ರಕ್ತದ ಸಕ್ಕರೆ ಈ ಮಟ್ಟಕ್ಕೆ ಏರಿದರೆ ಸಾವು ಸಂಭವಿಸಬಹುದು ಎಚ್ಚರ .! ಬ್ಲಡ್ ಶುಗರ್ ನಿಯಂತ್ರಿಸುವ ಮಾರ್ಗಗಳಿವು.!

  ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಧಿಕವಾದರೂ ಅಪಾಯ, ಕಡಿಮೆಯಾದರೂ ಅಪಾಯ. ಎರಡೂ ಹಂತದಲ್ಲಿ ರೋಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.  ಹಾಗಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಎಷ್ಟಿರಬೇಕು ನೋಡೋಣ .. 

Written by - Ranjitha R K | Last Updated : Dec 14, 2022, 12:47 PM IST
  • ಮಧುಮೇಹ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಕಾಯಿಲೆಯಾಗಿದೆ.
  • ಕಿರಿಯ ವಯಸ್ಸಿನವರು ಕೂಡಾ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
  • ನಾರ್ಮಲ್ ಬ್ಲಡ್ ಶುಗರ್ ಎಂದರೇನು ?
 ರಕ್ತದ ಸಕ್ಕರೆ ಈ ಮಟ್ಟಕ್ಕೆ ಏರಿದರೆ ಸಾವು ಸಂಭವಿಸಬಹುದು  ಎಚ್ಚರ .! ಬ್ಲಡ್ ಶುಗರ್  ನಿಯಂತ್ರಿಸುವ ಮಾರ್ಗಗಳಿವು.!  title=
Blood Sugar Range

ಬೆಂಗಳೂರು : ಮಧುಮೇಹ ಇತ್ತೀಚಿನ ದಿನಗಳಲ್ಲಿ ಬಹುತೇಕರನ್ನು ಕಾಡುತ್ತಿರುವ ಕಾಯಿಲೆಯಾಗಿದೆ. ಕಿರಿಯ ವಯಸ್ಸಿನವರು ಕೂಡಾ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮಧುಮೇಹ ಕಾಡುವ ವ್ಯಕ್ತಿ ಮುಂದಿನ ಜೀವನದಲ್ಲಿ ಬಹಳಷ್ಟು ಹೋರಾಟವನ್ನೇ ನಡೆಸಬೇಕಾಗುತ್ತದೆ. ಏನು ತಿನ್ನಬೇಕಾದರೂ, ಕುಡಿಯಬೇಕಾದರೂ ಸಾವಿರ  ಸಲ ಯೋಚನೆ ಮಾಡಬೇಕಾಗುತ್ತದೆ. ಆಹಾರದಲ್ಲಿ ಆಗುವ ಏರಿಳಿತ ಕೂಡಾ ರಕ್ತದ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ದೇಹದ ರಕ್ತದ ಸಕ್ಕರೆ  ಅಂದರೆ ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವು ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟವನ್ನು ತಲುಪುವ ಹಂತವನ್ನು ಮಧುಮೇಹ ಎಂದು ಹೇಳಲಾಗುತ್ತದೆ.  ನಿರಂತರವಾಗಿ ರಕ್ತದಲ್ಲಿನ ಸಕ್ಕರೆಯು ಅಧಿಕವಾಗಿದ್ದರೆ, ವ್ಯಕ್ತಿಯು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಧಿಕವಾದರೂ ಅಪಾಯ, ಕಡಿಮೆಯಾದರೂ ಅಪಾಯ. ಎರಡೂ ಹಂತದಲ್ಲಿ ರೋಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.  ಹಾಗಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಎಷ್ಟಿರಬೇಕು ನೋಡೋಣ .. 

