Home Vastu: ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ? ಈ 4 ಚಿಹ್ನೆಗಳೊಂದಿಗೆ ಸುಲಭವಾಗಿ ಕಂಡುಹಿಡಿಯಿರಿ

ಮನೆಯಲ್ಲಿ ಋಣಾತ್ಮಕ ಶಕ್ತಿಯನ್ನು ಹೊಂದಿರುವುದು ಮನೆಯ ಸದಸ್ಯರ ಪ್ರಗತಿ, ಆರ್ಥಿಕ ಸ್ಥಿತಿ ಅಥವಾ ಅವರ ಪರಸ್ಪರ ಸಂಬಂಧ ಹೀಗೆ ಪ್ರತಿಯೊಂದು ಒಳ್ಳೆಯ ವಿಷಯದ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಅದನ್ನು ತಕ್ಷಣವೇ ಗುರುತಿಸುವುದು ಮತ್ತು ಅದನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ.

Written by - Yashaswini V | Last Updated : Sep 15, 2021, 09:57 AM IST
  • ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದು ಅಪಾಯಕಾರಿ
  • ಪುನರಾವರ್ತಿತ ವೈಫಲ್ಯವು ಇದರ ದೊಡ್ಡ ಸಂಕೇತವಾಗಿದೆ
  • ಜಗಳಗಳು, ದುಃಖ, ನಿದ್ರಾಹೀನತೆಯ ಲಕ್ಷಣಗಳೂ ನಕಾರಾತ್ಮಕ ಶಕ್ತಿಯಾ ಸಂಕೇತವಾಗಿರಬಹುದು
Home Vastu: ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದೆಯೇ? ಈ 4 ಚಿಹ್ನೆಗಳೊಂದಿಗೆ ಸುಲಭವಾಗಿ ಕಂಡುಹಿಡಿಯಿರಿ title=
Negative Energy in Home: ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಗುರುತಿಸುವುದು ಹೇಗೆ ?

ಬೆಂಗಳೂರು: ಜೀವನವನ್ನು ಸಂತೋಷದಿಂದ ಕಳೆಯಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ. ಪ್ರತಿಯೊಬ್ಬರೂ ತಾವು ಮತ್ತು ತಮ್ಮ ಕುಟುಂಬ ಸಂತೋಷದಿಂದ ಬದುಕಬೇಕು ಎಂದು ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿ (Negative Energy) ನೆಲೆಸಿದರೆ ಆಗ ನಾವು ಎಷ್ಟೇ ಪ್ರಯತ್ನ ಮಾಡಿದರೂ ಎಲ್ಲವೂ ವಿಫಲವಾಗುತ್ತವೆ. ಈ ಕಾರಣದಿಂದಾಗಿ, ವಾಸ್ತು ಶಾಸ್ತ್ರದಲ್ಲಿ (Vastu Shastra) ಮನೆಯ ಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರೊಂದಿಗೆ, ನಕಾರಾತ್ಮಕ ಶಕ್ತಿಯನ್ನು ಗುರುತಿಸಲು ಮತ್ತು ಅದನ್ನು ಧನಾತ್ಮಕ ಶಕ್ತಿಯಾಗಿ ಪರಿವರ್ತಿಸಲು ಕ್ರಮಗಳನ್ನು ಸಹ ನೀಡಲಾಗಿದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ (Positive Energy) ಇದೆಯೇ ಎಂದು ಗುರುತಿಸುವುದು ಹೇಗೆ ಎಂಬ ಬಗ್ಗೆ ಇದರಲ್ಲಿ ತಿಳಿಸಲಿದ್ದೇವೆ.

