Garlic And Ghee: ನಿತ್ಯ ಬೆಳ್ಳುಳ್ಳಿ-ದೇಸಿ ತುಪ್ಪ ಏಕಕಾಲಕ್ಕೆ ಸೇವಿಸುವುದರಿಂದಾಗುವ ಈ ಲಾಭಗಳು ನಿಮಗೆ ತಿಳಿದಿವೆಯಾ?

Garlic And Ghee Health Benefits: ಬೆಳ್ಳುಳ್ಳಿ ಹಾಗೂ ದೇಸಿ ತುಪ್ಪ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತವೆ. ಹೀಗಾಗಿ ಈ ಎರಡು ಪದಾರ್ಥಗಳನ್ನು ಏಕಕಾಲಕ್ಕೆ ಸೇವಿಸುವುದರಿಂದ ಯಾವ ಯಾವ ಪ್ರಯೋಜನಗಳಾಗುತ್ತವೆ ಎಂಬುದನ್ನು ನಾವು ನಿಮಗೆ ಹೇಳುತ್ತಿದ್ದೇವೆ.  

Written by - Nitin Tabib | Last Updated : Sep 2, 2022, 05:07 PM IST
  • ಬೆಳ್ಳುಳ್ಳಿ ಮತ್ತು ದೇಸಿ ತುಪ್ಪ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ.
  • ಈ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.
  • ಇದೇ ವೇಳೆ, ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ, ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ.
Garlic And Ghee: ನಿತ್ಯ ಬೆಳ್ಳುಳ್ಳಿ-ದೇಸಿ ತುಪ್ಪ ಏಕಕಾಲಕ್ಕೆ ಸೇವಿಸುವುದರಿಂದಾಗುವ ಈ ಲಾಭಗಳು ನಿಮಗೆ ತಿಳಿದಿವೆಯಾ? title=
Benefits Of Desi Ghee And Garlic

Garlic And Ghee Health Benefits: ಬೆಳ್ಳುಳ್ಳಿ ಮತ್ತು ದೇಸಿ ತುಪ್ಪ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಈ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದೇ ವೇಳೆ, ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ, ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತದೆ.  ಇದರಿಂದಾಗಿ ನಮ್ಮ ಹೃದಯವು ಆರೋಗ್ಯಕರವಾಗಿರುತ್ತದೆ. ಇದೇ ವೇಳೆ, ತುಪ್ಪ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಬಹುದು ಎಂದು ಅನೇಕರು ಭಾವಿಸುತ್ತಾರೆ, ಆದರೆ ದೇಸಿ ತುಪ್ಪವನ್ನು ಸರಿಯಾಗಿ ಸೇವಿಸುವುದರಿಂದ ನಮಗೆ ಹಲವಾರು ಪ್ರಯೋಜನಗಳು ಸಿಗುತ್ತವೆ, ನೀವು ಬೆಳ್ಳುಳ್ಳಿ ಮತ್ತು ತುಪ್ಪವನ್ನು ಬೆರೆಸಿ ಸೇವಿಸಿದರೆ ನೀವು ಅದರ ಲಾಭವನ್ನು ಪಡೆಯಬಹುದು. ಅಸಿಡಿಟಿ ಮತ್ತು ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನೂ ಇದು ದೂರ ಮಾಡುತ್ತದೆ. ಬೆಳ್ಳುಳ್ಳಿ ಮತ್ತು ತುಪ್ಪವನ್ನು ಒಟ್ಟಿಗೆ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಆರೋಗ್ಯಕ್ಕೆ ಬೆಳ್ಳುಳ್ಳಿ ಮತ್ತು ದೇಸಿ ತುಪ್ಪದ ಪ್ರಯೋಜನಗಳು
ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ

ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಬಲವಾಗಿರದಿದ್ದರೆ ರೋಗಗಳು ಮತ್ತು ಜ್ವರ ನಮ್ಮನ್ನು ಆವರಿಸುತ್ತವೆ. ಅಷ್ಟೇ ಅಲ್ಲ ಶೀತ, ನೆಗಡಿ, ಜ್ವರದಂತಹ ಸಮಸ್ಯೆಗಳನ್ನು ನಾವು ಪದೇ ಪದೇ ಎದುರಿಸಬೇಕಾಗುತ್ತದೆ. ಹೀಗಾಗಿ ಅದನ್ನು ತಪ್ಪಿಸಲು, ನೀವು ರಾತ್ರಿ ಮಲಗುವ 3 ಗಂಟೆಗಳ ಮೊದಲು ಬೆಳ್ಳುಳ್ಳಿ ಮತ್ತು ದೇಸಿತುಪ್ಪವನ್ನು ಸೇವಿಸಬಹುದು, ಇದು ನಮ್ಮ ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ.

ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಬೆಳ್ಳುಳ್ಳಿಯ ಸೇವನೆಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ಆರೋಗ್ಯಕರ ಕೊಬ್ಬುಗಳು ಮತ್ತು ಮೆಗ್ನೀಸಿಯಮ್ ನಂತಹ ಅಂಶಗಳಿವೆ, ಇವು ನಮ್ಮನ್ನು ಒಳಗಿನಿಂದ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ತುಪ್ಪದ ಬದಲು ಜೇನುತುಪ್ಪದೊಂದಿಗೂ ಕೂಡ ನೀವು ಬೆಳ್ಳುಳ್ಳಿಯನ್ನು ಸೇವಿಸಬಹುದು. ಇದನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಇದನ್ನೂ ಓದಿ-Study: ಟೀ ಪ್ರಿಯರಿಗೆ ಬೇಗ ಸಾವು ಬರುವುದಿಲ್ಲವಂತೆ! ಈ ಸುದ್ದಿ ಓದಿ

ಉದರ ಸಮಸ್ಯೆಗಳಿಗೆ ರಾಮಬಾಣ
ಉದರ ಸಂಬಂಧಿತ ಸಮಸ್ಯೆಗಳಿದ್ದರೆ, ನೀವು ಈ ಪರಿಸ್ಥಿತಿಯಲ್ಲಿಯೂ ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸಬಹುದು. ಏಕೆಂದರೆ ಇದರಲ್ಲಿ ಫೈಬರ್ ಮತ್ತು ಮೆಗ್ನೀಸಿಯಮ್ ಇದ್ದು, ಹೊಟ್ಟೆಯ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಇದನ್ನು ಪ್ರತಿನಿತ್ಯ ಸೇವಿಸಿದರೆ ಮಲಬದ್ಧತೆ, ಅಜೀರ್ಣ, ಹೊಟ್ಟೆನೋವು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಇದನ್ನೂ ಓದಿ-Health Tips: ಶರೀರ ಈ 4 ಸಂಕೇತಗಳನ್ನು ನೀಡಿದರೆ, ಮದ್ಯ-ಬಿಯರ್ ನಿಂದ ತಕ್ಷಣ ಅಂತರ ಕಾಯ್ದುಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News