ನವದೆಹಲಿ : ಸಕಲ ಜೀವಿಗಳಿಗೂ ಲಾಭದಾಯಕ ಎಂದು ಪರಿಗಣಿಸಲಾಗಿರುವ ಮಂಗಳ ಗ್ರಹದ ಪ್ರವೇಶ ಅಕ್ಟೋಬರ್ 22ರಂದು ತುಲಾ ರಾಶಿಗೆ (Libra) ಆಗಲಿದೆ. ಡಿಸೆಂಬರ್ 5 ರವರೆಗೆ ಮಂಗಳ ತುಲಾ ರಾಶಿಯಲ್ಲಿಯೇ ಉಳಿಯಲಿದ್ದಾನೆ. ನಂತರ ವೃಶ್ಚಿಕ ರಾಶಿಗೆ ಪ್ರವೇಶವಾಗುತ್ತದೆ.
ಮಂಗಳನ ರಾಶಿ ಪರಿವರ್ತನೆಯಿಂದ (Mars transit Libra) ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಈ ಅವಧಿಯಲ್ಲಿ ಅನೇಕ ರಾಶಿಚಕ್ರ ಚಿಹ್ನೆಗಳ ಅದೃಷ್ಟ ಬೆಳಗುತ್ತದೆ. ಆದರೆ ಅನೇಕ ರಾಶಿಗಳವರು ನಷ್ಟವನ್ನು ಅನುಭವಿಸಬಹುದು.
ಮೇಷರಾಶಿ (Aries): ಈ ರಾಶಿಚಕ್ರದ ಜನರಿಗೆ ಈ ರಾಶಿ ಪರಿವರ್ತನೆಯ ಅವಧಿಯು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಇದು ಅವರ ಸಾಮಾಜಿಕ ಪ್ರತಿಷ್ಠೆ ಮತ್ತು ಕುಟುಂಬದ ಬೆಂಬಲವನ್ನು ಹೆಚ್ಚಿಸುತ್ತದೆ. ಅಲ್ಲದೆ, ಅವರ ವೈವಾಹಿಕ ಜೀವನ (Married life) ಮತ್ತು ಉದ್ಯೋಗದಲ್ಲಿ ಸಮಸ್ಯೆಗಲು ಎದುರಾಗಬಹುದು.
ಇದನ್ನೂ ಓದಿ : Dhanteras 2021: ದೀಪಾವಳಿಯ ಹಿಂದಿನ ದಿನ ಈ ಕೆಲಸಗಳನ್ನು ಮಾಡಿದರೆ ಜೀವನ ಪೂರ್ತಿ ಸಿಗಲಿದೆ ಲಕ್ಷ್ಮೀಯ ಆಶೀರ್ವಾದ
ವೃಷಭ ರಾಶಿ (Taurus): ಈ ಸಮಯದಲ್ಲಿ ವೃಷಭ ರಾಶಿಯ ಜನರಿಗೆ ಪ್ರಯಾಣ ಯೋಗ ಲಭಿಸಬಹುದು. ಆದರೂ ಅವರು ಅಪರಿಚಿತರಿಂದ ಜಾಗರೂಕರಾಗಿರಬೇಕು. ತಮ್ಮ ಆರೋಗ್ಯ, ಕೌಟುಂಬಿಕ ಕಲಹ ಮತ್ತು ಕೆಲಸದ ಸ್ಥಳದಲ್ಲಿ ಸಂಘರ್ಷಗಳನ್ನು ತಪ್ಪಿಸಬೇಕು.
ಮಿಥುನ (Gemini) : ಮಿಥುನ ರಾಶಿಯ ಜನರು ಒತ್ತಡ ಮತ್ತು ಆತಂಕಕ್ಕೆ ಒಳಗಾಗಬಹುದು. ಅವರು ತಮ್ಮ ಜೀವನಶೈಲಿಯಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳಬೇಕು. ಬೌದ್ಧಿಕ ಕೌಶಲ್ಯಗಳ ಮೂಲಕ ಆದಾಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ನಿಮ್ಮ ವಿರೋಧಿಗಳು ನಿಮ್ಮ ವಿರುದ್ಧ ತಂತ್ರಗಳನ್ನು ಅಳವಡಿಸುತ್ತಾರೆ. ಆದರೆ ಅವರನ್ನು ಸೋಲಿಸಲು ಸಾಧ್ಯವಾಗುತ್ತದೆ.
