Shani Rashi Parivartan 2022: ನಾಳೆ ಶನಿ ಗ್ರಹದ ಸ್ಥಾನದಲ್ಲಿ ಆಗಲಿದೆ ಮಹಾ ಬದಲಾವಣೆ .! 12 ರಾಶಿಗಳ ಮೇಲೆ ಬೀರಲಿದೆ ಪರಿಣಾಮ

Shani Rashi Parivartan 2022: ನಾಳೆ ಅಂದರೆ 29ನೇ ಏಪ್ರಿಲ್ 2022 ಜ್ಯೋತಿಷ್ಯದ ದೃಷ್ಟಿಯಿಂದ ಬಹಳ ವಿಶೇಷವಾದ ದಿನವಾಗಿದೆ. ಈ ದಿನ, ಎರಡೂವರೆ ವರ್ಷಗಳ ನಂತರ, ಶನಿ ಗ್ರಹವು ತನ್ನ ರಾಶಿಯನ್ನು ಬದಲಾಯಿಸುವುದು ಮಾತ್ರವಲ್ಲ, 30 ವರ್ಷಗಳ ನಂತರ ತನ್ನದೇ ಆದ ರಾಶಿಚಕ್ರ ಚಿಹ್ನೆಯಾದ ಕುಂಭಕ್ಕೆ ಶನಿಯ ಪ್ರವೇಶವಾಗುತ್ತಿದೆ. 

Written by - Ranjitha R K | Last Updated : Apr 28, 2022, 11:26 AM IST
  • ನಾಳೆ ಅಂದರೆ 29ನೇ ಏಪ್ರಿಲ್ 2022 ಶನಿಯ ರಾಶಿ ಪರಿವರ್ತನೆ
  • ದ್ವಾದಶ ರಾಶಿಗಳ ಮೇಲೆಯೂ ಬೀರಲಿದೆ ಪರಿಣಾಮ
  • 30 ವರ್ಷಗಳ ನಂತರ ಕುಂಭ ರಾಶಿಗೆ ಶನಿಯ ಪ್ರವೇಶ
Shani Rashi Parivartan 2022: ನಾಳೆ ಶನಿ ಗ್ರಹದ ಸ್ಥಾನದಲ್ಲಿ ಆಗಲಿದೆ  ಮಹಾ ಬದಲಾವಣೆ .! 12 ರಾಶಿಗಳ ಮೇಲೆ ಬೀರಲಿದೆ ಪರಿಣಾಮ  title=
Shani Rashi Parivartan 2022 (file photo)

ಬೆಂಗಳೂರು : Shani Rashi Parivartan 2022: ಶನಿ ಗ್ರಹದ ಸ್ಥಾನದಲ್ಲಿ ಆಗುವ ಸಣ್ಣ ಬದಲಾವಣೆಯು ಕೂಡಾ ವ್ಯಕ್ತಿಯ ಜೀವನದ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುತ್ತದೆ.  ಈ ಬಾರಿ ಶನಿಯ ಸ್ಥಾನದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಶನಿಯು 30 ವರ್ಷಗಳ ನಂತರ ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ. ಇದು ಎಲ್ಲಾ 12 ರಾಶಿಚಕ್ರದ ಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಅಲ್ಲದೆ, ಶನಿಯ ಸಂಕ್ರಮಣದಿಂದ ಮೀನ ರಾಶಿಯವರಿಗೆ ಏಳೂವರೆ ವರ್ಷದ ಶನಿದೆಸೆ ಆರಂಭವಾಗಲಿದೆ.  ಕರ್ಕಾಟಕ-ವೃಶ್ಚಿ ಕ ರಾಶಿಯವರಿಗೆ ಎರಡೂವರೆ ವರ್ಷದ ಶನಿ ದೆಸೆ ನಡೆಯಲಿದೆ. 

