Cyber frauds in Bengaluru: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವವರೇ ಇಲ್ಲದ್ದಾಗಿದ್ದಾರೆ. ಸೈಬರ್ ವಂಚನೆಯಿಂದ ಪ್ರತಿದಿನವೂ ಅನೇಕರು ಕಷ್ಟಪಟ್ಟು ಬೆವರು ಹರಿಸಿ ದುಡಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ವಿವಿಧ ರೀತಿಯಲ್ಲಿ ಗಾಳ ಹಾಕುವ ಸೈಬರ್ ವಂಚಕರ ಬಲೆಗೆ ಬುದ್ಧಿವಂತರೇ ಬೀಳುತ್ತಿದ್ದಾರೆ.
ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಹೊಸ ಮೊಬೈಲ್ವೊಂದನ್ನು ಕಳುಹಿಸಿ, ಅದರ ಮೂಲಕವೇ ಸೈಬರ್ ವಂಚಕರು ಬರೋಬ್ಬರಿ 2.80 ಕೋಟಿ ರೂಪಾಯಿ ದೋಚಿದ್ದಾರೆ. ಇದು ಸೈಬರ್ ಕ್ರೈಂ ಖದೀಮರ ಹೊಸ ಪ್ಲಾನ್ ಆಗಿದೆ. ಹೀಗಾಗಿ ಪ್ರತಿಯೊಬ್ಬರೂ ಸಹ ಇಂತಹ ವಂಚನೆಗಳಿಂದ ಎಚ್ಚರಿಕೆಯಿಂದ ಇರಬೇಕು ಅಂತಾ ಪೊಲೀಸರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಒಂದೇ Reels ಮೂಲಕ ಗಿನ್ನಿಸ್ ದಾಖಲೆ ಬರೆದ ಯುವಕ..! ಬ್ಯಾಕ್.. ಫ್ರಂಟ್ ತೋರಿಸೋದು ಬಿಟ್ಟು ಈ ರೀತಿ ವಿಡಿಯೋ ಮಾಡಿ..
ಅಂದಹಾಗೆ ಬೆಂಗಳೂರಿನ ಟೆಕ್ಕಿಯೊಬ್ಬರ ವಿಳಾಸಕ್ಕೆ ಸೈಬರ್ ವಂಚಕರು, ʼನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ, ಅದಕ್ಕೆ ಗಿಫ್ಟ್ ಆಗಿ ಮೊಬೈಲ್ ಬಂದಿದೆ ಅಂತಾ ಕಳುಹಿಸಿದ್ದರು. ಗಿಫ್ಟ್ ಸ್ವೀಕರಿಸಿದ ಟೆಕ್ಕಿ ಸಿಮ್ ಅನ್ನು ಮೊಬೈಲ್ನಲ್ಲಿ ಹಾಕಿದ್ದಾರೆ. ಸಿಮ್ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿಯನ್ನ ಸೈಬರ್ ಖದೀಮರು ತಮ್ಮ ಖಾತೆಗೆ ಜಮಾ ಮಡಿಕೊಂಡಿದ್ದಾರೆ.
ವಂಚಕರು ಮೊಬೈಲ್ನಲ್ಲಿ ಮೊದಲೇ ಕೆಲವು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿದ್ದರು. ಟೆಕ್ಕಿ ಮೊಬೈಲ್ಗೆ ಸಿಮ್ ಹಾಕುತ್ತಿದ್ದಂತೆ ಹಲವಾರು ಸಂದೇಶಗಳು ಬಂದಿವೆ. ಈ ಮೊಬೈಲ್ಗೆ ಬರುವ ಸಂದೇಶಗಳು ಮತ್ತು OTPಗಳು ತಮಗೂ ಬರುವಂತೆ ವಂಚಕರು ಸೆಟ್ ಮಾಡಿದ್ದರಂತೆ. ಸಂದೇಶಗಳು ಮತ್ತು OTP ಮೂಲಕ ಟೆಕ್ಕಿಯ ಬ್ಯಾಂಕ್ ಖಾತೆಯ ಮಾಹಿತಿ ಪಡೆದಿದ್ದಾರೆ.
ಇದನ್ನೂ ಓದಿ: ಶಿಕ್ಷಕಿ ಜೊತೆ ಪ್ರಿನ್ಸಿಪಾಲ್ ಕಾಮದಾಟ, ಮೈಮರೆತು ಶಾಲೆಯಲ್ಲಿಯೇ.. "ಮೌಖಿಕ ಸಂಭೋಗ ".! ವಿಡಿಯೋ ವೈರಲ್..
ನಂತರ ಟೆಕ್ಕಿಯ ಬ್ಯಾಂಕ್ ಅಕೌಂಟ್ ಸೇರಿ ಎಲ್ಲವನ್ನು ಪರಿಶೀಲಿಸಿದ್ದಾರೆ. ಕೊನೆಗೆ ಬ್ಯಾಂಕ್ ಎಫ್ಡಿಯಲ್ಲಿ ಇಟ್ಟಿದ್ದ 2.80 ರೂ.ವನ್ನು ಖದೀಮರು ಎಗರಿಸಿದ್ದಾರಂತೆ. ಈ ಬಗ್ಗೆ ಟೆಕ್ಕಿ ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.