Summer Health Tips: ಬೇಸಿಗೆಯಲ್ಲಿ ರಾಮಂಚ ನೀರು ಸೇವನೆಯಿಂದಾಗುವ ಈ ಲಾಭಗಳು ನಿಮಗೆಷ್ಟು ಗೊತ್ತು?

Khus Water Benefits In Summer Season: ಬೇಸಿಗೆಯ ಸೀಸನ್ ನಲ್ಲಿ ಲಾವಂಚ ಅಥವಾ ರಾಮಚ್ಚ ಅಥವಾ ಖಸ್ ಅಥವಾ ಮಡಿವಾಳ ಹುಲ್ಲು ಅಥವಾ ರಾಮಂಚ ಬಳಕೆಯಿಂದ ನೀವು ಬೇಸಿಗೆಯ ಋತುವಿನಲ್ಲಿ ಸಂಭವಿಸುವ ಕಾಯಿಲೆಗಳಿಂದ ಪಾರಾಗಬಹುದು. ರಾವಂಚ ಬೇರುಗಳನ್ನು ಹಾಕಿದ ನೀರನ್ನು ಸೇವಿಸಿ ನೀವು ಶರೀರವನ್ನು ತಂಪಾಗಿಸಬಹುದು.  

Written by - Nitin Tabib | Last Updated : Apr 19, 2023, 09:46 PM IST
  • ಲಾವಂಚ ಬೇರಿನ ನೀರಿನಿಂದಾಗುವ ಲಾಭಗಳು ನಿಮಗೆ ತಿಳಿದಿವೆಯೇ?
  • ಈ ನೀರನ್ನು ಹೇಗೆ ತಯಾರಿಸಬೇಕು?
  • ಅದರಿಂದ ಯಾವ ಯಾವ ಆರೋಗ್ಯಕರ ಲಾಭಗಳಿವೆ? ತಿಳಿಯಲು ಸುದ್ದಿ ಓದಿ
Summer Health Tips: ಬೇಸಿಗೆಯಲ್ಲಿ ರಾಮಂಚ ನೀರು ಸೇವನೆಯಿಂದಾಗುವ ಈ ಲಾಭಗಳು ನಿಮಗೆಷ್ಟು ಗೊತ್ತು? title=
ಬೇಸಿಗೆ ಕಾಲದಲ್ಲಿ ಲಾವಂಚ ನೀರು ಸೇವನೆ!

Benefits Of Khus Water: ನಮ್ಮ ಸುತ್ತಮುತ್ತಲು ಹಲವು ಪ್ರಾಕೃತಿಕ ಗಿಡಮೂಲಿಕೆಗಳಿವೆ, ಅವುಗಳನ್ನು ನಾವು ಹೆಚ್ಚಾಗಿ ಸೇವಿಸುವುದಿಲ್ಲ, ಅಷ್ಟೇ ಯಾಕೆ ಅವುಗಳನ್ನು ನಾವು ವಿಶೇಷವೆಂದೂ ಕೂಡ ಪರಿಗಣಿಸುವುದಿಲ್ಲ, ಆದರೆ ಇಂತಹ ಗಿಡಮೂಲಿಕೆಗಳು ಅದ್ಭುತವಾದ ಗುಣಲಕ್ಷಣಗಳನ್ನು ಹೊಂದಿವೆ, ಇಂತಹುದೇ ಗಿದಮೂಲಿಕೆಗಳಲ್ಲಿ ಲಾವಂಚ ಅಥವಾ ಖಸ್ ಕೂಡ ಒಂದು. ಇತ್ತೀಚಿಗೆ ಜನರು ಲಾವಂಚ ಅಥವಾ ಮಡಿವಾಳ ಹುಲ್ಲಿನ ಬೇರುಗಳನ್ನು ಬಳಸುವುದನ್ನೇ ಬಿಟ್ಟಿದ್ದಾರೆ. ಫ್ರಿಡ್ಜ್ ಇಲ್ಲದ ಕಾಲದಲ್ಲಿ ದೇಹವನ್ನು ತಂಪಾಗಿಸಲು ಲಾವಂಚ ಬಳಸಲಾಗುತ್ತಿತ್ತು. ಅದರಲ್ಲಿಯೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಲಾವಂಚ ಬಳಸುವುದರಿಂದ ಬೇಸಿಗೆಯಲ್ಲಿ ಬರುವ ರೋಗಗಳಿಂದ ರಕ್ಷಣೆ ಸಿಗುತ್ತಿತ್ತು .ರಾಮಚ್ಚ ನೀರನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ಹಾಗಾದರೆ ಬನ್ನಿ ಲಾವಂಚ ನೀರು ಸೇವನೆಯಿಂದಾಗುವ ಪ್ರಯೋಜನಗಳೇನು ತಿಳಿದುಕೊಳ್ಳೋಣ.