ಮೇಷ: ಶನಿ ಸಂಚಾರದಿಂದ ಆದಾಯ ಹೆಚ್ಚಾಗಲಿದೆ. ಸಂಬಳ ಹೆಚ್ಚಾಗಬಹುದು. ವ್ಯಾಪಾರಿಗಳಿಗೆ ಲಾಭವಾಗಲಿದೆ. ಹೊಸ ಉದ್ಯೋಗ ಸಿಗಬಹುದು. ಸರ್ಕಾರಿ ನೌಕರರಿಗೆ ಇದು ಉತ್ತಮ ಸಮಯವಾಗಿರಲಿದೆ.  

ವೃಷಭ: ಕುಂಭ ರಾಶಿಗೆ ಶನಿಯ ಪ್ರವೇಶವಾಗುತ್ತಿರುವುದು ವೃಷಭ ರಾಶಿಯವರಿಗೆ  ಶುಭವಾಗಲಿದೆ.  ದೀರ್ಘಕಾಲದಿಂದ ಕಾಣುತ್ತಿರುವ ಕನಸು ನನಸಾಗಬಹುದು. ಅರ್ಧಕ್ಕೆ ನಿಂತಿರುವ ಕೆಲಸ ಪೂರ್ಣಗೊಳ್ಳಲಿದೆ. ವಿದೇಶ ಪ್ರವಾಸ ಮಾಡುವ ಸಾಧ್ಯತೆಗಳಿವೆ.

ಇದನ್ನೂ ಓದಿ : ಸೂರ್ಯ ಗ್ರಹಣ: 100 ವರ್ಷಗಳ ನಂತರ ಸೂರ್ಯಗ್ರಹಣದಲ್ಲಿ ವಿಶಿಷ್ಟ ಕಾಕತಾಳೀಯ!

ಮಿಥುನ: ಶನಿಯ ಸಂಚಾರದಿಂದ ಆದಾಯ ಹೆಚ್ಚಲಿದೆ. ಕೆಲಸದಲ್ಲಿ ಬರುತ್ತಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಈ ಸಮಯದಲ್ಲಿ ನೀವು ತಾಳ್ಮೆಯಿಂದ ಇದ್ದರೆ, ಅನೇಕ ಪ್ರಯೋಜನಗಳನ್ನು ಪಡೆಯಬಹುದು. 

ಕರ್ಕಾಟಕ: ಈ ಸಮಯದಲ್ಲಿ ಕರ್ಕ ರಾಶಿಯವರು  ತೊಂದರೆಗಳನ್ನು ಎದುರಿಸಬೇಕಾಗಿ ಬರಬಹುದು. ಕೆಲಸದ ಸ್ಥಳದಲ್ಲಿ ಮತ್ತು ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ಈ ಸಮಯದಲ್ಲಿ ಅತ್ಯಂತ ತಾಳ್ಮೆಯಿಂದ ಇರುವುದು ಒಳ್ಳೆಯದು.  

ಸಿಂಹ: ಈ ರಾಶಿಯ ಜನರು ಸುರಕ್ಷಿತವಾಗಿರಬೇಕು. ಶತ್ರುಗಳು, ರೋಗಗಳು ಹಾನಿ ಉಂಟುಮಾಡುವ ಕಾರಣ ಎಚ್ಚರಿಕೆಯಿಂದ ನಡೆಯುವುದು ಒಳ್ಳೆಯದು. ಯಾವುದೇ ವ್ಯಾಜ್ಯದಲ್ಲಿ ಸಿಲುಕಿಕೊಳ್ಳಬೇಡಿ. ಶನಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಿ. 

ಇದನ್ನೂ ಓದಿ : Shani Gochar 2022 : 30 ವರ್ಷಗಳ ನಂತರ, ಈ 3 ರಾಶಿಯಲ್ಲಿ ಭಾರಿ ಬದಲಾವಣೆ!

ಕನ್ಯಾ: ಈ ರಾಶಿಯವರಿಗೆ ಶನಿಸಾಡೇ ಸಾತಿಯ ಎರಡನೇ ಘಟ್ಟ ಆರಂಭವಾಗಲಿದೆ. ಈ ಹಂತವು ಹೆಚ್ಚಿನ ಹಾನಿಯನ್ನು ಉಂಟುಮಾಡುವುದಿಲ್ಲ. ವಿವಾಹಿತರಿಗೆ, ಈ ಸಮಯವು ಸುಲಭವಾಗಿ ಹಾದುಹೋಗುತ್ತದೆ.