ನಕಾರಾತ್ಮಕ ಶಕ್ತಿಯನ್ನು ಗುರುತಿಸುವುದು ಹೇಗೆ ? 
ಪದೇ ಪದೇ ಅವಕಾಶಗಳು ಕೈ ತಪ್ಪುವುದು:
ಪ್ರತಿಯೊಬ್ಬರಿಗೂ ಸಹ ಏಳಿಗೆ ಹೊಂದಲು ಒಂದಲ್ಲಾ ಒಂದು ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ ನಿಮ್ಮ ಜೀವನದಲ್ಲಿ ಪದೇ ಪದೇ ಅವಕಾಶ ಕೈತಪ್ಪುತ್ತಿದ್ದರೆ ಅಥವಾ ಯಶಸ್ಸನ್ನು ತಲುಪಿದ ನಂತರವೂ ನೀವು ವಿಫಲರಾಗುತ್ತಿದ್ದರೆ, ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯ  (Negative Energy) ಸಂಕೇತವಾಗಿದೆ. 

ಇದನ್ನೂ ಓದಿ- Guru Rashi Parivartan: ದೇವಗುರು ಬೃಹಸ್ಪತಿ ರಾಶಿ ಬದಲಾವಣೆ, ಇಂದಿನಿಂದ ಈ 6 ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭ

ಮನೆಯಲ್ಲಿ ಸದಾ ಜಗಳ-ಕಾದಾಟ: ಮನೆಯ ಜನರ ನಡುವೆ ಆಗಾಗ ಜಗಳವಾಗುತ್ತಿದ್ದರೆ, ಅದು ಮನೆಯಲ್ಲಿ ಋಣಾತ್ಮಕ ಶಕ್ತಿಯ ಸಂಕೇತವಾಗಿದೆ. ಈ ಪರಿಸ್ಥಿತಿಯು ಕುಟುಂಬ ಸದಸ್ಯರ ನಡುವಿನ ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು, ಇಲ್ಲದಿದ್ದರೆ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ.

ಕುಟುಂಬದ ಸದಸ್ಯರಲ್ಲಿ ಆಗಾಗ್ಗೆ ಅನಾರೋಗ್ಯ ಸಮಸ್ಯೆ: ಮನೆಯ ಸದಸ್ಯರ ಆರೋಗ್ಯ (Health) ಆಗಾಗ್ಗೆ ಹದಗೆಡುತ್ತಿದ್ದರೆ ಮತ್ತು ಚಿಕಿತ್ಸೆಯ ನಂತರವೂ ಪರಿಸ್ಥಿತಿ ಸುಧಾರಿಸದಿದ್ದರೆ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯೂ ಅದಕ್ಕೆ ಒಂದು ಕಾರಣವಾಗಿರಬಹುದು. 

ಇದನ್ನೂ ಓದಿ- Career Remedies: ಕೆಲಸ ಕಳೆದುಕೊಳ್ಳುವ ಭಯವೇ? ತುಳಸಿಯ ಈ ಪರಿಹಾರವನ್ನು ಮಾಡಿ, ಬಡ್ತಿಯೊಂದಿಗೆ ಸಂಬಳವೂ ಹೆಚ್ಚಾಗುತ್ತದೆ

ಚಡಪಡಿಕೆ, ಸರಿಯಾಗಿ ನಿದ್ರೆ ಬರದೇ ಇರುವುದು : ಮನೆಯಲ್ಲಿರುವಾಗ ಯಾವುದೇ ಕಾರಣವಿಲ್ಲದೆ ನೀವು ಪ್ರಕ್ಷುಬ್ಧತೆಯನ್ನು ಅನುಭವಿಸಿದರೆ, ರಾತ್ರಿಯ ವೇಳೆ ಸರಿಯಾಗಿ ನಿದ್ರೆ ಬರದಿದ್ದರೆ ಅಥವಾ ಸದಾ ಬೇಸರ ಮತ್ತು ದುಃಖವನ್ನು ಅನುಭವಿಸುತ್ತಿದ್ದರೆ ಇಂತಹ ಸಂದರ್ಭದಲ್ಲಿ ಮನೆಯ ವಾಸ್ತು ಪರೀಕ್ಷಿಸುವುದು ಉತ್ತಮ. ವಾಸ್ತು (Vastu) ಪ್ರಕಾರ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಇದಕ್ಕೆ ಒಂದು ಕಾರಣವಾಗಿರಬಹುದು ಎಂದು ಹೇಳಲಾಗುತ್ತದೆ. 

(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News