ನಾರ್ಮಲ್ ಬ್ಲಡ್ ಶುಗರ್ ಎಂದರೇನು ? 
ದಿನದಲ್ಲಿ 8 ಗಂಟೆಗಳ ಕಾಲ ನೀರನ್ನು ಹೊರತುಪಡಿಸಿ ಏನನ್ನೂ ತಿನ್ನದೆ ಅಥವಾ ಕುಡಿಯದಿದ್ದಾಗ ಅದು ನಾರ್ಮಲ್ ಬ್ಲಡ್ ಶುಗರ್ ಆಗಿರುತ್ತದೆ. ಇದು 100 mg/dL ಗಿಂತ ಕಡಿಮೆಯಿರಬೇಕು. ಹಾಗಿದ್ದಾಗ ಇದನ್ನು  ನಾರ್ಮಲ್ ಎಂದು ಹೇಳಲಾಗುತ್ತದೆ. ಒಂದು ವೇಳೆ ಇದು 100 ರಿಂದ 125 mg/dL ನಡುವೆ ಇದ್ದರೆ, ಅದನ್ನು ಪ್ರಿ-ಡಯಾಬಿಟಿಸ್ ಹಂತ ಎಂದು ಕರೆಯಲಾಗುತ್ತದೆ. ಇನ್ನು 125 ಕ್ಕಿಂತ ಹೆಚ್ಚಿದ್ದರೆ,  ರೀಡಿಂಗ್ ಡಯಾಬಿಟಿಕ್ ಸಂಕೇತವನ್ನು ಸೂಚಿಸುತ್ತದೆ. 

ಇದನ್ನೂ ಓದಿ :  ದೇಹದ ಈ ಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಅಧಿಕ ಕೊಲೆಸ್ಟ್ರಾಲ್ ಸಂಕೇತ.!

ಯಾವುದು ಅಪಾಯಕಾರಿ ? 
ಅಧಿಕ ರಕ್ತದ ಸಕ್ಕರೆ ಎಂದರೆ ದೇಹದಲ್ಲಿ ಇನ್ಸುಲಿನ್ ಕೊರತೆಯಾಗುವುದು.  ಇದರರ್ಥ ನೀವು ಆಹಾರದಲ್ಲಿ ಸಾಕಷ್ಟು ಇನ್ಸುಲಿನ್ ಪಡೆಯುತ್ತಿಲ್ಲ ಎನ್ನುವುದು. ದೈಹಿಕ ವ್ಯಾಯಾಮ ಕಡಿಮೆಯಾಗುವುದು, ಒತ್ತಡದ ಜೀವನ , ಹಾರ್ಮೋನ್ ನಲ್ಲಿನ ಬದಲಾವಣೆ, ನಿದ್ರೆಯ ಕೊರತೆಯೂ  ಮಧುಮೇಹಕ್ಕೆ ಕಾರಣವಾಗಿದೆ. 

ರೋಗಲಕ್ಷಣಗಳು ಯಾವುವು ? 
ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದರೆ ಆಯಾಸ, ಸ್ನಾಯು ನೋವು, ಮಂದ ದೃಷ್ಟಿ, ಅತಿಯಾದ ಬಾಯಾರಿಕೆ ಯಂತಹ ಲಕ್ಷಣಗಳು  ಕಾಣಿಸಿಕೊಳ್ಳುತ್ತವೆ.  ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿದ್ದರೆ, ಆಯಾಸ, ತೀವ್ರವಾದ ಸ್ನಾಯು ನೋವು, ತೂಕ ನಷ್ಟ, ಬಾಯಿ ಒಣಗುವುದು, ವಾಂತಿ ಮತ್ತು ವಾಕರಿಕೆ ಕಾಣಿಸಿಕೊಳ್ಳುತ್ತದೆ.  

