ಶನಿ ಗ್ರಹವನ್ನು ಬಲಪಡಿಸಲು ಸುಲಭ ಉಪಾಯ : ಶನಿ ದೇವನನ್ನು ಕರ್ಮ ಮತ್ತು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವನು ವ್ಯಕ್ತಿಯ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳಿಗೆ ತಕ್ಕಂತೆ ಫಲ ನೀಡುತ್ತಾನೆ ಎಂಬ ನಂಬಿಕೆ ಇದೆ. ಶನಿದೇವನ ಕ್ರೋಧಕ್ಕೆ ಮನುಷ್ಯರಷ್ಟೇ ಅಲ್ಲ, ದೇವತೆಗಳೂ ಹೆದರುತ್ತಾರೆ. ಸೂರ್ಯ ಪುತ್ರ ಶನಿ ದೇವನು ಯಾರ ಮೇಲೆ ತನ್ನ ಆಶೀರ್ವಾದವನ್ನು ನೀಡುತ್ತಾನೋ ಅವರ ಜೀವನದಲ್ಲಿ ಸಂತೋಷವನ್ನು ತುಂಬುತ್ತಾನೆ. ಆ ಜನರ ಜೀವನದಲ್ಲಿ ಯಾವುದೇ ರೀತಿಯ ಕೊರತೆಯಿರುವುದಿಲ್ಲ. ಆದರೆ, ಶನಿಯ ವಕ್ರ ದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶನಿದೇವನ ವಕ್ರ ದೃಷ್ಟಿಯಿಂದಾಗಿ, ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳಿಗೆ ಕೊನೆಯೇ ಇರುವುದಿಲ್ಲ ಎಂದೂ ಸಹ ಹೇಳಲಾಗುತ್ತದೆ. ಆದಾಗ್ಯೂ, ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಲು ಅಥವಾ ದೂರವಿರಲು ಕೆಲವು ಮಂತ್ರಗಳು ಸಹಕಾರಿಯಾಗಿವೆ. ಶನಿದೇವನನ್ನು ಮೆಚ್ಚಿಸಲು ಈ ಮೂರು ಮಂತ್ರಗಳನ್ನು ಮಾತ್ರ ಪಠಿಸಿದರೆ ಸಾಕು ಎನ್ನಲಾಗುತ್ತದೆ.
ಶನಿ ದೇವನನ್ನು ಮೆಚ್ಚಿಸಲು ಶಕ್ತಿಶಾಲಿ ಮಂತ್ರಗಳು:
ಶನಿ ಶಕ್ತಿಯುತ ಮಂತ್ರ ಪಠಣ ಮಾಡುವುದರಿಂದ ಶನಿ ದೇವನನ್ನು ಮೆಚ್ಚಿಸಬಹುದು ಎಂದು ಹೇಳಲಾಗುತ್ತದೆ.
1. ವೈದಿಕ ಮಂತ್ರ: "ॐ ಷಂ ನೋ ದೇವೀರಾಭಿಷ್ಟಯ ಆಪೋ ಭವಂತು ಪೀಠಯೇ ಶಂ ಯೋರಭಿ ಸತ್"
2. ಶನಿ ತಾಂತ್ರಿಕ ಮಂತ್ರ: "ಓಂ ಶನೈಶ್ಚರಾಯ ನಮಃ"
3. ಶನಿ ಬೀಜ ಮಂತ್ರ: "ॐ ಪ್ರಾಣ್ ಪ್ರಿಯ್ ಪ್ರೌಂ ಸಃ ಶನೈಶ್ಚರಾಯ ನಮಃ"
ಇದನ್ನೂ ಓದಿ- Shani Krupe: ಶನಿ ದೇವನನ್ನು ಮೆಚ್ಚಿಸಲು ಇಂದು ಈ ಬಣ್ಣದ ಬಟ್ಟೆ ಧರಿಸಿ, ಈ ವಸ್ತುಗಳನ್ನು ದಾನ ಮಾಡಿ
ಶನಿಯ ದುಷ್ಟ ಕಣ್ಣಿನಿಂದ ತಪ್ಪಿಸಿಕೊಳ್ಳಲು ಈ ವಿಷಯಗಳ ಬಗ್ಗೆ ಇರಲಿ ಎಚ್ಚರ:
* ಕಷ್ಟಪಟ್ಟು ಕೆಲಸ ಮಾಡುವವರನ್ನು ಯಾವಾಗಲೂ ಗೌರವಿಸಬೇಕು.
* ಬಡವರನ್ನು ಹೀಯಾಳಿಸಬೇಡಿ.
* ದುರ್ಬಲರನ್ನು ಮರೆತು ಕೂಡ ಅವಮಾನಿಸಬೇಡಿ.
* ಮಹಿಳೆಯರನ್ನು ಗೌರವಿಸಿ.
* ಪ್ರಾಣಿಗಳಿಗೆ ಹಾನಿ ಮಾಡಬೇಡಿ.
ಶನಿ ಗ್ರಹವನ್ನು ಬಲಪಡಿಸಲು ದಾನ ಮಾಡಿ:
ಶನಿವಾರದಂದು ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದರಿಂದ ವ್ಯಕ್ತಿಯ ಜಾತಕದಲ್ಲಿ ಇರುವ ಶನಿಯು ಬಲಶಾಲಿಯಾಗುತ್ತಾನೆ ಮತ್ತು ಶನಿದೇವನು ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ.
ಇದನ್ನೂ ಓದಿ- Weekly Horoscope: ಈ ರಾಶಿಯವರು ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ
ಶನಿವಾರದಂದು ಈ ವಸ್ತುಗಳನ್ನು ದಾನ ಮಾಡುವುದು ಒಳಿತು:
ಶನಿದೇವನನ್ನು ಮೆಚ್ಚಿಸಲು ಇಂದು ನಿಮ್ಮ ಕೈಲಾದ ಮಟ್ಟಿಗೆ ಅಗತ್ಯ ಇರುವವರಿಗೆ ಈ ವಸ್ತುಗಳನ್ನು ದಾನ ಮಾಡಬಹುದು.
>> ಕಪ್ಪು ಬಟ್ಟೆ
>> ಕಪ್ಪು ಉದ್ದಿನಕಾಳು
>> ಸಾಸಿವೆ ಎಣ್ಣೆ
>> ಕಪ್ಪು ಕಂಬಳಿ
>> ಕಪ್ಪು ಛತ್ರಿ
>> ಕಪ್ಪು ಹಸು
>> ಕಪ್ಪು ಬೂಟುಗಳು
>> ಎಮ್ಮೆ
>> ನೀಲಮಣಿ ರತ್ನ
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.