Lychee Health benefits: ಬೇಸಿಗೆಯಲ್ಲಿ ಲಿಚಿಹಣ್ಣು ಸೇವಿಸುವುದರಿಂದ ಸಿಗುತ್ತೆ ಅನೇಕ ಪ್ರಯೋಜನಗಳು

ಲಿಚಿಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಕೂಡ ಇದ್ದು, ಇದು ಚರ್ಮದ ಮೇಲಿನ ಮೊಡವೆ ಸಮಸ್ಯೆಯನ್ನು ತಡೆಯುತ್ತದೆ.

Written by - Puttaraj K Alur | Last Updated : Feb 26, 2022, 09:16 AM IST
  • ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸೀಮಿತ ಪ್ರಮಾಣದಲ್ಲಿ ಲಿಚಿಹಣ್ಣು ಸೇವಿಸಬೇಕು
  • ಲಿಚಿಯಲ್ಲಿನ ನಾರಿನಂಶವು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ
  • ಲಿಚಿಯಲ್ಲಿ ಫೈಬರ್ ಜೊತೆಗೆ ನೀರು ಕೂಡ ಹೇರಳವಾಗಿದ್ದು, ತೂಕ ನಷ್ಟಕ್ಕೆ ಸಹಕಾರಿಯಾಗಿದೆ
Lychee Health benefits: ಬೇಸಿಗೆಯಲ್ಲಿ ಲಿಚಿಹಣ್ಣು ಸೇವಿಸುವುದರಿಂದ ಸಿಗುತ್ತೆ ಅನೇಕ ಪ್ರಯೋಜನಗಳು  title=
ಲಿಚಿ ತೂಕ ನಷ್ಟಕ್ಕೆ ಸಹಕಾರಿಯಾಗಿದೆ

ನವದೆಹಲಿ: ಮಾವು, ಕಲ್ಲಂಗಡಿ ಮತ್ತು ಕರ್ಬೂಜ(Cantaloupe)ದಂತೆ ಲಿಚಿ ಕೂಡ ಬೇಸಿಗೆಯ ಪ್ರಮುಖ ಹಣ್ಣು. ಲಿಚಿ ತುಂಬಾ ಸಿಹಿ ಮತ್ತು ರಸಭರಿತವಾಗಿರುತ್ತದೆ. ಆದ್ದರಿಂದ ಹೆಚ್ಚಿನ ಜನರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಲಿಚಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಇದಕ್ಕೆ ಕಾರಣವೆಂದರೆ ಲಿಚಿಯ ಪರಿಣಾಮವು ಬಿಸಿಯಾಗಿರುತ್ತದೆ ಮತ್ತು ಹೆಚ್ಚು ಲಿಚಿ ತಿನ್ನುವುದರಿಂದ ಅನೇಕ ರೀತಿಯ ಹಾನಿಯುಂಟಾಗುತ್ತದೆ. ಲಿಚಿ ನಿಮಗಿಷ್ಟವಾಗಿದ್ದರೆ ಅದನ್ನು ತಿನ್ನುವ ಮೊದಲು ಅದರ ಅನುಕೂಲಗಳು ಮತ್ತು ಅನಾನುಕೂಲಗಳ(Litchi Fruit Disadvantages)ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

ಇದನ್ನೂ ಓದಿ: Weight Loss: ವ್ಯಾಯಾಮದ ಅಗತ್ಯವಿಲ್ಲ, ತ್ವರಿತವಾಗಿ ತೂಕ ಕಳೆದುಕೊಳ್ಳಲು ಸಹಕಾರಿ ಈ ಎಣ್ಣೆ

ಲಿಚಿ ಹಣ್ಣು ಸೇವಿಸುವುದರ 4 ದೊಡ್ಡ ಪ್ರಯೋಜನಗಳು

1. ಲಿಚಿಯಲ್ಲಿ ನಾರಿನಂಶವು ಅಧಿಕವಾಗಿರುತ್ತದೆ(Lychee Health Benefits), ಆದ್ದರಿಂದ ಇದು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ ವಾಂತಿ, ಹೊಟ್ಟೆ ನೋವು ಅಥವಾ ಹೊಟ್ಟೆಯ ಹುಣ್ಣುಗಳಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಲಿಚಿ ತೆಗೆದುಹಾಕುತ್ತದೆ.

