ಈ 9 ಲಕ್ಷಣಗಳು ಕ್ಯಾನ್ಸರ್ ನ ಸಂಕೇತವಾಗಿರಬಹುದು, ಇವುಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ

ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ , ಎಚ್ಚರ ವಹಿಸಿ. ಇದು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಇವು ಮೇದೋಜೀರಕ ಗ್ರಂಥಿ, ಹೊಟ್ಟೆ, ಅನ್ನನಾಳ ಅಥವಾ ಶ್ವಾಸಕೋಶದ ಕ್ಯಾನ್ಸರ್‌ನ  ಲಕ್ಷಣಗಳಾಗಿರಬಹುದು.

Written by - Ranjitha R K | Last Updated : Nov 26, 2021, 01:15 PM IST
  • ಆಹಾರವು ಗಂಟಲಿನಲ್ಲಿ ಪದೇ ಪದೇ ಸಿಕ್ಕಿಕೊಂಡರೆ ಎಚ್ಚೆತ್ತುಕೊಳ್ಳಿ
  • ಅನ್ನನಾಳದ ಕ್ಯಾನ್ಸರ್ ನಲ್ಲಿ ಹೀಗಾಗಬಹುದು
  • ಆಗಾಗ ಮೂತ್ರ ವಿಸರ್ಜನೆ ಸಮಸ್ಯೆ ಇದ್ದರೆ ನಿರ್ಲಕ್ಷಿಸಬೇಡಿ.
ಈ 9 ಲಕ್ಷಣಗಳು ಕ್ಯಾನ್ಸರ್ ನ ಸಂಕೇತವಾಗಿರಬಹುದು, ಇವುಗಳನ್ನು ಯಾವತ್ತೂ ನಿರ್ಲಕ್ಷಿಸಬೇಡಿ  title=
ಆಹಾರವು ಗಂಟಲಿನಲ್ಲಿ ಪದೇ ಪದೇ ಸಿಕ್ಕಿಕೊಂಡರೆ ಎಚ್ಚೆತ್ತುಕೊಳ್ಳಿ (file photo)

ನವದೆಹಲಿ :  ನಿಮ್ಮ ದೇಹದಲ್ಲಿ ಏನಾದರೂ ಬದಲಾವಣೆ ಕಂಡು ಬಂದರೆ ನಿರ್ಲಕ್ಷಿಸಬೇಡಿ. ಇವು ಕ್ಯಾನ್ಸರ್ (Cancer) ನಂತಹ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು. ಕ್ಯಾನ್ಸರ್ ಎನ್ನುವುದು ಕ್ರಮೇಣ ದೇಹದಾದ್ಯಂತ ಹರಡುವ ರೋಗ. ಸರಿಯಾದ ಸಮಯಕ್ಕೆ ಪತ್ತೆ ಆಗದಿದ್ದರೆ ರೋಗಿಯ ಜೀವ ಉಳಿಸುವುದು ಕೂಡಾ ಕಷ್ಟವಾಗುತ್ತದೆ. ಹೆಚ್ಚಿನ ಜನರು ಕ್ಯಾನ್ಸರ್ ಲಕ್ಷಣಗಳು (Cancer Signs) ಮುಂದುವರಿದ ಹಂತದಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಇದು ಹಾಗಲ್ಲ, ಈ ರೋಗ ಕೆಲವು ಆರಂಭಿಕ ರೋಗಲಕ್ಷಣಗಳು ಸೂಚಿಸುತ್ತವೆ. ಸಾಮಾನ್ಯವಾಗಿ ಈ ರೋಗಲಕ್ಷಣಗಳನ್ನು ನಾವು ನಿರ್ಲಕ್ಷಿಸಿ ಬಿಡುತ್ತೇವೆ. 

ತೂಕ ಕಳೆದುಕೊಳ್ಳುವುದು :
ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ (Weight loss), ಎಚ್ಚರ ವಹಿಸಿ. ಇದು ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಇವು ಮೇದೋಜೀರಕ ಗ್ರಂಥಿ, ಹೊಟ್ಟೆ, ಅನ್ನನಾಳ ಅಥವಾ ಶ್ವಾಸಕೋಶದ ಕ್ಯಾನ್ಸರ್‌ನ (Lungs cancer) ಲಕ್ಷಣಗಳಾಗಿರಬಹುದು.

ದೇಹದಲ್ಲಿ ಊತ ಅಥವಾ ಗಂಟು :
ದೇಹದ ಯಾವುದೇ ಭಾಗದಲ್ಲಿ ಊತ ಅಥವಾ ಗಡ್ಡೆ ಕಂಡುಬಂದರೆ ಅದನ್ನು ನಿರ್ಲಕ್ಷಿಸಬೇಡಿ. ಹೊಟ್ಟೆ, ಸ್ತನ ಅಥವಾ ವೃಷಣದಲ್ಲಿ ಗಡ್ಡೆಗಳು ಕ್ಯಾನ್ಸರ್ ಗೆ ಕಾರಣವಾಗಬಹುದು. 

ಇದನ್ನೂ ಓದಿ : Weight Loss: ಈ ರೀತಿ ನೀರು ಕುಡಿಯುವುದರಿಂದ ನಿಯಂತ್ರಣದಲ್ಲಿರುತ್ತೆ ತೂಕ

ನಿರಂತರ ಕೆಮ್ಮು :
ನಿರಂತರ ಕೆಮ್ಮು (Cough)  ಕೂಡ ಕ್ಯಾನ್ಸರ್ ನ ಲಕ್ಷಣವಾಗಿದೆ. ಮೂರರಿಂದ ನಾಲ್ಕು ವಾರಗಳವರೆಗೆ ಕೆಮ್ಮು, ಕಫ ನಿರಂತರವಾಗಿ ಮುಂದುವರಿದರೆ, ಅದನ್ನು ನಿರ್ಲಕ್ಷಿಸಬೇಡಿ. ನಿರಂತರ ಕೆಮ್ಮು, ಕಫದೊಂದಿಗೆ ರಕ್ತ, ಉಸಿರಾಟದ ತೊಂದರೆ ಶ್ವಾಸಕೋಶದ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು.  

