ಪೂಜಾ ಕಾರ್ಯ ಮಾತ್ರವಲ್ಲ ಈ ಎಲ್ಲಾ ಕಾರಣಗಳಿಗೂ ಪ್ರಯೋಜನಕಾರಿ ಕರ್ಪೂರ..!

ಬಟ್ಟೆಗಳನ್ನು ಕಪಾಟಿನಲ್ಲಿಡುವಾಗ ನಾಫ್ಥಲೀನ್ ಬಾಲ್ ಗಳನ್ನು ಬಳಸುತ್ತೇವೆ. ಯಾವುದೇ ಕೀಟಗಳು ಬಾರದೆ ಇರಲಿ ಎಂಬ ಕಾರಣಕ್ಕೆ ಈ ಬಾಲ್ ಗಳನ್ನು ಬಳಸಲಾಗುತ್ತದೆ. ಅಲ್ಲದೆ, ಬಹಳ ಕಾಲದವರೆಗೆ ಒಳಗೆ ಎತ್ತಿಟ್ಟಿರುವ ಬಟ್ಟೆಗಳು ಕೆಟ್ಟ ವಾಸನೆ ಬೀರದಿರಲಿ ಎನ್ನುವ ಕಾರಣ ಕೂಡಾ ಇದೆ ಹಿಂದೆ ಅಡಗಿದೆ. 

Written by - Ranjitha R K | Last Updated : Jul 29, 2021, 07:48 PM IST
  • ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಕರ್ಪೂರ
  • ಕರ್ಪೂರದ ಮಸಾಜ್ ಮಾಡಿದರೆ ಕೀಲುನೋವು ಮಾಯ
  • ತಲೆಹೊಟ್ಟಿಗೂ ಪರಿಹಾರ ಕರ್ಪೂರ
ಪೂಜಾ ಕಾರ್ಯ ಮಾತ್ರವಲ್ಲ  ಈ ಎಲ್ಲಾ ಕಾರಣಗಳಿಗೂ ಪ್ರಯೋಜನಕಾರಿ ಕರ್ಪೂರ..! title=
ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಕರ್ಪೂರ (photo india.com)

ನವದೆಹಲಿ : ಕರ್ಪೂರವನ್ನು ಪೂಜೆಯಲ್ಲಿ ಬಳಸಲಾಗುತ್ತದೆ. ಪೂಜೆಗೆ ಕರ್ಪೂರ ಬಳಸಲಾಗುತ್ತದೆ (Benefits of Camphor) ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಕರ್ಪೂರ ಬಳಕೆಯು ಪರಿಸರದಲ್ಲಿ ಶುದ್ಧತೆಯನ್ನು ತರುತ್ತದೆ.  ಅದರ ಗುಣಲಕ್ಷಣಗಳನ್ನು ಆಯುರ್ವೇದದಲ್ಲೂ (Ayurved) ಉಲ್ಲೇಖಿಸಲಾಗಿದೆ. ಪೂಜೆಯನ್ನು ಹೊರತುಪಡಿಸಿ ಕೂಡಾ ಕರ್ಪೂರವನ್ನು ಅನೇಕ ಕಾರಣಗಳಿಗಾಗಿ ಬಳಸಬಹುದು. ಆರೋಗ್ಯ ವಿಚಾರಗಳಲ್ಲಿಯೂ ಕರ್ಪೂರ ಅನೇಕ ರೀತಿಯ ಪ್ರಯೋಜನಗಳನ್ನು ಹೊಂದಿದೆ.

ಕರ್ಪೂರವನ್ನು ಬಳಸುವುದು ಹೇಗೆ?
ಬಟ್ಟೆಗಳನ್ನು ಕಪಾಟಿನಲ್ಲಿಡುವಾಗ ನಾಫ್ಥಲೀನ್ ಬಾಲ್ ಗಳನ್ನು ಬಳಸುತ್ತೇವೆ. ಯಾವುದೇ ಕೀಟಗಳು ಬಾರದೆ ಇರಲಿ ಎಂಬ ಕಾರಣಕ್ಕೆ ಈ ಬಾಲ್ ಗಳನ್ನು ಬಳಸಲಾಗುತ್ತದೆ. ಅಲ್ಲದೆ, ಬಹಳ ಕಾಲದವರೆಗೆ ಒಳಗೆ ಎತ್ತಿಟ್ಟಿರುವ ಬಟ್ಟೆಗಳು ಕೆಟ್ಟ ವಾಸನೆ ಬೀರದಿರಲಿ ಎನ್ನುವ ಕಾರಣ ಕೂಡಾ ಇದೆ ಹಿಂದೆ ಅಡಗಿದೆ. ಈ ಬಾಲ್ ಗಳು ರಾಸಾಯನಿಕಗಳಿಂದ ಕೂಡಿರುತ್ತದೆ. ಇದರ ಬದಲಾಗಿ ನೀವು ಕರ್ಪೂರವನ್ನು (Comphor) ಬಳಸಬಹುದು. ಇದು ಬಟ್ಟೆಗಳನ್ನು ತಾಜಾವಾಗಿರಿಸುತ್ತದೆ. ಬಟ್ಟೆಗಳು ಕೆಟ್ಟ ವಾಸನೆ ಬೀರದಂತೆ ತಡೆಯುತ್ತದೆ ಅಲ್ಲದೆ, ಕೀಟಗಳು ಹತ್ತಿರ ಬಾರದಂತೆ ತಡೆಯುತ್ತದೆ. 