ಕರ್ಕ (Cancer): ಈ ಸಮಯ ಆಸ್ತಿಯಲ್ಲಿ ಹೂಡಿಕೆ ಮಾಡಲು ಅನುಕೂಲಕರವಾಗಿರುತ್ತದೆ. ನಿಮ್ಮ ಮನೆ ಮತ್ತು ಕೆಲಸದ ಸ್ಥಳದಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಈ ಅವಧಿಯಲ್ಲಿ ಕೆಲವು ಸಮಸ್ಯೆಗಳು ಎದುರಿಸಬೇಕಾಗಬಹುದು. ಆದರೆ ನೀವು ಅವುಗಳನ್ನು ಯಶಸ್ವಿಯಾಗಿ ನಿಭಾಯಿಸುವುದು ಸಾಧ್ಯವಾಗುತ್ತದೆ. ನೀವು ಹಣವನ್ನು ಕೂಡಿಸುವಲ್ಲಿ ಯಶಸ್ವಿಯಾಗುತ್ತೀರಿ.
ಇದನ್ನೂ ಓದಿ : Tulasi Puja: ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ನಿವಾರಿಸಲು ತುಳಸಿಯನ್ನು ಈ ರೀತಿ ಪೂಜಿಸಿ
ಸಿಂಹ (Leo) : ನಿಮ್ಮ ಸಹೋದರ ಸಹೋದರಿಯರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಧೈರ್ಯ ಮತ್ತು ಶಕ್ತಿಯಿಂದ ನಿಮ್ಮ ವಿರೋಧಿಗಳನ್ನು ಗೆಲ್ಲುವಿರಿ. ಬರುವ ಕಷ್ಟಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸುತ್ತೀರಿ.
ಕನ್ಯಾ (Virgo): ಈ ಅವಧಿಯಲ್ಲಿ ನೀವು ಚಡಪಡಿಕೆಯಿಂದ ಇರುತ್ತೀರಿ. ನೀವು ಮಾತಿನ ಮೇಲಿನ ನಿಯಂತ್ರಣವನ್ನೂ ಕಳೆದುಕೊಳ್ಳಬಹುದು. ನಿಮ್ಮ ಕೌಟುಂಬಿಕ ಜೀವನಕ್ಕೆ ಕಠಿಣ ಸಮಯವಾಗಿರುತ್ತದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ.
ತುಲಾ (Libra): ರಾಶಿಯನ್ನು ಬದಲಾಯಿಸಿದ ನಂತರ ಮಂಗಳ ತುಲಾ ರಾಶಿಗೆ ಪ್ರವೇಶಿಸುತ್ತಾನೆ. ಈ ರಾಶಿಯ ಜನರು ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಈ ಸಮಯವು ವಿದ್ಯಾರ್ಥಿಗಳಿಗೆ ಶುಭಕರವಾಗಿದೆ ಆದರೆ ಅವರ ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ಅಗತ್ಯವಾಗಿದೆ.
ಇದನ್ನೂ ಓದಿ : Garuda Purana: ಎಚ್ಚರ! ಈ ಮೂರು ಕೆಟ್ಟ ಅಭ್ಯಾಸಗಳು ನಿಮ್ಮ ಕುಟುಂಬದ ಸುಖ-ಶಾಂತಿಯನ್ನು ಕಸಿದುಕೊಳ್ಳುತ್ತವೆ
ವೃಶ್ಚಿಕ (Scorpius) : ಈ ರಾಶಿಯ ಜನರು ಮಾನಸಿಕ ಒತ್ತಡ, ಕೋರ್ಟ್ ಕೇಸ್ ಅಥವಾ ವಿವಾದಗಳನ್ನು ಎದುರಿಸಬೇಕಾಗಬಹುದು. ಖರ್ಚು ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿರಬಹುದು. ನಿಮ್ಮ ವೈವಾಹಿಕ ಜೀವನದಲ್ಲೂ ಕೆಲವು ತಪ್ಪುಗ್ರಹಿಕೆಗಳು ಉಂಟಾಗಬಹುದು.