ಬೇಸಿಗೆ ಕಾಲದಲ್ಲಿ ಲಾವಂಚ ನೀರನ್ನು ಹೇಗೆ ಸೇವಿಸಬೇಕು?
ಮೊದಲಿಗೆ ಲಾವಂಚ ಬೇರಿನ ಒಂದು ಸೂಡನ್ನು ಮಣ್ಣಿನ ಗಡಿಗೆಯಲ್ಲಿರಿಸಿ, ಅದನ್ನು ನೀರಿನಿಂದ ತುಂಬಿ. ಮೂರು ದಿನಗಳವರೆಗೆ ಲಾವಂಚ ಸೂಡನ್ನು ನೀವು ನೀರಿನಲ್ಲಿರಿಸಬಹುದು ಮತ್ತು ಅದರ ನೀರನ್ನು ಸೇವಿಸಬಹುದು. ಮೂರು ದಿನಗಳ ಬಳಿಕ ಮಣ್ಣಿನ ಪಾತ್ರೆಯಿಂದ ನೀರನ್ನು ಖಾಲಿ ಮಾಡಿ, ಗಡಿಗೆಯನ್ನು ಬಿಸಿಲಲ್ಲಿ ಒಣಗಿಸಿ, ಮಂತ್ತೆ ಅದನ್ನು ನೀರಿನಿಂದ ತುಂಬಿ ಅದರಲ್ಲಿ ಮತ್ತೆ ಆ ಲಾವಂಚ ಸೂಡನ್ನು ಹಾಕಬೇಕು. ಈ ರೀತಿ ಹಲವು ಬಾರಿ ಮಾಡಿದಾಗ ಸೂಡು ಮಣ್ಣಿನ ಪಾತ್ರೆಯ ತಳಭಾಗಕ್ಕೆ ತಲುಪುತ್ತದೆ.

ಬೇಸಿಗೆ ಕಾಲದಲ್ಲಿ ಲಾವಂಚ ನೀರನ್ನು ಸೇವಿಸುವ ಲಾಭಗಳು
ದೇಹದ ದುರ್ವಾಸನೆಯನ್ನು ತೆಗೆದುಹಾಕುತ್ತದೆ

ಬೇಸಿಗೆಯಲ್ಲಿ ದೇಹದ ದುರ್ವಾಸನೆ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ, ಇದನ್ನು ತಪ್ಪಿಸಲು ನೀವು ಲಾವಂಚ ನೀರನ್ನು ಸೇವಿಸಬೇಕು. ಲಾವಂಚ ನೀರನ್ನು ಕುಡಿದರೆ ದೇಹದಲ್ಲಿರುವ ದುರ್ವಾಸನೆಯ ಸಮಸ್ಯೆ ದೂರವಾಗುತ್ತದೆ.

ಹೊಟ್ಟೆ ಶುದ್ಧವಾಗುತ್ತದೆ
ಹೊಟ್ಟೆಯನ್ನು ಸ್ವಚ್ಛಗೊಳಿಸಲು ನೀವು ಲಾವಂಚ ನೀರನ್ನು ಕುಡಿಯಬಹುದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ರಾಮಂಚ ನೀರನ್ನು ಕುಡಿಯಬೇಕು. ರಾಮಚ್ಚ ನೀರು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಹೊಟ್ಟೆಯಲ್ಲಿನ ಗ್ಯಾಸ್, ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ಕೂದಲಿನ ಸಮಸ್ಯೆ ನಿವಾರಿಸುತ್ತದೆ
ನೀವು ಮಡಿವಾಳ ಬೇರಿನ ನೀರನ್ನು ಸೇವಿಸಿದರೆ ಬೇಸಿಗೆಯಲ್ಲಿನ ಕೂದಲು ಉದುರುವಿಕೆ ಸಮಸ್ಯೆ ದೂರಾಗುತ್ತದೆ. ಬೇಸಿಗೆಯಲ್ಲಿ ತಲೆಯಲ್ಲಿ ತುರಿಕೆಯ ಸಮಸ್ಯೆ ಇರುವವರು ಖಸ್ ನೀರನ್ನು ಕುಡಿಯಬೇಕು.

