ಅಕ್ಷಯ ತೃತೀಯ ಉಪಾಯ: ಸನಾತನ ಧರ್ಮದಲ್ಲಿ ಪ್ರತಿಯೊಂದು ದಿನಾಂಕಕ್ಕೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಪ್ರತಿ ತಿಂಗಳ ದಿನಾಂಕದಂದು ಕೆಲವು ಹಬ್ಬ ಅಥವಾ ಉಪವಾಸ ಇರುತ್ತದೆ. ಅಂತೆಯೇ, ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಈ ಹಬ್ಬವನ್ನು ಮೇ 3 ರಂದು ಆಚರಿಸಲಾಗುತ್ತದೆ. ಈ ದಿನದಂದು ಪೂಜೆ, ಜಪ ಮತ್ತು ತಪಸ್ಸು ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ. ಅಕ್ಷಯ ತೃತೀಯ ದಿನವನ್ನು ಲಕ್ಷ್ಮಿ ದೇವಿಯ ಆರಾಧನೆಗೆ ಸಮರ್ಪಿಸಲಾಗಿದೆ. ಈ ದಿನ, ತಾಯಿ ಲಕ್ಷ್ಮಿ ದೇವಿಯನ್ನ ಮನಃಪೂರ್ವಕವಾಗಿ ಭಕ್ತಿಯಿಂದ ಪೂಜಿಸುವ ಮನೆಯಲ್ಲಿ ಸದಾ ಸಂಪತ್ತು, ಶಾಂತಿ-ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗಲಿದೆ ಎಂಬುದು ನಂಬಿಕೆ.
ಅಕ್ಷಯ ತೃತೀಯ ದಿನದಂದು ಪರಶುರಾಮ ಜಯಂತಿಯನ್ನು ಸಹ ಆಚರಿಸಲಾಗುತ್ತದೆ. ಈ ಶುಭ ದಿನದಂದು ಯಾವುದೇ ಶುಭ ಕಾರ್ಯವನ್ನು ಮಾಡಲು ಮುಹೂರ್ತ ನೋಡುವ ಅಗತ್ಯವಿಲ್ಲ ಎಂದು ನಂಬಲಾಗಿದೆ. ಈ ಇಡೀ ದಿನ ಶುಭ ಮುಹೂರ್ತವಾಗಿರುವುದರಿಂದ ಈ ಶುಭ ಮುಹೂರ್ತದಲ್ಲಿ ಮದುವೆ, ಗೃಹಪ್ರವೇಶ ಹೀಗೆ ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡಬಹುದು. ಈ ದಿನದಂದು ವ್ರತವನ್ನೂ ಸಹ ಆಚರಿಸಲಾಗುತ್ತದೆ. ಆದರೆ, ಅಕ್ಷಯ ತೃತೀಯ ದಿನದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ಮನೆಯಲ್ಲಿ ಬಡತನ ನೆಲೆಸುತ್ತದೆ ಎಂದು ಶಾಸ್ತ್ರಗಳಲ್ಲಿ ಇಂತಹ ಕೆಲವು ಕಾರ್ಯಗಳನ್ನು ಸಹ ಹೇಳಲಾಗಿದೆ. ಈ ದಿನ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ...
ಇದನ್ನೂ ಓದಿ- ಅಕ್ಷಯ ತೃತೀಯದಂದು ಇದನ್ನು ದಾನ ಮಾಡಿದರೆ ಚಾರ್ ಧಾಮ್ ಯಾತ್ರೆ ಮಾಡಿದಷ್ಟೇ ಫಲ
ಅಕ್ಷಯ ತೃತೀಯ ದಿನದಂದು ಮರೆತು ಕೂಡ ಈ ಕೆಲಸ ಮಾಡಬೇಡಿ:
* ಅಕ್ಷಯ ತೃತೀಯ ದಿನದಂದು ಮರೆತೂ ಸಹ ಮದ್ಯಪಾನ ಮತ್ತು ಧೂಮಪಾನ ಮಾಡಬೇಡಿ.
* ಅಲ್ಲದೆ, ಈ ದಿನ ಬ್ರಹ್ಮಚರ್ಯವನ್ನು ಅನುಸರಿಸಬೇಕು.
* ಇತರರ ಬಗ್ಗೆ ನಕಾರಾತ್ಮಕವಾಗಿ ಯೋಚಿಸಬೇಡಿ.
* ಮರೆತು ಕೂಡ ಮನೆಯಲ್ಲಿ ಕತ್ತಲೆ ಮಾಡಬೇಡಿ:
ಅಕ್ಷಯ ತೃತೀಯ ದಿನದಂದು ಮನೆಯ ಯಾವುದೇ ಕೋಣೆಯಲ್ಲಿ ಅಥವಾ ಮೂಲೆಯಲ್ಲಿ ಮನೆ ಕತ್ತಲೆಯಿಂದ ಇರಬಾರದು. ಇದರಿಂದ ತಾಯಿ ಲಕ್ಷ್ಮಿ ಕೊಪಗೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯ ಯಾವುದೇ ಕೊನೆಯಲ್ಲಿ ಬೆಳಕಿನ ಸೌಲಭ್ಯ ಇಲ್ಲದಿದ್ದರೆ ಅಂತಹ ಜಾಗದಲ್ಲಿ ಒಂದು ಸಣ್ಣ ದೀಪವನ್ನಾದರೂ ಬೆಳಗಿಸಬೇಕು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ ಮತ್ತು ಭಕ್ತರ ಮೇಲೆ ಆಶೀರ್ವಾದಗಳು ಯಾವಾಗಲೂ ಸುರಿಸಲ್ಪಡುತ್ತವೆ ಎಂಬ ನಂಬಿಕೆ ಇದೆ.