ಧನು (Sagittarius) : ಈ ರಾಶಿಯ ಜನರು ಮದ್ಯ, ಜೂಜು ಇತ್ಯಾದಿಗಳಿಂದ ದೂರವಿರಬೇಕಾಗುತ್ತದೆ. ಶ್ರಮಕ್ಕೆ ತಕ್ಕ ಫಲ ಖಂಡಿತ ಸಿಗುತ್ತದೆ. ವಿದ್ಯಾರ್ಥಿಗಳು ಕೂಡ ಈ ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಈ ಸಾರಿಗೆಯಲ್ಲಿ ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ.
ಮಕರ (Capricornus) : ಈ ರಾಶಿಯವರಿಗೆ ಹಣ ಹೂಡಿಕೆ, ಉದ್ಯೋಗ, ವ್ಯವಹಾರದಲ್ಲಿ ಲಾಭ ಸಿಗಲಿದೆ. ಈ ಸಮಯವು ವಿದ್ಯಾರ್ಥಿಗಳಿಗೆ ಶುಭವಾಗಿರಲಿದೆ. ನಿಮ್ಮ ವ್ಯವಹಾರದಲ್ಲಿ ಅಥವಾ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಸಹೋದ್ಯೋಗಿಗಳು ಮತ್ತು ಅಧೀನ ಅಧಿಕಾರಿಗಳ ಮೇಲೆ ಉತ್ತಮ ಪ್ರಭಾವ ಬೀರುವಿರಿ.
ಇದನ್ನೂ ಓದಿ : ಈ ರಾಶಿಯವರಿಗೆ ಬಹಳ ಬೇಗ ಕೋಪ ಬರುತ್ತದೆಯಂತೆ, ವೈವಾಹಿಕ ಜೀವನವನ್ನು ಬುಡಮೇಲು ಮಾಡುತ್ತದೆ ಈ ಗುಣ
ಕುಂಭ (Aquarius): ಉದ್ಯೋಗ ಅರಸುವವರಿಗೆ ಈ ಸಮಯ ಉತ್ತಮವಾಗಿರುತ್ತದೆ. ಅವರ ಪ್ರಯತ್ನಗಳಿಗಾಗಿ ಕೆಲಸದ ಸ್ಥಳದಲ್ಲಿ ಬಹುಮಾನ ಸಿಗಬಹುದು. ವ್ಯವಹಾರದಲ್ಲಿ ಅನೇಕ ಹೊಸ ಅವಕಾಶಗಳನ್ನು ಪಡೆಯುತ್ತೀರಿ. ಈ ಅವಧಿಯಲ್ಲಿ ನಿಮ್ಮ ಕುಟುಂಬದೊಂದಿಗೆ ಹೊರಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆಗಳೂ ಇರಬಹುದು.
ಮೀನ (Pisces): ಈ ರಾಶಿ ಪರಿವರ್ತನೆಯ ಅವಧಿ ಆದಾಯದ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ. ಕೆಲವು ಅನಿರೀಕ್ಷಿತ ವೆಚ್ಚಗಳನ್ನು ಅಥವಾ ಹಠಾತ್ ನಷ್ಟವನ್ನು ಎದುರಿಸಬೇಕಾಗಬಹುದು. ಸಂಪತ್ತನ್ನು ಸಂಗ್ರಹಿಸಲು ನೀವು ತುಂಬಾ ಶ್ರಮಿಸಬೇಕು. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