Shani Jayanti 2022: ಶನಿ ಜಯಂತಿಯ ದಿನ ಈ ರೀತಿ ಕಪ್ಪು ಬಣ್ಣದ ದಾರ ಧರಿಸಿ, ರಾಹು-ಕೇತು ಪ್ರಕೊಪದಿಂದ ಕೂಡ ಮುಕ್ತಿ

Shani Jayanti Remedies: ಶನಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲು, ಶನಿದೋಷ, ಸಾಡೆಸಾತಿ, ಶನಿಯ ಎರಡೂವರೆ ವರ್ಷಗಳ ಕಾಟದಿಂದ ಮುಕ್ತಿ ಪಡೆಯಲು ಶನಿ ಜಯಂತಿ ಅತ್ಯತ್ತಮ ದಿನವಾಗಿದೆ. ಈ ದಿನ ಮಾಡಲಾಗುವ ಕೆಲ ವಿಶೇಷ ಉಪಾಯಗಳು ಹೆಚ್ಚು ಮತ್ತು ಬೇಗ ಪರಿಹಾರ ಒದಗಿಸುತ್ತವೆ. 

Written by - Nitin Tabib | Last Updated : May 22, 2022, 11:33 AM IST
  • ಈ ಬಾರಿ ಮೇ 30 ರಂದು ಶನಿ ಜಯಂತಿ ಉತ್ಸವವನ್ನು ಆಚರಿಸಲಾಗುತ್ತಿದೆ
  • ಈ ದಿನ ಕಪ್ಪು ದಾರ ಧರಿಸುವುದು ಶ್ರೇಯಸ್ಕರ ಎಂದು ಹೇಳಲಾಗುತ್ತದೆ
  • ಹಾಗಾದರೆ ಯಾವಾಗ ಮತ್ತು ಹೇಗೆ ಕಪ್ಪು ದಾರವನ್ನು ಧರಿಸಬೇಕು ತಿಳಿದುಕೊಳ್ಳೋಣ ಬನ್ನಿ.
Shani Jayanti 2022: ಶನಿ ಜಯಂತಿಯ ದಿನ ಈ ರೀತಿ ಕಪ್ಪು ಬಣ್ಣದ ದಾರ ಧರಿಸಿ, ರಾಹು-ಕೇತು ಪ್ರಕೊಪದಿಂದ ಕೂಡ ಮುಕ್ತಿ title=
Shani Jayanti 2022

Shani Jayanti 2022: ಹಲವು ಜನರು ತಮ್ಮ ಕಾಲು, ಕೈ ಅಥವಾ ಕುತ್ತಿಗೆಗೆ ಕಪ್ಪು ದಾರವನ್ನು ಧರಿಸಿರುವುದನ್ನು ನೀವು ಗಮನಿಸಿರಬಹುದು. ಇದರ ಹಿಂದೆ ಹಲವು ಕಾರಣಗಳಿವೆ. ಕಪ್ಪು ದಾರವನ್ನು ಧರಿಸುವುದರ ಪ್ರಯೋಜನಗಳನ್ನು ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಕಪ್ಪು ಬಣ್ಣವು ಶನಿ ದೇವರಿಗೆ ಸಂಬಂಧಿಸಿದ ಬಂನವಗಿದೆ. ಪ್ರತಿ ವರ್ಷ ಜ್ಯೇಷ್ಠ ಮಾಸದ ಅಮಾವಾಸ್ಯೆಯಂದು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 30 ಶನಿ ಜಯಂತಿ ಆಚರಿಸಲಾಗುತ್ತಿದೆ. ಈ ದಿನ ಶನಿದೇವನನ್ನು ಮೆಚ್ಚಿಸಲು ಮಾಡಲಾಗುವ ಉಪಾಯಗಳು ತ್ವರಿತ ಪರಿಣಾಮವನ್ನು ತೋರಿಸುತ್ತವೆ. ಜಾತಕದಲ್ಲಿ ಶನಿದೋಷ, ಸಾಡೇಸಾತಿ, ಎರಡೂವರೆ ವರ್ಷಗಳ ಶನಿ ದೆಸೆ ಎದುರಿಸುತ್ತಿರುವವರು ಈ ದಿನ ಖಂಡಿತ ಕೆಲ ಉಪಾಯಗಳನ್ನು ಅನುಸರಿಸಬೇಕು. ಕಪ್ಪು ದಾರವನ್ನು ಧರಿಸುವುದು ಸಹ ಈ  ಉಪಾಯಗಳಲ್ಲಿ ಶಾಮೀಲಾಗಿದೆ.

ಕಪ್ಪು ದಾರದಿಂದ ಧನಾತ್ಮಕತೆಯ ಸಂಚಾರ ಹೆಚ್ಚಾಗುತ್ತದೆ
ಜ್ಯೋತಿಷ್ಯ ಶಾಸ್ತ್ರ
, ವಾಸ್ತು ಶಾಸ್ತ್ರದ ಪ್ರಕಾರ ಕಪ್ಪು ದಾರವನ್ನು ದೇಹದ ಮೇಲೆ ಕಟ್ಟುವುದರಿಂದ ದೇಹದಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಉಂಟಾಗುತ್ತದೆ ಮತ್ತು ನಕಾರಾತ್ಮಕತೆ ದೂರವಾಗುತ್ತದೆ ಎನ್ನಲಾಗಿದೆ. ಇದಲ್ಲದೇ ಪಾದಗಳಿಗೆ ಕಪ್ಪು ದಾರ ಕಟ್ಟಿಕೊಂಡರೆ ಶನಿಯ ಜೊತೆಗೆ ರಾಹು-ಕೇತು ಗ್ರಹಗಳ ಪ್ರಕೋಪದಿಂದಲೂ ಕೂಡ ಪರಿಹಾರ ಸಿಗುತ್ತದೆ. ಇದು ಶನಿ ದೋಷವನ್ನು ನಿವಾರಿಸುತ್ತದೆ ಮತ್ತು ಶನಿ ದೋಷದಿಂದ ಉಂಟಾಗುವ ಸಮಸ್ಯೆಗಳಿಂದ ರಕ್ಷಿಸುತ್ತದೆ.

