ಡಾರ್ಕ್ ಅಂಡರ್ ಆರ್ಮ್ ಸಮಸ್ಯೆಯಿಂದ ಪರಿಹಾರಕ್ಕಾಗಿ ಸರಳ ಮನೆಮದ್ದುಗಳು

Dark Underarms: ಕಂಕುಳ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ. ಅತಿಯಾಗಿ ವ್ಯಾಕ್ಸಿಂಗ್ ಮಾಡುವುದರಿಂದಲೂ ಚರ್ಮ ಕಪ್ಪಾಗುತ್ತದೆ. ಆದರೆ, ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳು ತುಂಬಾ ಪ್ರಯೋಜನಕಾರಿ ಆಗಿದೆ. 

Written by - Yashaswini V | Last Updated : Apr 26, 2024, 03:47 PM IST
  • ಡಾರ್ಕ್ ಅಂಡರ್ ಆರ್ಮ್ ಸಮಸ್ಯೆಗೆ ಹಲವು ಕಾರಣಗಳಿವೆ
  • ಅತಿಯಾಗಿ ಬೆವರುವುದು, ವ್ಯಾಕ್ಸಿಂಗ್ ಮಾಡುವುದು ಕೂಡ ಡಾರ್ಕ್ ಅಂಡರ್ ಆರ್ಮ್ ಸಮಸ್ಯೆಗೆ ಕಾರಣವಾಗುತ್ತದೆ.
ಡಾರ್ಕ್ ಅಂಡರ್ ಆರ್ಮ್ ಸಮಸ್ಯೆಯಿಂದ ಪರಿಹಾರಕ್ಕಾಗಿ ಸರಳ ಮನೆಮದ್ದುಗಳು  title=

Dark Underarms Remedies: ಅತಿಯಾದ ಬೆವರುವಿಕೆ, ಶೇವಿಂಗ್ ಮತ್ತು ಹೆಚ್ಚಾಗಿ ವ್ಯಾಕ್ಸಿಂಗ್ ಮಾಡುವುದರಿಂದ ಅಂಡರ್ ಆರ್ಮ್ ಕಪ್ಪಾಗುತ್ತದೆ. ಡಾರ್ಕ್ ಅಂಡರ್ ಆರ್ಮ್ ಸಮಸ್ಯೆಯಿಂದಾಗಿ (Dark Underarms Problem) ಸ್ಲೀವ್ ಲೆಸ್ ಉಡುಪುಗಳನ್ನು ಧರಿಸಲು ಮುಜುಗರ ಉಂಟಾಗಬಹುದು. ಆದರೆ, ನಿಮ್ಮ  ಮನೆಯಲ್ಲಿರುವ ಕೆಲವು ವಸ್ತುಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. 

ಡಾರ್ಕ್ ಅಂಡರ್ ಆರ್ಮ್ ಸಮಸ್ಯೆ ನಿವಾರಣೆಗೆ ಈ ಮನೆಮದ್ದುಗಳನ್ನು ಒಮ್ಮೆ ಪ್ರಯತ್ನಿಸಿ: 
ಶ್ರೀಗಂಧ-ರೋಸ್ ವಾಟರ್: 

ಎರಡು ಚಮಚ ಶ್ರೀಗಂಧದ ಪುಡಿಯಲ್ಲಿ ಅಷ್ಟೇ ಪ್ರಮಾಣದ ರೋಸ್ ವಾಟರ್ (Rose Water) ಮಿಕ್ಸ್ ಮಾಡಿ ಅಂಡರ್ ಆರ್ಮ್ಸ್ ಮೇಲೆ ಅನ್ವಯಿಸಿ. ಐದು ನಿಮಿಷಗಳ ಬಳಿಕ ನೀರಿನಿಂದ ತೊಳೆಯಿರಿ ಪ್ರತಿದಿನ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಡಾರ್ಕ್ ಅಂಡರ್ ಆರ್ಮ್ಸ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 

ಜೇನುತುಪ್ಪ-ನಿಂಬೆರಸ: 
ಒಂದು ಚಮಚ ಜೇನುತುಪ್ಪದಲ್ಲಿ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಅದನ್ನು ಅಂಡರ್ ಆರ್ಮ್ಸ್ (Underarms)  ಮೇಲೆ ಹಚ್ಚಿ 15 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ ಬಳಿಕ ತಣ್ಣೀರಿನಿಂದ ವಾಶ್ ಮಾಡಿದರೆ, ಕೆಲವೇ ದಿನಗಳಲ್ಲಿ ಅಂಡರ್ ಆರ್ಮ್ಸ್ ನಲ್ಲಿನ ಕಪ್ಪುಕಲೆ ನಿವಾರಣೆಯಾಗುತ್ತದೆ. 

