವಲ್ಲ ತಲೆಹೊಟ್ಟಿನ  ನಿವಾರಣೆ ಮಾಡುತ್ತದೆ. 

ಇದನ್ನೂ ಓದಿ : Benefits of Camphor: 2 ರೂಪಾಯಿಯ ಕರ್ಪೂರ ನಿಮ್ಮ ಜೀವನವನ್ನು ವಜ್ರದಂತೆ ಬೆಳಗಿಸುತ್ತದೆ: ಆದ್ರೆ ನೀವು ಮಾಡಬೇಕಿರುವುದು ಇಷ್ಟೇ!

5. ಕರ್ಪೂರ ಮತ್ತು ಆಲಿವ್ ಎಣ್ಣೆ : 
ತಲೆಹೊಟ್ಟಿನ ಕಾರಣದಿಂದ ತಲೆಯಲ್ಲಿ ತೀವ್ರವಾದ ತುರಿಕೆ ಇದ್ದರೆ,  ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಕರ್ಪೂರವನ್ನು ಬೆರೆಸಿ ನೆತ್ತಿಯ ಮೇಲೆ ಹಚ್ಚಿ. 30 ನಿಮಿಷಗಳ ಕಾಲ ಈ ಮಿಶ್ರಣವನ್ನು ಹಾಗೆಯೇ ಬಿಡಿ. ನಂತರ ಶಾಂಪೂ ಹಾಕಿ ಕೂದಲನ್ನು ತೊಳೆಯಿರಿ.  ಹೀಗೆ ಮಾಡುತ್ತಾ ಬಂದರೆ ತಲೆಹೊಟ್ಟಿ
ನ ಸಮಸ್ಯೆ ನಿವಾರಣೆಯಾಗುತ್ತದೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News