ನ್ಯಾಚುರಲ್ ಫೇಸ್ ವಾಶ್ ಆಗಿ ಕೆಲಸ ಮಾಡುತ್ತದೆ ಈ ಎಲೆ.! ತ್ವಚೆಯ ಸಮಸ್ಯೆಗಳಿಗೆ ಸಿಗುವುದು ಇದು ಸುಲಭ ಪರಿಹಾರ

Natural Beauty Tips:  ಸಮಸ್ಯೆಗಳ ಪರಿಹಾರಕ್ಕೆ ರಾಸಾಯನಿಕಗಳಿಂದ ತಯಾರಿಸಿದ ಉತ್ಪನ್ನಗಳನ್ನು ಮುಖಕ್ಕೆ ಬಳಸಿದರೆ, ಅದು ಅಡ್ಡ ಪರಿಣಾಮಗಳನ್ನು ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ ನೈಸರ್ಗಿಕ ವಿಧಾನಗಳ ಮೂಲಕ ಕೂಡಾ ಚರ್ಮದ ಸಮಸ್ಯೆಗಳಿಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು.

Written by - Ranjitha R K | Last Updated : Oct 12, 2022, 08:44 AM IST
  • ಕೆಟ್ಟ ಜೀವನಶೈಲಿಯ ಪರಿಣಾಮ ತ್ವಚೆಯ ಮೇಲೂ ಕಾಣಿಸುತ್ತದೆ
  • ಮೊಡವೆ, ಕಲೆಗಳು, ಮುಖದ ಸುಕ್ಕುಗಳ ಸಮಸ್ಯೆ ಎದುರಾಗುತ್ತದೆ.
  • ಸಮಸ್ಯೆ ಪರಿಹಾರಕ್ಕೆ ಬಳಸಿ ನ್ಯಾಚುರಲ್ ಫೇಸ್ ವಾಶ್
 ನ್ಯಾಚುರಲ್ ಫೇಸ್ ವಾಶ್ ಆಗಿ ಕೆಲಸ ಮಾಡುತ್ತದೆ ಈ ಎಲೆ.! ತ್ವಚೆಯ ಸಮಸ್ಯೆಗಳಿಗೆ ಸಿಗುವುದು ಇದು ಸುಲಭ ಪರಿಹಾರ   title=
Gauva Leaves Benefits (file photo)

Natural Beauty Tips : ಹೆಚ್ಚುತ್ತಿರುವ ಮಾಲಿನ್ಯ ಮತ್ತು ಕೆಟ್ಟ ಜೀವನಶೈಲಿಯ ಪರಿಣಾಮ ನಮ್ಮ ಆರೋಗ್ಯದಂತೆಯೇ ತ್ವಚೆಯ ಮೇಲೂ  ಕಾಣಿಸುತ್ತದೆ. ಇದರಿಂದ ಮುಖದ ಮೇಲೆ ಹಲವು ರೀತಿಯ ಸಮಸ್ಯೆಗಳು  ಕಾಣಿಸಿಕೊಳ್ಳುತ್ತವೆ. ಸೂರ್ಯನ ಪ್ರಖರ ಕಿರಣ ಮತ್ತು ಧೂಳಿನಿಂದಾಗಿ ಅನೇಕರಲ್ಲಿ  ಮೊಡವೆ, ಕಲೆಗಳು, ಮುಖದ ಸುಕ್ಕುಗಳ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಗಳ ಪರಿಹಾರಕ್ಕೆ ರಾಸಾಯನಿಕಗಳಿಂದ ತಯಾರಿಸಿದ ಉತ್ಪನ್ನಗಳನ್ನು ಮುಖಕ್ಕೆ ಬಳಸಿದರೆ, ಅದು ಅಡ್ಡ ಪರಿಣಾಮಗಳನ್ನು ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆದರೆ ನೈಸರ್ಗಿಕ ವಿಧಾನಗಳ ಮೂಲಕ ಕೂಡಾ ಚರ್ಮದ ಸಮಸ್ಯೆಗಳಿಗೆ ಸುಲಭ ಪರಿಹಾರ ಕಂಡುಕೊಳ್ಳಬಹುದು.  

ನೈಸರ್ಗಿಕ ಫೇಸ್ ವಾಶ್ : 
ಟೀಚೆಯ ಆರೋಗ್ಯಕ್ಕೆ ಪೇರಳೆ ಎಲೆಗಳು ಬಹಳ ಪ್ರಯೋಜನಕಾರಿ. ಈ ಎಲೆಗಳಲ್ಲಿ   ಔಷಧೀಯ ಗುಣಗಳು ಅಡಗಿವೆ. ಈ ಕಾರಣದಿಂದಾಗಿ ಪೇರಳೆ ಎಲೆಗಳನ್ನು ಬಳಸುವ ಮೂಲಕ ಚರ್ಮದ ಸಮಸ್ಯೆಗಳನ್ನು ಸುಲಭವಾಗಿ ತೆಗೆದುಹಾಕಬಹುದು. ಈ ಎಲೆಗಳಲ್ಲಿ ವಿಟಮಿನ್ ಸಿ, ಪ್ರೊಟೀನ್ ಮತ್ತು ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿ ಕಂಡು ಬರುತ್ತವೆ. ಈ ಎಲೆಗಳು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿವೆ. ಪೇರಳೆ ಎಲೆಗಳಲ್ಲಿರುವ ಪೋಷಕಾಂಶಗಳು ಚರ್ಮಡ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ.  