ಕಾಲಿಗೆ ಕಪ್ಪು ದಾರವನ್ನು ಕಟ್ಟಲು ಇದು ಸರಿಯಾದ ಮಾರ್ಗವಾಗಿದೆ
ಕಾಲಿಗೆ ಕಪ್ಪು ದಾರವನ್ನು ಕಟ್ಟುವುದು ಹೆಚ್ಚು ಪ್ರಯೋಜನಕಾರಿಯಾಗಿದ್ದರೂ ಕೂಡ ನೀವು ಅದನ್ನು ಕೈಯಲ್ಲಿ ಅಥವಾ ಕುತ್ತಿಗೆಯಲ್ಲಿಯೂ ಕೂಡ ಧರಿಸಬಹುದು. ಕಾಲು ನೋವು ಇರುವವರು ಎಡಗಾಲಿನಲ್ಲಿಯೇ ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕು. ಮತ್ತೊಂದೆಡೆ, ಹೊಟ್ಟೆ ನೋವಿನ ಸಮಸ್ಯೆ ಇರುವವರು, ಕಾಲಿನ ಬೆರಳಿಗೆ ಕಪ್ಪು ದಾರವನ್ನು ಕಟ್ಟಿಕೊಳ್ಳಿ. ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕ ಶಕ್ತಿಗಳ ಪರಿಣಾಮಗಳನ್ನು ತಪ್ಪಿಸಲು ಕಪ್ಪು ದಾರ ತುಂಬಾ ಉಪಯುಕ್ತವಾಗಿದೆ. ಶನಿ ದೋಷದ ಜೊತೆಗೆ ಕಪ್ಪು ದಾರವನ್ನು ಧರಿಸುವುದರಿಂದ ರಾಹು-ಕೇತುಗಳ ದುಷ್ಪರಿಣಾಮಗಳು ದೂರವಾಗುತ್ತವೆ. ನಿಯಮಗಳ ಪ್ರಕಾರ ಕಪ್ಪು ದಾರವನ್ನು ಧರಿಸಿದರೆ, ಅದರ ಸಂಪೂರ್ಣ ಪ್ರಯೋಜನ ಲಭಿಸುತ್ತವೆ ಎಂಬುದನ್ನು ನೆನಪಿನಲ್ಲಿಡಿ.

ಅಂದಹಾಗೆ, ಶನಿ ಜಯಂತಿಯ ದಿನ ಕಪ್ಪು ದಾರವನ್ನು ಧರಿಸುವುದು ಉತ್ತಮ. ಇದಲ್ಲದೇ ಸಾಮಾನ್ಯವಾಗಿ ಶನಿವಾರದ ದಿನವೂ ಕೂಡ ನೀವು ಕಪ್ಪು ದಾರವನ್ನು ಧರಿಸಬಹುದು.

>> ಕಪ್ಪು ದಾರದಲ್ಲಿ 9 ಗಂಟುಗಳನ್ನು ಹಾಕಿ, ನಂತರ ಶನಿ ದೇವಸ್ಥಾನ ಅಥವಾ ಭೈರವನ ದೇವಸ್ಥಾನಕ್ಕೆ ಹೋಗಿ ಧರಿಸಿ. ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪ್ರಾಪ್ತಿಯಾಗುತ್ತದೆ.

>> ಅಭಿಜಿತ್ ಅಥವಾ ಬ್ರಹ್ಮ ಮುಹೂರ್ತದಂತಹ ಶುಭ ಸಮಯದಲ್ಲಿ ಕಪ್ಪು ದಾರವನ್ನು ಧರಿಸಿ.

ಇದನ್ನೂ ಓದಿ-Bay Leaf: ಅಡುಗೆ ಮನೆಯಲ್ಲಿ ಸಿಗೋ ಈ ಎಲೆಯಿಂದ ದೇಹದ ಬೊಜ್ಜು ಕರಗಿಸಲು ಸಾಧ್ಯ

>> ಕಪ್ಪು ದಾರವನ್ನು ಧರಿಸಿದ ನಂತರ, ಶನಿಯ ಬೀಜ ಮಂತ್ರವನ್ನು 21 ಬಾರಿ ಜಪಿಸಿ.

ಇದನ್ನೂ ಓದಿ-Astro Remedies: ನಿಮಗೆ ಬಹಳಷ್ಟು ಹಣ-ಸಮೃದ್ಧಿ-ಸಂತೋಷ ಬೇಕಿದ್ದರೆ ಪ್ರತಿದಿನ ಈ 5 ಕೆಲಸ ಮಾಡಿ

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು, ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಥಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News