ತುಲಾ: ತುಲಾ ರಾಶಿಯವರಿಗೆ ಶನಿಯ ರಾಶಿ ಬದಲಾವಣೆಯು ಉತ್ತಮ ಪರಿಣಾಮವನ್ನು ನೀಡಲಿದೆ. ಪ್ರತಿದಿನ ನಾಯಿಗೆ  ಆಹಾರ ನೀಡಿದರೆ ವಿಶೇಷ ಲಾಭವಾಗುತ್ತದೆ. 

ವೃಶ್ಚಿಕ: ಈ ರಾಶಿಯ ಮೇಲೆ ಶನಿಯ ರಾಶಿ ಬದಲಾವಣೆಯ ಪರಿಣಾಮ ಸರಾಸರಿ ಇರುತ್ತದೆ. ನೀವು ಒಳ್ಳೆಯ ಕಾರ್ಯಗಳನ್ನು ಮಾಡಿದರೆ, ಶನಿಯು ಉತ್ತಮ ಫಲಿತಾಂಶಗಳನ್ನು ನೀಡುತ್ತಾನೆ. ತಾಯಿಯ ಸೇವೆ ಮಾಡಿ. ಭೂಮಿ ಮತ್ತು ಮನೆಗಳನ್ನು ಖರೀದಿಸುವ ಸಾಧ್ಯತೆಗಳು ಕಂಡುಬರುತ್ತವೆ. 

ಧನು ರಾಶಿ : ಧನು ರಾಶಿಯವರು ಈ ಸಮಯವನ್ನು ತಾಳ್ಮೆಯಿಂದ ಕಳೆಯಬೇಕು. ಹಲವು ರೀತಿಯ ಹಾನಿಯಾಗುವ ಸಂಭವವಿದೆ. ನಾಲ್ಕು ಹಿಟ್ಟಿನ ಉಂಡೆಗಳಿಗೆ ಅರಿಶಿನವನ್ನು ಹಚ್ಚಿ ಮತ್ತು ಪ್ರತಿ ಗುರುವಾರ ಹಸುವಿಗೆ ತಿನ್ನಿಸಿ.

ಇದನ್ನೂ ಓದಿ : ಶುಕ್ರ ಸಂಚಾರ ಪರಿಣಾಮ: ಇಂದಿನಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟ

ಮಕರ: ಶನಿಯು ಮಕರ ರಾಶಿಯನ್ನು ಬಿಟ್ಟು ಕುಂಭ ರಾಶಿಯನ್ನು ಪ್ರವೇಶಿಸುವನು.ಕುಂಭ ಮತ್ತು ಮತ್ತು ಮಕರ ಎರಡೂ ಶನಿಯ ಚಿಹ್ನೆಗಳು. ಮಕರ ರಾಶಿಯವರಿಗೆ ಈ ಬದಲಾವಣೆ ಶುಭಕರವಾಗಿರುತ್ತವೆ. ದೊಡ್ಡ ಮಟ್ಟದ ಲಾಭವಾಗಬಹುದು.  

ಕುಂಭ: ಕುಂಭ ರಾಶಿಯವರಿಗೆ ಶನಿಯು ಕೂಡ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಆರೋಗ್ಯ ಉತ್ತಮವಾಗಿರುತ್ತದೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. 

ಮೀನ: ಮೀನ ರಾಶಿಯವರಿಗೆ ಶನಿಯ ಸಾಡೇ ಸಾತಿ  ಆರಂಭವಾಗಲಿದೆ. ಈ ಸ್ಮಾಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಪೊಲೀಸ್ ಕೇಸ್ ನಿಂದ ದೂರವಿರಿ. ಯಾವುದೇ ರೋಗ ಬರಬಹುದು. ಶನಿಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಿ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News