ಇದನ್ನೂ ಓದಿ :  ನಿತ್ಯ ಬಳಸುವ ಈ ವಸ್ತುಗಳೇ ನಿಮ್ಮ ಆರೋಗ್ಯಕ್ಕೆ ಮುಳುವಾಗುವುದು.! ಏರಿಸಿಬಿಡುತ್ತದೆ ರಕ್ತದೊತ್ತಡ

ಲೋ ಬ್ಲಡ್ ಶುಗರ್ ಎಂದರೇನು ? 
ಲೋ ಬ್ಲಡ್ ಶುಗರ್  ಅನ್ನು ಹೈಪೊಗ್ಲಿಸಿಮಿಯಾ ಎಂದೂ ಕರೆಯಲಾಗುತ್ತದೆ.  ದೇಹದಲ್ಲಿನ ಸಕ್ಕರೆಯ ಮಟ್ಟವು 80mg/dL ಆಗಿದ್ದರೆ ಅದನ್ನು ಲೋ ಬ್ಲಡ್ ಶುಗರ್ ಎಂದು ಕರೆಯಲಾಗುತ್ತದೆ. ಇದು 40mg/dL ಗಿಂತ ಕಡಿಮೆಯಾದರೆ ಅತ್ಯಂತ ಅಪಾಯಕಾರಿಯಾಗಿರುತ್ತದೆ.  ಈ ಮಟ್ಟವು 40mg/dL ಗಿಂತ  ಹೆಚ್ಚಾಗದಿದ್ದರೆ ವ್ಯಕ್ತಿಯು ಕೋಮಾಗೆ ತಲುಪುವ ಸಾಧ್ಯತೆ ಇದೆ. 

ಲೋ ಬ್ಲಡ್ ಶುಗರ್  ಲಕ್ಷಣಗಳೇನು?
ಸಣ್ಣ ಸಣ್ಣ ವಿಷಯಗಳಿಗೂ ಕಿರಿಕಿರಿ, ತಲೆ ಸುತ್ತುವುದು, ಅಸ್ಪಷ್ಟ ಮಾತು, ಸ್ನಾಯು ದೌರ್ಬಲ್ಯ, ಗೊಂದಲ, ಬೇಗನೆ ಕೋಪ ಮತ್ತು ಬೆವರುವುದು. 

ಪರಿಹಾರ ಹೇಗೆ ? 
-ಸೇವಿಸುವ ಕಾರ್ಬೋಹೈಡ್ರೇಟ್ ಗಳ ಬಗ್ಗೆ  ಸ್ಪಷ್ಟ ಮಾಹಿತಿ ಇರಬೇಕು. 
-ಮನೆಯಲ್ಲಿ ತಯಾರಿಸುವ ಆಹಾರವನ್ನೇ ತೆಗೆದುಕೊಳ್ಳಿ, ಈ ಮೂಲಕ ನೀವು ಏನನ್ನು ಸೇವಿಸುತ್ತಿದ್ದೀರಿ ಎನ್ನುವುದು ನಿಮಗೆ ತಿಳಿದಿರುತ್ತದೆ. 
-ಸಾಕಷ್ಟು ನಿದ್ರೆ ಪಡೆಯಿರಿ
-ದಿನಚರಿಯನ್ನು  ಮಾಡಿಕೊಂಡು, ಯಾವ ಸಮಯಕ್ಕೆ ಆಹಾರ ಸೇವಿಸಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಆಹಾರ ತೆಗೆದುಕೊಳ್ಳುವ ಸಮಯವನ್ನು ಬದಲಾಯಿಸಿಕೊಳ್ಳಬೇಡಿ. 
-ಕಾಲಕಾಲಕ್ಕೆ ಇನ್ಸುಲಿನ್ ಮಟ್ಟವನ್ನು ಪರೀಕ್ಷಿಸುತ್ತಿರಿ. ಆಹಾರ ಸೇವಿಸುವ ಮುನ್ನ ಮತ್ತು ನಂತರ ಇನ್ಸುಲಿನ್ ಮಟ್ಟ  ಪರೀಕ್ಷಿಸುವುದನ್ನು ಮರೆಯಬೇಡಿ. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News