ಇದನ್ನೂ ಓದಿ : ಮಡದಿಗೆ ಈ ಗಿಫ್ಟ್ ಕೊಟ್ಟು ನೋಡಿ…ನಿಮ್ಮ ಪ್ರತೀ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಖಂಡಿತ

ಮುಖಕ್ಕೆ ಪೇರಳೆ ಎಳೆಗಳ ಬಳಕೆ ಹೇಗೆ?  :
ಪೇರಳೆ ಎಲೆಗಳನ್ನು ಚೆನ್ನಾಗಿ ಕುದಿಸಿ ಅದನ್ನು ಫಿಲ್ಟರ್ ಮಾಡಿ. ಈ ಎಲೆಗಳನ್ನು ನೀರಿನಲ್ಲಿ ಕುದಿಸಿದಾಗ ಅದರ ಗುಣಗಳು ನೀರಿನಲ್ಲಿ ಇಳಿಯುತ್ತವೆ. ಈಗ ಈ ನೀರು ತಣ್ಣಗಾದ ಮೇಲೆ ಮುಖ ತೊಳೆಯಲು ಬಳಸಬಹುದು. 

ಪೇರಳೆ ಎಲೆ ನೀರಿನ ಪ್ರಯೋಜನಗಳು :
 ಡೆಡ್ ಸ್ಕಿನ್ ತೆಗೆದುಹಾಕಲು ಪೇರಳೆ ನೀರು ಪ್ರಯೋಜನಕಾರಿಯಾಗಿದೆ. ಇದರಿಂದ ಮುಖ ತೊಳೆದರೆ ಚರ್ಮದ ಕೆಟ್ಟ ಪದರ ನಿವಾರಣೆಯಾಗಿ ಮುಖ ಕಾಂತಿಯುತವಾಗುತ್ತದೆ. 

ಈ ನೀರು ಆಂಟಿ ಏಜಿಂಗ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದು ಮುಖದ ಸುಕ್ಕುಗಳನ್ನು ಹೋಗಲಾಡಿಸುತ್ತದೆ. ಈ ನೀರಿನಿಂದ ಪ್ರತಿನಿತ್ಯ ಮುಖ ತೊಳೆದರೆ ತ್ವಚೆ ಬಿಗಿಯಾಗಿ ಕಾಣುತ್ತದೆ. ಇದರಿಂದ ಸುಕ್ಕುಗಳ ಸಮಸ್ಯೆ ದೂರವಾಗುತ್ತದೆ. 

ಇದನ್ನೂ ಓದಿ : ಬಿಳಿ ಕೂದಲಿಗೆ ಡೈ ಮಾಡುವ ಅಗತ್ಯವಿಲ್ಲ, ಈ ಒಂದು ಎಲೆಯನ್ನು ಬಳಸಿದರೆ ಸಾಕು .!

ಪೇರಳೆ ನೀರಿನಲ್ಲಿ ಇರುವ ಪೋಷಕಾಂಶಗಳು ಮುಖದ ಎಣ್ಣೆಯನ್ನು ನಿಯಂತ್ರಿಸುತ್ತದೆ. ಇದರಿಂದ ಮೊಡವೆ ಸಮಸ್ಯೆ ನಿವಾರಣೆಯಾಗುತ್ತದೆ. ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ ಈ ನೀರು ತುಂಬಾ ಪ್ರಯೋಜನಕಾರಿಯಾಗಿ ಸಾಬೀತಾಗಲಿದೆ.  

ಪೇರಳೆ ನೀರಿಗೆ ಕಲೆಗಳನ್ನು ಹೋಗಲಾಡಿಸುವ ಶಕ್ತಿ ಇದೆ. ಈ ನೀರನ್ನು ಬಳಸುವುದರಿಂದ ಟ್ಯಾನಿಂಗ್ ಕೂಡ ದೂರವಾಗುತ್ತದೆ. 

ಈ ನೀರು ಚರ್ಮದಲ್ಲಿ ತುರಿಕೆ, ದದ್ದು ಮತ್ತು ಉರಿ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಈ ನೀರಿನಿಂದ ಮುಖ ತೊಳೆದರೆ ಸೋರಿಯಾಸಿಸ್ ಸಮಸ್ಯೆಯನ್ನು ಕೂಡಾ ಹೋಗಲಾಡಿಸಬಹುದು. 

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News