ಮೂತ್ರದಲ್ಲಿ ರಕ್ತ :
ಮೂತ್ರದಲ್ಲಿ ರಕ್ತವು ಕ್ಯಾನ್ಸರ್ ನ (Cancer) ಎಚ್ಚರಿಕೆಯ ಗಂಟೆಯಾಗಿರುತ್ತದೆ. ಇವು ಕರುಳಿನ ಕ್ಯಾನ್ಸರ್ ನ ಚಿಹ್ನೆಗಳಾಗಿರಬಹುದು. ಟಾಯ್ಲೆಟ್ ಪದ್ಧತಿಯಲ್ಲಿ ಬದಲಾವಣೆ ಕಂಡು ಬಂದರೆ, ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗುತ್ತಿದ್ದರೆ, ಮಲಬದ್ಧತೆಯ ಸಮಸ್ಯೆ ಇದ್ದರೆ (constipation), ಅದನ್ನು ನಿರ್ಲಕ್ಷಿಸಬೇಡಿ. ಮೂತ್ರದಲ್ಲಿನ ರಕ್ತವು ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್ ನ ಸಂಕೇತವಾಗಿರಬಹುದು. ಆಗಾಗ ಮೂತ್ರ ವಿಸರ್ಜನೆಯ ಸಮಸ್ಯೆ ಹೊಂದಿದ್ದರೂ ಅದನ್ನು ನಿರ್ಲಕ್ಷಿಸಬೇಡಿ. ಇವು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು. ಇದರಲ್ಲಿ ಕೆಳ ಬೆನ್ನಿನಲ್ಲಿ ನೋವು ಕೂಡ ಕಾಣಿಸಿಕೊಳ್ಳಬಹುದು. 

ನೋವು : 
ವಾರಗಟ್ಟಲೆ ನೋವು ನಿರಂತರವಾಗಿದ್ದರೆ, ಇವು ಕ್ಯಾನ್ಸರ್‌ನ ಲಕ್ಷಣಗಳೂ ಆಗಿರಬಹುದು. ಕ್ಯಾನ್ಸರ್ ಸಂಶೋಧನೆಯ ಪ್ರಕಾರ, ಗೆಡ್ಡೆಗಳು ಮೂಳೆಗಳು, ನರಗಳು ಮತ್ತು ಇತರ ಅಂಗಗಳ ಮೇಲೆ ಒತ್ತಡ ಉಂಟಾಗುವುದರಿಂದ ಕ್ಯಾನ್ಸರ್ ಗೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳುತ್ತದೆ.  

ಇದನ್ನೂ ಓದಿ : Heart Attack:ಹೃದಯಾಘಾತದ ಸಂಕೇತ ನೀಡುತ್ತವೆ ದೇಹದ ಈ ಭಾಗಗಳು

ಎದೆಯುರಿ :
ನಿರಂತರವಾಗಿ ಎದೆಯಲ್ಲಿ ಸುಡುವ (burning sensation) ಅನುಭವವಾಗುತ್ತಿದ್ದರೆ ನಿರ್ಲಕ್ಷಿಸಬೇಡಿ.  ಅದು ಕ್ಯಾನ್ಸರ್ ಲಕ್ಷಣವಾಗಿರಬಹುದು. ಹೊಟ್ಟೆ ಅಥವಾ ಗಂಟಲಿನ ಕ್ಯಾನ್ಸರ್ ವೇಳೆ  ಹೀಗಾಗುತ್ತದೆ. 

ಆಹಾರ ನುಂಗಲು ತೊಂದರೆ :
ಆಹಾರ  ಸೇವಿಸುವಾಗ ನೋವು ಅಥವಾ ನುಂಗಲು ಕಷ್ಟವಾಗುವುದು, ಆಹಾರವು ಗಂಟಲಿನಲ್ಲಿ ಪದೇ ಪದೇ ಸಿಲುಕಿಕೊಂಡರೆ, ಇವು ಕ್ಯಾನ್ಸರ್‌ನ ಲಕ್ಷಣಗಳೂ ಆಗಿರಬಹುದು. ಅನ್ನನಾಳದ ಕ್ಯಾನ್ಸರ್ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 

ರಾತ್ರಿ ಬೆವರುವಿಕೆ:
ರಾತ್ರಿಯಲ್ಲಿ ಬೆವರುವುದು ಅನೇಕ ರೀತಿಯ ಕ್ಯಾನ್ಸರ್‌ಗಳ ಸಂಕೇತವಾಗಿದೆ. ಇದು ಹೆಚ್ಚಾಗಿ Lymphoma ಸಂದರ್ಭದಲ್ಲಿ ಸಂಭವಿಸುತ್ತದೆ. ಈ ರೀತಿಯ ಕ್ಯಾನ್ಸರ್ Lymphatic System ಕಾಣಿಸಿಕೊಳ್ಳುತ್ತದೆ.  Lymphatic System ದೇಹದಾದ್ಯಂತ ಹರಡಿರುವ ರಕ್ತನಾಳಗಳು ಮತ್ತು ಗ್ರಂಥಿಗಳ ಜಾಲವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News