ಇದನ್ನೂ ಓದಿ : Herbs For Monsoon : ಮಳೆಗಾಲದಲ್ಲಿ ಖಂಡಿತಾ ತಿನ್ನಲೇಬೇಕು ಈ ಆಹಾರ

ಕರ್ಪೂರವನ್ನು ಪುಡಿಮಾಡಿ. ಇದಕ್ಕೆ ಎರಡು ಚಮಚ ಲ್ಯಾವೆಂಡರ್ ಎಣ್ಣೆಯನ್ನು (Oil)ಸೇರಿಸಿ. ಇದನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಮನೆಯಲ್ಲಿ ಸಿಂಪಡಿಸಿ. ಮನೆ ಪರಿಮಳಯುಕ್ತವಾಗಿರುತ್ತದೆ. ಅಂದರೆ ಇದು ರೂಮ್ ಫ್ರೆಶನರ್ (Room freshner) ಆಗಿ ಕಾರ್ಯನಿರ್ವಹಿಸುತ್ತದೆ.

ಮಳೆಗಾಲದಲ್ಲಿ ಚರ್ಮದ ಸೋಂಕು (Skin care) ಉಂಟಾಗುತ್ತದೆ. ಚರ್ಮದ ತುರಿಕೆ ಮತ್ತುಉರಿಯುವ ಸಮಸ್ಯೆ ಕಾಡತೊಡಗುತ್ತದೆ. ಈ ಸಮಸ್ಯೆಗೆ ಕರ್ಪೂರ  ಪರಿಹಾರವಾಗಿ ಕೆಲಸ ಮಾಡುತ್ತದೆ. ಹೌದು, ಒಂದು ಕಪ್ ತೆಂಗಿನ ಎಣ್ಣೆಗೆ (Coconut oil) ಕರ್ಪೂರವನ್ನು ಪುಡಿ ಮಾಡಿ ಹಾಕಿ. ನಂತರ ಇದನ್ನು ಸಮಸ್ಯೆ ಇರುವ ಜಾಗಕ್ಕೆ ಹಚ್ಚಿದರೆ ತಕ್ಷಣ ಪರಿಹಾರ ಸಿಗುತ್ತದೆ. 

ಕೀಲು ನೋವಿನಿಂದ ತೊಂದರೆಗೀಡಾಗಿದ್ದರೆ, ಎಳ್ಳೆಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಕರ್ಪೂರವನ್ನು ಬೆರೆಸಿ. ಈ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ನಿವಾರಣೆಯಾಗುತ್ತದೆ. 

ಇದನ್ನೂ ಓದಿ : Salt For Skin Problems: ಬೇಸಿಗೆಯಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣ ಉಪ್ಪು

ತಲೆಹೊಟ್ಟಿನ ಸಮಸ್ಯೆಗೂ ಇದು ರಾಮಬಾಣ. ತೆಂಗಿನ ಎಣ್ಣೆಯಲ್ಲಿ ಕರ್ಪೂರವನ್ನು ಬೆರೆಸಿ ಹಚ್ಚಿದರೆ ತಕೆಹೊಟ್ಟು ಕಡಿಮೆಯಾಗುತ್ತದೆ

ಒಡೆದ ಹಿಮ್ಮಡಿಗೆ (Cracked heel) ಕರ್ಪೂರ ತ್ತಮ ಪರಿಹಾರ. ಕರ್ಪೂರವನ್ನು ಬಿಸಿ ನೀರಿನಲ್ಲಿ ಬೆರೆಸಿ. ನಿಮ್ಮ ಪಾದಗಳನ್ನು ಈ ನೀರಿನಲ್ಲಿ ಹಾಕಿ ಸ್ವಲ್ಪ ಹೊತ್ತು ಬಿಡಿ. ಪ್ರತಿ ರಾತ್ರಿ ಮಲಗುವ ಮುನ್ನ ಹೀಗೆ ಮಾಡುತ್ತಾ ಬನ್ನಿ. ಒಡೆದ ಹಿಮ್ಮಡಿ ನಿಧಾನವಾಗಿ ಸರಿಯಾಗುತ್ತದೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News