ವಡೋದರಾ: ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ 2024-25ರ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ವಿದರ್ಭವನ್ನು 36 ರನ್‌ಗಳಿಂದ ಸೋಲಿಸುವ ಮೂಲಕ ದಾಖಲೆಯ ಐದನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಟಾಸ್ ಗೆದ್ದ ವಿದರ್ಭ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು, ಈ ಸಂದರ್ಭದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕರ್ನಾಟಕ ತಂಡವು ಸ್ಮರಣ್ ರವಿಚಂದ್ರನ್ (101) ಅವರ ಭರ್ಜರಿ ಶತಕದ ನೆರವಿನಿಂದ 50 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿತು. ಇದೆ ವೇಳೆ ಸ್ಮರಣ್ ಅವರಿಗೆ ಸಾಥ್ ನೀಡಿದ ಕೃಷ್ಣನ್ ಶ್ರೀಜೀತ್ 78, ಹಾಗೂ ಅಭಿನವ್ ಮನೋಹರ್ 79 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.
ಇನ್ನೊಂದೆಡೆಗೆ ಕರ್ನಾಟಕ ತಂಡವು ನೀಡಿದ ಈ 349 ರನ್ ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ವಿದರ್ಭ ತಂಡವು ಧ್ರುವ್ ಶೋರೆ ಅವರ (110) ಭರ್ಜರಿ ಶತಕ ಹಾಗೂ ಹಾಗೂ ಹರ್ಷ್ ದುಬೆ ಅವರ 63 ರನ್ ಗಳ ನೆರವಿನಿಂದ ಭರ್ಜರಿ ಹೋರಾಟ ನಡೆಸಿತು.ಆದರೆ ಕರ್ನಾಟಕದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ವಾಸುಕಿ ಕೌಶಿಕ್, ಪ್ರಸಿದ್ಧ ಕೃಷ್ಣ, ಅಭಿಲಾಷ್ ಶೆಟ್ಟಿ ತಲಾ ಮೂರು ವಿಕೆಟ್ ಗಳಂತೆ ಒಟ್ಟು ಒಂಬತ್ತು ವಿಕೆಟ್ ಗಳನ್ನು ಕಬಳಿಸುವ ಮೂಲಕ ವಿದರ್ಭ ತಂಡದ ಗೆಲುವಿನ ಆಸೆಗೆ ತಣ್ಣೀರು ಎರೆಚಿದರು.ಅಂತಿಮವಾಗಿ ಕರುಣ್ ನಾಯರ್ ನೇತೃತ್ವದ ವಿದರ್ಭ ತಂಡವು 312 ರನ್‌ಗಳಿಗೆ ಆಲೌಟ್ ಆಗಿ 36 ರನ್‌ಗಳಿಂದ ಸೋಲನ್ನು ಅನುಭವಿಸಿತು.
𝗞𝗮𝗿𝗻𝗮𝘁𝗮𝗸𝗮 𝗔𝗿𝗲 𝗧𝗵𝗲 #𝗩𝗶𝗷𝗮𝘆𝗛𝗮𝘇𝗮𝗿𝗲𝗧𝗿𝗼𝗽𝗵𝘆 𝗖𝗵𝗮𝗺𝗽𝗶𝗼𝗻𝘀! 🏆 👏
Their 5⃣th Final & it's their5⃣th Title! 🙌 🙌
Karnataka beat the spirited Vidarbha side 36 by runs to win the #Final! 👌 👌
Scorecard ▶️ https://t.co/ZZjfWXaajB @IDFCFIRSTBank pic.twitter.com/Y7z0Pcho6w
— BCCI Domestic (@BCCIdomestic) January 18, 2025
ಇದೆ ವೇಳೆ ಕರ್ನಾಟಕ ತಂಡವು ಐದನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಗೆಲ್ಲುವ ಮೂಲಕ ಅತಿ ಹೆಚ್ಚು ಬಾರಿ ಈ ಟ್ರೋಪಿ ಗೆದ್ದ ತಂಡ ಎನ್ನುವ ದಾಖಲೆಯನ್ನು ದೇಸಿ ಕ್ರಿಕೆಟ್ ನಲ್ಲಿ ನಿರ್ಮಿಸಿದೆ.ಈಗ ತಲಾ ಐದು ಟ್ರೋಪಿಗಳೊಂದಿಗೆ ಕರ್ನಾಟಕ ಮತ್ತು ತಮಿಳುನಾಡು ಅಗ್ರಸ್ತಾನದಲ್ಲಿವೆ.
ಕರ್ನಾಟಕ ತಂಡವು 2013-14 ರಲ್ಲಿ ರೇಲ್ವೇಸ್ ವಿರುದ್ಧ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇನ್ನೂ ಕೊನೆಯದಾಗಿ 2019-20 ರಲ್ಲಿ ತಮಿಳುನಾಡಿನ ವಿರುದ್ಧ ನಾಲ್ಕನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿದಿತ್ತು.ಈಗ ವಿದರ್ಭ ವಿರುದ್ಧ 36 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಐದನೇ ಬಾರಿಗೆ ಟ್ರೋಪಿಯನ್ನು ಗೆದ್ದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.