* ಅಕ್ಷಯ ತೃತೀಯ ದಿನದಂದು ಸ್ನಾನ ಮಾಡುವ ಮೊದಲು ತುಳಸಿ ಗಿಡ ಅಥವಾ ಎಲೆಗಳನ್ನು ಮುಟ್ಟಬೇಡಿ ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ದೇವತೆಗಳು ಕೋಪಗೊಳ್ಳುತ್ತಾರೆ ಎನ್ನಲಾಗುತ್ತದೆ.
ಇದನ್ನೂ ಓದಿ- ಅಕ್ಷಯ ತೃತೀಯದಂದು ಚಿನ್ನ ಮಾತ್ರವಲ್ಲ ಈ ವಸ್ತುಗಳನ್ನು ಖರೀದಿಸುವುದೂ ತುಂಬಾ ಮಂಗಳಕರ
ಅಕ್ಷಯ ತೃತೀಯದಂದು ಈ ಕೆಲಸಗಳನ್ನು ತಪ್ಪದೇ ಮಾಡಿ:
* ಅಕ್ಷಯ ತೃತೀಯ ದಿನದಂದು ಲಕ್ಷ್ಮೀ ದೇವಿಯ ಜೊತೆಗೆ ಭಗವಾನ್ ವಿಷ್ಣುವನ್ನು ತಪ್ಪದೇ ಪೂಜಿಸಿ:
ಅಕ್ಷಯ ತೃತೀಯ ದಿನದಂದು, ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಪೂಜಿಸುವುದು ಮಾತ್ರವಲ್ಲದೆ, ಲಕ್ಷ್ಮಿ ದೇವಿಯ ಜೊತೆಗೆ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಅವಳು ಶೀಘ್ರದಲ್ಲೇ ಸಂತೋಷಪಡುತ್ತಾಳೆ. ಇದರೊಂದಿಗೆ, ಈ ದಿನದಂದು ಭಗವಾನ್ ವಿಷ್ಣುವಿನ ಆರಾಧನೆಯಲ್ಲಿ ತುಳಸಿ ದಳವನ್ನು ಬಳಸುವುದು ಅಗತ್ಯವೆಂದು ಪರಿಗಣಿಸಲಾಗಿದೆ. ಇದರೊಂದಿಗೆ,
* ದಾನ:
ಅಕ್ಷಯ ತೃತೀಯ ದಿನದಂದು, ಅಗತ್ಯವಿರುವವರಿಗೆ ಆಹಾರ, ಬಟ್ಟೆ ಅಥವಾ ಹಣವನ್ನು ಸಹಾಯ ಮಾಡುವುದು ತುಂಬಾ ಮಂಗಳಕರವೆಂದು ನಂಬಲಾಗಿದೆ. ಅಗತ್ಯವಿರುವವರಿಗೆ ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ದಾನ ಮಾಡುವುದು ಒಳ್ಳೆಯಡದು.
* ಗೋಮಾತೆಗೆ ಅಕ್ಕಿ, ಬೆಲ್ಲ, ಸ್ವಲ್ಪ ಬೇಳೆಯನ್ನು ತಿನ್ನಿಸಿ.
ಅಕ್ಷಯ ತೃತೀಯ ದಿನದಂದು ಈ ವಸ್ತುಗಳನ್ನು ಖರೀದಿಸುವುದು ಶುಭ:
ಅಕ್ಷಯ ತೃತೀಯ ದಿನದಂದು ಶಾಪಿಂಗ್ ಮಾಡುವುದು ಸಹ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಶುಭ ಮುಹೂರ್ತದಲ್ಲಿ ಚಿನ್ನ, ಬೆಳ್ಳಿ ಅಥವಾ ಇನ್ನಾವುದೇ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಹಣ ಮತ್ತು ಧಾನ್ಯಗಳಿಗೆ ಕೊರತೆಯಾಗುವುದಿಲ್ಲ ಎನ್ನಲಾಗುತ್ತದೆ. ಅಕ್ಷಯ ತೃತೀಯ ದಿನದಂದು ನೀವು ಚಿನ್ನ ಮತ್ತು ಬೆಳ್ಳಿ ಅಥವಾ ಯಾವುದೇ ಆಭರಣವನ್ನು ಖರೀದಿಸಬಹುದು. ಒಬ್ಬ ವ್ಯಕ್ತಿಗೆ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಸಣ್ಣ ಲೋಹದ ವಸ್ತುಗಳನ್ನು ಸಹ ಖರೀದಿಸಬಹುದು. ಹೀಗೆ ಮಾಡುವುದರಿಂದ ಲಕ್ಷ್ಮಿಯ ಆಶೀರ್ವಾದ ಸದಾ ಉಳಿಯುತ್ತದೆ ಎಂಬ ನಂಬಿಕೆ ಇದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.