ಇದನ್ನೂ ಓದಿ- White Hair Remedy: ಸಾಸಿವೆ ಎಣ್ಣೆಯಲ್ಲಿ ಈ 3 ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಬುಡದಿಂದ ಕಪ್ಪಾಗುತ್ತೆ ಬಿಳಿ ಕೂದಲು

ಕಿತ್ತಳೆ ಸಿಪ್ಪೆ: 
ಕಿತ್ತಳೆ ಸಿಪ್ಪೆ ಉತ್ತಮ ಸೌಂದರ್ಯವರ್ಧಕ ಎಂದು ನಿಮಗೆ ತಿಳಿದೇ ಇದೆ. ಕಿತ್ತಳೆ ಸಿಪ್ಪೆಯನ್ನು ನಾಲ್ಕೈದು ದಿನಗಳ ಸೂರ್ಯನ ಬೆಳಕಿನಲ್ಲಿ ಚೆನ್ನಾಗಿ ಒಣಗಿಸಿ, ನುಣ್ಣಗೆ ಪುಡಿ ಮಾಡಿ. ಈ ಪುಡಿಗೆ ಸ್ವಲ್ಪ ರೋಸ್ ವಾಟರ್ ಬೆರೆಸಿ ಕಂಕುಳಿಗೆ ಹಚ್ಚಿ. ಹತ್ತು ನಿಮಿಷಗಳ ಬಳಿಕ ನಿಧಾನವಾಗಿ ಮಸಾಜ್ ಮಾಡುತ್ತಾ ಇದನ್ನು ರಿಮೂವ್ ಮಾಡಿ. 

ಆಲೂಗಡ್ಡೆ: 
ಆಲೂಗಡ್ಡೆ ಉತ್ತಮ ನೈಸರ್ಗಿಕ ಬ್ಲೀಚ್ ಆಗಿದ್ದು, ಆಲೂಗಡ್ಡೆಯನ್ನು ತೆಳುವಾಗಿ ಕತ್ತರಿಸಿ ಐದು ನಿಮಿಷಗಳ ಕಾಲ ಅದರಿಂದ ಅಂಡರ್ ಆರ್ಮ್ಸ್ ಅನ್ನು ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ನಿಯಮಿತವಾಗಿ ಈ ಮನೆಮದ್ದನ್ನು ಬಳಸುವುದರಿಂದ ಕೆಲವೇ ದಿನಗಳಲ್ಲಿ ಅಂಡರ್ ಆರ್ಮ್ ಕಪ್ಪುಕಲೆ ನಿವಾರಣೆ ಆಗುತ್ತದೆ. 

ಇದನ್ನೂ ಓದಿ- Beauty Tips: ಬೇಸಿಗೆಯಲ್ಲಿ ಕೋಮಲ ತ್ವಚೆಗೆ ರೋಸ್ ವಾಟರ್ ಫೇಸ್ ಪ್ಯಾಕ್‌ಗಳು

ಸಕ್ಕರೆ: 
ಸಕ್ಕರೆ ಉತ್ತಮ ಸ್ಕ್ರಬ್ ಅಗಿಯೂ ಕಾರ್ಯನಿರ್ವಹಿಸುತ್ತದೆ. ಒಂದು ಚಮಚ ಸಕ್ಕರೆಯೊಂದಿಗೆ ಸ್ವಲ್ಪ ನಿಂಬೆ ರಸವನ್ನು ಬೆರೆಸಿ ಸ್ಕ್ರಬ್ ಮಾಡಿ. ನಿಯಮಿತವಾಗಿ ಈ ಮನೆಮದ್ದನ್ನು ಬಳಸುವುದರಿಂದ ಚರ್ಮ ಮೃದುವಾಗುವುದರ ಜೊತೆಗೆ ಅಂಡರ್ ಆರ್ಮ್ ನಲ್ಲಿರುವ ಕಪ್ಪು ಕಲೆ ನಿವಾರಣೆಯಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News