ಪ್ರಳಯದ ಮುನ್ಸೂಚನೆ ಕೊಟ್ಟನಾ ಸೂರ್ಯ..? ಗವಿ ಗಂಗಾಧರೇಶ್ವರ ದೇಗುಲದ ಶಕುನ ಏನು..?

ಪ್ರತಿ ವರ್ಷ ಜ. 14ರ ಸಂಜೆ ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಾಗುವ ಚಮತ್ಕಾರ  ಈ ಸಲ ಆಗಲೇ ಇಲ್ಲ. 

Written by - Ranjitha R K | Last Updated : Jan 15, 2021, 11:06 AM IST
  • ಗವಿಗಂಗಾಧರೇಶ್ವರನಿಗೆ ಈ ಸಲ ತಪ್ಪಿ ಹೋಯಿತು ಅದ್ಭುತ ಸೂರ್ಯಾಭಿಷೇಕ
  • ಮೋಡದಲ್ಲೇ ಮರೆಯಾಗಿದ್ದ ಸೂರ್ಯ, ಶಿವ ದರ್ಶನಕ್ಕೆ ಬರಲೇ ಇಲ್ಲ
  • ಸಂಕ್ರಾಂತಿ ಮಹಾಪರ್ವದಂದು ನಡೆಯಲಿಲ್ಲ ಶಂಕರ-ಭಾಸ್ಕರ ಸಮಾಗಮ..!
ಪ್ರಳಯದ ಮುನ್ಸೂಚನೆ ಕೊಟ್ಟನಾ ಸೂರ್ಯ..? ಗವಿ ಗಂಗಾಧರೇಶ್ವರ ದೇಗುಲದ ಶಕುನ ಏನು..? title=
ಗವಿಗಂಗಾಧರೇಶ್ವರನಿಗೆ ಈ ಸಲ ತಪ್ಪಿ ಹೋಯಿತು ಅದ್ಭುತ ಸೂರ್ಯಾಭಿಷೇಕ(photo twitter)

ಬೆಂಗಳೂರು: ಪ್ರತಿವರ್ಷ ಸಂಕ್ರಾಂತಿ ದಿನ ಸೂರ್ಯ ಉತ್ತರಾಯಣ ಪಥಕ್ಕೆ ತಿರುಗುವಾಗ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲದಲ್ಲಿ (Gavi Gangadhareshwara temple) ಚಮತ್ಕಾರವೊಂದು ನಡೆಯುತ್ತದೆ.  ಸೂರ್ಯ ರಶ್ಮಿ ನಂದಿಕೇಶ್ವರನ ಕೊಂಬಿನ ಮೂಲಕ ಸಾಗಿ ಗಂಗಾಧರೇಶ್ವರನ ಶಿರ, ದೇಹ, ಪಾದ, ಪೀಠವನ್ನು ಸ್ಪರ್ಶಿಸಿ, ಸೂರ್ಯಾಭಿಷೇಕ (Suryabhisheka) ವಾಗುತ್ತದೆ. ಇದು ಪ್ರತಿ ವರ್ಷ ಜ. 14ರ ಸಂಜೆ ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಾಗುವ ಚಮತ್ಕಾರ. ಆದರೆ ಈ ಚಮತ್ಕಾರ ಈ ಸಲ ಆಗಲೇ ಇಲ್ಲ. ಗವಿಯ ಗಂಗಾಧರನನ್ನು ಸೂರ್ಯ ಮುಟ್ಟಲೇ ಇಲ್ಲ. ಗಂಗಾಧರನಿಗೆ ಸೂರ್ಯನ ದರ್ಶನವೂ ಆಗಲಿಲ್ಲ. ಏನಿದರ ಮರ್ಮ..? ಗಂಗಾಧರನ ದರ್ಶನಕ್ಕೆ ಸೂರ್ಯ ಮನಸ್ಸು ಮಾಡಲೇ ಇಲ್ಲ..!

ಜ.14 ರಂದು ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಆಗಿದ್ದೇನು..?
ಎಂದಿನಂತೆ ಜ.14 ರಂದು ಸಂಜೆ 5.20ಕ್ಕೆ ಸೂರ್ಯ ರಶ್ಮಿ (Sun Ray) ಶಿವಲಿಂಗದ ಮೇಲೆ ಬೀಳಬೇಕಿತ್ತು. ಆ ಹೊತ್ತಿನಲ್ಲಿ ಗಂಗಾಧರನಿಗೆ (Gavigangadhareshwara) ಕ್ಷೀರಾಭಿಷೇಕ, ಮಹಾಪೂಜೆ, ಮಂಗಳಾರತಿ ನಡೆಯುತ್ತದೆ. ಆದರೆ, ಈ ಸಲ ಸೂರ್ಯ ಮೋಡದ ಬಾನಿಂದ ಹೊರಬರಲೇ ಇಲ್ಲ. ಯಾರ ಮೇಲೋ ಮುನಿದು ದೂರ ಕುಳಿತಂತೆ, ಮೇಘಗಳ ಹಿಂದೆ ಮರೆಯಾಗಿದ್ದ ಭಾಸ್ಕರ!  ಗಂಗಾಧರನ ಸೂರ್ಯಾಭಿಷೇಕಕ್ಕೆ  ಕಾಯುತ್ತಿದ್ದ ಆಸ್ತಿಕ ಭಕ್ತ ವೃಂದಕ್ಕೆ ತೀವ್ರ ನಿರಾಸೆಯಾಗಿತ್ತು.