ಇದನ್ನೂ ಓದಿ-Swayamvar Culture: ನಮ್ಮ ದೇಶದ ಈ ರಾಜ್ಯದಲ್ಲಿ ಇಂದಿಗೂ ಅಸ್ತಿತ್ವದಲ್ಲಿದೆ ಸ್ವಯಂವರ ಪದ್ಧತಿ ಎಂದರೆ ನಂಬ್ತೀರಾ?

ನೋವು ನಿವಾರಕ
ಲಾವಂಚ ಬೇರುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಭಟ್ಟಿ ಇಳಿಸುವ ಮೂಲಕ ಅದರಿಂದ ತೈಲವನ್ನು ತಯಾರಿಸಲಾಗುತ್ತದೆ. ಈ ತೈಲವನ್ನು ಸಾಮಾನ್ಯವಾಗಿ ಸಾಬೂನು, ಸುಗಂಧವರ್ಧಕ, ಅಗರಬತ್ತಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ತೈಲವನ್ನು ಮೈ-ಕೈ ನೋವು ನಿವಾರಿಸಲು ಕೂಡ ಬಳಸಲಾಗುತ್ತದೆ. ಇದಲ್ಲದೆ ವಾತ, ಹೊಟ್ಟೆಯಲ್ಲಿ ಜಂತುವಿನ ಸಮಸ್ಯೆ, ಹೊಟ್ಟೆಶೂಲೆ ಇತ್ಯಾದಿಗಳ ಸಮಸ್ಯೆ ನಿವಾರಣೆಗೆ ಲಾವಂಚ ಬೆರೆಸಿದ ನೀರನ್ನು ಕುದಿಸಿ, ನಂತರ ಸೋಸಿ ಕುಡಿಯಬಹುದು. ಹಲವಾರು ಆಯುರ್ವೇದ ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತದೆ. 

ಇದನ್ನೂ ಓದಿ-Lady Finger For Weight Loss: 'ಲೇಡೀಸ್ ಫಿಗರ್' ನಿರ್ವಹಣೆಗೆ ಬಲು ಲಾಭಕಾರಿ ಈ 'ಲೇಡಿ ಫಿಂಗರ್'!

ಗೃಹಾಲಂಕಾರಕ್ಕಾಗಿ ಮತ್ತು ಕೃಷಿಯಲ್ಲಿ ಲಾವಂಚ ಬೇರು ಬಳಕೆ
ಹಲವಾರು ಗೃಹಾಲಂಕಾರ ವಸ್ತುಗಳ ತಯಾರಿಕೆಗೂ ಕೂಡ ಲಾವಂಚ ಬೇರನ್ನು ಬಳಸಲಾಗುತ್ತದೆ. ಇದರಿಂದ ನೀವು ಚಾಪೆ, ಬುತ್ತಿ, ಬೀಸಣಿಕೆ ಇತ್ಯಾದಿ ವಸ್ತುಗಳನ್ನು ತಯಾರಿಸಬಹುದು. ಲಾವಂಚ ಬೇರುಗಳಿಗೆ ನೀರು ಮತ್ತು ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಹೀಗಾಗಿ ಕೆಲ ಇಳಿಜಾರು ಪ್ರದೇಶಗಳಲ್ಲಿನ ರೈತರು ನೀರನ್ನು ಭೂಮಿಯಲ್ಲಿ ಇಂಗಿಸಲು ಲಾವಂಚ ಹುಲ್ಲನ್ನು ಬೆಳೆಯುತ್ತಾರೆ. ಇದೆ ಕಾರಣಕ್ಕೆ ಇದನ್ನು 'ಬಡವ ನಿರಾವರಿ' ಎಂದೂ ಕೂಡ ಕರೆಯಲಾಗುತ್ತದೆ. ಈ ಹುಲ್ಲನ್ನು ನೀವು ಜಾನುವಾರುಗಳಿಗೆ ತಿನ್ನಲೂ ಕೂಡ ಕೊಡಬಹುದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News