ಈ ನಾಲ್ಕು ಆಹಾರ ವಸ್ತುಗಳಿಗೆ Expiry Date ಇರುವುದೇ ಇಲ್ಲ, ಯಾವಾಗ ಬೇಕಾದರೂ ಉಪಯೋಗಿಸಬಹುದು

No Expiry Date Products:ಎಕ್ಸ್ ಪೈರಿ ಡೇಟ್ ಅನ್ನುವುದೇ ಇಲ್ಲದ ಕೆಲವೊಂದು ಆಹಾರ ವಸ್ತುಗಳಿವೆ. ಅವುಗಳನ್ನು ಯಾವಾಗ ಬೇಕಾದರೂ ಬಳಸಬಹುದು.  ಅವು ಯಾವುವೆಂದರೆ,   

Written by - Ranjitha R K | Last Updated : Sep 13, 2022, 11:05 AM IST
  • ಆಹಾರ ಪದಾರ್ಥಗಳಿಗೆ ಎಕ್ಸ್ ಪೈರಿ ಡೇಟ್ ಇರುತ್ತದೆ
  • ಈ ದಿನಾಂಕದ ನಂತರ ಅದನ್ನು ಬಳಸುವುದು ಹಾನಿಕರ
  • ಎಕ್ಸ್ ಪೈರಿ ಡೇಟ್ ಇಲ್ಲದ ಕೆಲವು ಆಹಾರಗಳಿವೆ
ಈ ನಾಲ್ಕು  ಆಹಾರ ವಸ್ತುಗಳಿಗೆ  Expiry Date ಇರುವುದೇ ಇಲ್ಲ, ಯಾವಾಗ ಬೇಕಾದರೂ ಉಪಯೋಗಿಸಬಹುದು title=
No Expiry Date Products (file photo)

No Expiry Date Products : ಶಾಪಿಂಗ್ ಗೆ ಹೋದಾಗ ಅಲ್ಲಿ ಕಣ್ಣಿಗೆ ಬೀಳುವ ಎಲ್ಲಾ ವಸ್ತುಗಳನ್ನು ಖರೀದಿಸಿ ತರುವ ಮನಸ್ಸಾಗುತ್ತದೆ. ಅದರಲ್ಲೂ ಅಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ನಡೆಯುತ್ತಿದ್ದರೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಖರೀದಿಸಿ ತರುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ ಈ ವಸ್ತುಗಳನ್ನು ನಿಗದಿತ ದಿನಾಂಕದೊಳಗೆ ಬಳಸಿ ಖಾಲಿ ಮಾಡಬೇಕಾಗುತ್ತದೆ. ಇಲ್ಲವಾದರೆ ಅದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಆದರೆ, ಎಕ್ಸ್ ಪೈರಿ ಡೇಟ್ ಅನ್ನುವುದೇ ಇಲ್ಲದ ಕೆಲವೊಂದು ಆಹಾರ ವಸ್ತುಗಳಿವೆ. ಅವುಗಳನ್ನು ಯಾವಾಗ ಬೇಕಾದರೂ ಬಳಸಬಹುದು.  ಅವು ಯಾವುವೆಂದರೆ : 

ವಿನೆಗರ್ :
ವಿನೆಗರ್ ಅನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಇದನ್ನು ಉಪ್ಪಿನಕಾಯಿಯಲ್ಲಿಯೂ ಹಾಕಲಾಗುತ್ತದೆ ಇದರಿಂದ ಅವು ಉಪ್ಪಿನಕಾಯಿ ದೀರ್ಘಕಾಲ ಬಾಳಿಕೆ ಬರುತ್ತದೆ. ಇದಲ್ಲದೆ, ವಿನೆಗರ್ ಜೊತೆಗೆ ಈರುಳ್ಳಿ ಆಹಾರಕ್ಕೆ ಹೆಚ್ಚಿನ  ಘಮವನ್ನು ನೀಡುತ್ತದೆ. ವಿನೆಗರ್ ಅನ್ನು   ಎಕ್ಸ್ ಪೈರಿ  ದಿನಾಂಕದ ನಂತರವೂ ಬಳಸಬಹುದು.

ಇದನ್ನೂ ಓದಿ : Heart Health: ಹೃದಯವನ್ನು ಹೆಲ್ದಿಯಾಗಿಡಲು ಈ ಪೇಯಗಳು ನಿಮ್ಮ ಆಹಾರದಲ್ಲಿರಲಿ

ಸಕ್ಕರೆ :
ಸಕ್ಕರೆಯನ್ನು ಸಹ ದೀರ್ಘಕಾಲದವರೆಗೆ ಬಳಸಬಹುದು. ಸಕ್ಕರೆ ಪ್ಯಾಕೆಟ್‌ನಲ್ಲಿ 2 ವರ್ಷಗಳವರೆಗಿನ ಎಕ್ಸ್ ಪೈರಿ  ದಿನಾಂಕವನ್ನು ಬರೆಯುವುದನ್ನು ಕಾಣಬಹುದು. ಆದರೆ ಗಾಳಿಯಾಡದ ಕಂಟೇನರ್‌ನಲ್ಲಿ ಸರಿಯಾಗಿ ಸಂಗ್ರಹಿಸಿಟ್ಟುಕೊಂಡರೆ  ಸಕ್ಕರೆ ಏನೂ ಆಗುವುದಿಲ್ಲ. 

ಜೇನು ತುಪ್ಪ : 
ಸರಿಯಾಗಿ ಸಂಗ್ರಹಿಸಿದ ಜೇನು ತುಪ್ಪ ವರ್ಷಗಳವರೆಗೆ ಹಾಳಾಗುವುದಿಲ್ಲ. ಗಾಳಿಯಾಡದ ಡಬ್ಬದಲ್ಲಿ ಇದನ್ನು ಮುಚ್ಚಿಡಬೇಕು. ಜೇನುತುಪ್ಪವು ಕಡಿಮೆ ಆಮ್ಲೀಯ ಪಿಹೆಚ್ ಅನ್ನು ಹೊಂದಿರುತ್ತದೆ. ಆದ್ದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ. ಹಳೆಯ ಜೇನು ಹೆಪ್ಪುಗಟ್ಟುತ್ತದೆ, ಆದರೆ ಅದನ್ನು ಮತ್ತೆ ಬಳಸಬಹುದು. 
 
 ಇದನ್ನೂ ಓದಿ : Health Tips : ಆರೋಗ್ಯಕರ, ಬಲವಾದ ಸ್ನಾಯುಗಳಿಗೆ ವೈದ್ಯರ ಸಲಹೆ ಇಲ್ಲಿದೆ

ಪಾಸ್ಟಾ :
ಪಾಸ್ಟಾವನ್ನು ಗಾಳಿಯಾಡದ ಡಬ್ಬದಲ್ಲಿ ಸರಿಯಾಗಿ ಸಂಗ್ರಹಿಸಿದರೆ, ಅದು ವರ್ಷಗಳವರೆಗೆ ಹಾಗೆಯೇ ಇರುತ್ತದೆ. ಹೌದು, ಪಾಸ್ಟಾದಲ್ಲಿ ಕೂಡಾ ಕೀಟಗಲಾಗುವುದಿಲ್ಲ.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News