ಇದನ್ನೂ ಓದಿ : Donation: ಇಲ್ಲಿವೆ ದಾನದ 5 ಪ್ರಮುಖ ಪ್ರಕಾರಗಳ

ಇದೇ ಮೊದಲ ಸಲ ನಡೆಯಲಿಲ್ಲ ಚಮತ್ಕಾರ..!
ದೇಗುಲದ ಪ್ರಧಾನ ಆರ್ಚಕ ಸೋಮಶೇಖರ ದೀಕ್ಷಿತರ ಪ್ರಕಾರ, 53 ವರ್ಷಗಳಿಂದ ನೋಡುತ್ತಿದ್ದೇನೆ ಇದೇ  ಮೊದಲ ಸಲ ಉತ್ತರಾಯಣ ಪರ್ವ ಕಾಲದ ದಿನ ಗಂಗಾಧರನಿಗೆ ಸೂರ್ಯಾಭಿಷೇಕ ತಪ್ಪಿಹೋಗಿದೆ. ಮೋಡಗಳಲ್ಲಿ ಅವಿತಿದ್ದ ಸೂರ್ಯ (Sun) ಹೊರಬರಲೇ ಇಲ್ಲ. ಮಹಾಪೂಜೆ ನಡೆಯುವಾಗ ಸೂರ್ಯನ ಛಾಯೆ ಶಿವಲಿಂಗದ (Shivalinga) ಮೇಲೆ ಬಿದ್ದಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.ಅಷ್ಟೇ ಅಲ್ಲ, ಶಿವನ ಸಂತೃಪ್ತಿಗೆ ರುದ್ರಾಭಿಷೇಕ, ಅತಿರುದ್ರ ಯಾಗ (Ati rudra Yaga), ಮಹಾ ಮೃತ್ಯುಂಜಯ ಹೋಮ ಕೈಗೊಳ್ಳುವಂತೆ ದೇಶದ ಎಲ್ಲಾ ಶಿವದೇಗುಲಗಳಿಗೆ (Shiva Temple) ಅವರು ಮನವಿ ಮಾಡಿದ್ದಾರೆ. 

ಮಹಾಪ್ರಳಯದ ಮುನ್ಸೂಚನೆಯೇ ಇದು.?
ಗಂಗಾಧರನಿಗೆ ಸೂರ್ಯಾಭಿಷೇಕ ತಪ್ಪಿಹೋಗಿರುವುದು, ಸೂರ್ಯನಿಗೆ ಮೋಡ ಮರೆಯಾಗಿ ನಿಂತಿದ್ದು, ಶಿವಲಿಂಗದ ಮೇಲೆ ಸೂರ್ಯ ಛಾಯೆಯಷ್ಟೇ ಕಾಣಿಸಿರುವುದು, ಶಂಕರ-ಭಾಸ್ಕರ ಸಮಾಗಮ ಆಗದೇ ಹೋಗಿದ್ದು,  ಆಸ್ತಿಕರ ಆತಂಕಕ್ಕೆ ಕಾರಣವಾಗಿದೆ. ಇದು ಮಹಾಪ್ರಳಯವೊಂದರ ಶಕುನ ಎನ್ನಲಾಗಿದೆ. 2021 ಮನುಕುಲದ ವಿನಾಶಕ್ಕೆ ಕಾರಣವಾಗುವ ಮಹಾಸಮರದ (War) ಮುನ್ಸೂಚನೆ ಇದು ಎನ್ನಲಾಗಿದೆ. ಶಿವ-ಸೂರ್ಯರ ಸಮಾಗಮ ನೆರವೇರದೇ ಇರುವುದು ಕೂಡಾ ಅಪಾಯದ ಮುನ್ಸೂಚನೆ.  53 ವರ್ಷಗಳ ಬಳಿಕ  ಘಟನೆ ನಡೆಯಲು ಕಾರಣಗಳೇನು? ಶಿವನನ್ನು ಶಾಂತಪಡಿಸಲು ಸಾಧ್ಯವೇ.  ಇದಕ್ಕೇನಾದರೂ ಪರಿಹಾರಗಳಿವೆಯೇ. ಯಜ್ಞ ಯಾಗಾದಿಗಳಿಂದ ಶಿವನನ್ನು ಸಂಪ್ರೀತಿಗೊಳಿಸಬಹುದೇ..? ಧರ್ಮ ಪರಂಪರೆಯ ಹಿರಿಯರು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತಿದ್ದಾರೆ.

ಇದನ್ನೂ ಓದಿ : ASTRO : ಶನಿದೇವರ ವಾಹನ ಕಾಗೆ ಸತ್ತು ಬೀಳುತ್ತಿರುವುದು ಮಹಾ ಗಂಡಾಂತರದ ಮುನ್ಸೂಚನೆಯೇ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News