2. ಲಿಚಿಯಲ್ಲಿ ಫೈಬರ್ ಜೊತೆಗೆ ನೀರು ಕೂಡ ಹೇರಳವಾಗಿದೆ. ಅಲ್ಲದೆ ಇದು ಕೊಬ್ಬನ್ನು ಹೊಂದಿರುವುದಿಲ್ಲ ಮತ್ತು ಕ್ಯಾಲೊರಿಗಳು ಸಹ ಕಡಿಮೆ. ಆದ್ದರಿಂದ ಲಿಚಿ ತಿಂದ ನಂತರ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತೆ ನೀವು overeatingನಿಂದ ಪಾರಾಗುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ ಲಿಚಿ ತೂಕ ನಷ್ಟಕ್ಕೆ ಕೂಡ ಸಹಾಯ(Litchi Weight Loss) ಮಾಡುತ್ತದೆ.

3. ಬೇಸಿಗೆಯ ಕಾಲದಲ್ಲಿ ಅತಿಯಾದ ಬೆವರುವಿಕೆಯಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಲಿಚಿಯು ಸಾಕಷ್ಟು ನೀರನ್ನು ಒಳಗೊಂಡಿರುವ ಹಣ್ಣಾಗಿದೆ ಮತ್ತು ಇದು ದೇಹವನ್ನು ಒಳಗಿನಿಂದಲೇ ತಂಪಾಗಿಡಲು ಸಹಾಯ ಮಾಡುತ್ತದೆ.

4. ಲಿಚಿ(Lychee Fruit)ಯಲ್ಲಿ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಕೂಡ ಇದ್ದು, ಇದು ಚರ್ಮದ ಮೇಲಿನ ಮೊಡವೆ ಸಮಸ್ಯೆಯನ್ನು ತಡೆಯುತ್ತದೆ ಮತ್ತು ನಿಮ್ಮ ಚರ್ಮಕ್ಕೆ ಹೊಸ ಹೊಳಪನ್ನು ನೀಡುತ್ತದೆ.

ಇದನ್ನೂ ಓದಿ: Summer Food: ಬೇಸಿಗೆ ಕಾಲದಲ್ಲಿ ನಿಮ್ಮ ಡಯಟ್ ನಲ್ಲಿರಲಿ ಈ 5 ಆಹಾರಗಳು, ಯಾವತ್ತು ಫಿಟ್ನೆಸ್ ನಿಮ್ಮದಾಗಿರುತ್ತದೆ

ಲಿಚಿ ತಿನ್ನುವುದರಿಂದ ಆಗುವ ದುಷ್ಪರಿಣಾಮಗಳು  

1. ಲಿಚಿ ಹಣ್ಣಿನ ಪರಿಣಾಮವು ಬಿಸಿಯಾಗಿರುತ್ತದೆ ಎಂದು ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಆದ್ದರಿಂದ ಹೆಚ್ಚು ಲಿಚಿಯನ್ನು ತಿನ್ನುವುದರಿಂದ ಮೂಗಿನ ರಕ್ತಸ್ರಾವ, ಅತಿಸಾರ ಅಥವಾ ಜ್ವರ ಕೂಡ ಉಂಟಾಗುತ್ತದೆ.

2. ಹೆಚ್ಚು ಲಿಚಿ ತಿನ್ನುವುದರಿಂದ ಗಂಟಲು ನೋವು(Litchi Fruit Benefits) ಮತ್ತು ಸೋಂಕಿನ ಅಪಾಯವೂ ಎದುರಾಗಬಹುದು.

3. ಮಧುಮೇಹ ರೋಗಿಗಳು ಲಿಚಿ ತಿನ್ನುವಾಗ ಜಾಗರೂಕರಾಗಿರಬೇಕು. ಲಿಚಿ ನೈಸರ್ಗಿಕವಾಗಿ ತುಂಬಾ ಸಿಹಿಯಾಗಿರುತ್ತದೆ ಮತ್ತು ಅತಿಯಾಗಿ ತಿನ್ನುವುದು ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News