ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ಒಂದು ನಿರ್ದಿಷ್ಟ ಸಮಯದ ನಂತರ ರಾಶಿಯನ್ನು ಬದಲಾಯಿಸುತ್ತದೆ. ಇದರ ಪರಿಣಾಮ ಎಲ್ಲಾ 12 ರಾಶಿಗಳ ಮೇಲೆ ಬೀರುತ್ತದೆ. ಜುಲೈ 29 ರಂದು, ದೇವಗುರು ಗುರುವು ತನ್ನದೇ ಆದ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಗುರುಗ್ರಹದ ಈ ಸ್ಥಾನ ಬದಲಾವಣೆಯ ಪರಿಣಾಮವನ್ನು ವಿಶೇಷವಾಗಿ 3 ರಾಶಿಗಳ ಮೇಲೆ ಬೀರಲಿದೆ.
ಗುರುಗ್ರಹದ ಹಿಮ್ಮುಖ ಚಲನೆ ಈ ರಾಶಿಯವರ ಮೇಲೆ ಬೀರಲಿದೆ :
ವೃಷಭ ರಾಶಿ : ಜ್ಯೋತಿಷ್ಯದ ಪ್ರಕಾರ, ಗುರುವು ಈ ರಾಶಿಯ 11 ನೇ ಭಾಗದಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದನ್ನು ಆದಾಯ ಮತ್ತು ಸಂಪತ್ತಿನ ಸ್ಥಳವೆಂದು ಪರಿಗಣಿಸಲಾಗಿದೆ. ಆದ್ದರಿಂದ ಗುರುಗ್ರಹದ ಹಿಮ್ಮುಖ ಚಲನೆಯ ವೇಳೆ, ವೃಷಭ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆರ್ಥಿಕ ಲಾಭವಾಗಬಹುದು. ಯಾವುದೇ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಬಹುದು. ಈ ಅವಧಿಯಲ್ಲಿ ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ. ಈ ರಾಶಿಚಕ್ರದ 8 ನೇ ಮನೆಯ ಅಧಿಪತಿ ಗುರು. ಈ ಅವಧಿಯಲ್ಲಿ ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಪಡೆಯಬಹುದು.
ಇದನ್ನೂ ಓದಿ : Most Powerful Zodiac Sign:ದ್ವಾದಶ ರಾಶಿಗಳಲ್ಲಿ ಈ ಎರಡು ರಾಶಿಯವರು ಬಹಳ ಶಕ್ತಿಶಾಲಿಗಳಂತೆ ..!
ಮಿಥುನ : ಗುರುವು ಮಿಥುನ ರಾಶಿಯ ಹತ್ತನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಜಾತಕದಲ್ಲಿ, ಈ ಮನೆಯು ಉದ್ಯೋಗ, ವ್ಯವಹಾರ ಮತ್ತು ಕೆಲಸದ ಕ್ಷೇತ್ರವಾಗಿದೆ. ಈ ಅವಧಿಯಲ್ಲಿ ಹೊಸ ಉದ್ಯೋಗಾವಕಾಶಗಳು ಬರಬಹುದು. ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯಬಹುದು. ಮಾರ್ಕೆಟಿಂಗ್ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಜನರಿಗೆ ಇದು ಉತ್ತಮ ಸಮಯವಾಗಿರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯ ಅಧಿಪತಿ ಬುಧ. ಬುಧ ಮತ್ತು ಗುರುವೀಣೆ ನಡುವೆ ಸ್ನೇಹವಿದೆ. ಆದ್ದರಿಂದ, ಈ ಸಮಯವು ಮಿಥುನ ರಾಶಿಯವರಿಗೆ ಲಾಭದಾಯಕವಾಗಿರಲಿದೆ.
ಕರ್ಕ : ಗುರು ಈ ರಾಶಿಚಕ್ರದ ಒಂಬತ್ತನೇ ಮನೆಯಲ್ಲಿ ಹಿಮ್ಮುಖವಾಗುತ್ತಿದ್ದಾನೆ. ಇದನ್ನು ಅದೃಷ್ಟ ಮತ್ತು ವಿದೇಶಿ ಪ್ರಯಾಣದ ಸ್ಥಳವೆಂದು ಹೇಳಲಾಗುತ್ತದೆ. ಗುರುಗ್ರಹದ ಹಿಮ್ಮೆಟ್ಟುವಿಕೆಯ ಅವಧಿಯಲ್ಲಿ, ಯಾವುದೇ ಕೆಲಸದಲ್ಲಿಯೂ ಅದೃಷ್ಟ ಬೆಂಬಲ ನೀಡುತ್ತದೆ. ಈ ಸಮಯವು ಆಹಾರ, ಹೋಟೆಲ್, ರೆಸ್ಟೋರೆಂಟ್‌ಗೆ ಸಂಬಂಧಿಸಿದ ವ್ಯವಹಾರದ ಜನರಿಗೆ ಅನುಕೂಲಕರವಾಗಿರಲಿದೆ.
ಇದನ್ನೂ ಓದಿ : Lucky Zodiac Signs: ಈ ಮೂರು ರಾಶಿಗಳ ಜನರ ಪಾಲಿಗೆ ಬುಧವಾರ ವಿಶೇಷವಾಗಿರಲಿದೆ, ತಾಯಿ ಲಕ್ಷ್ಮಿಯ ಕೃಪೆಯಿಂದ ಧನ ಲಾಭ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.