Phone Charging Mistakes: ಸ್ಮಾರ್ಟ್ಫೋನ್ ಜನರ ಬದುಕನ್ನು ತುಂಬಾ ಸುಲಭವಾಗಿಸಿದೆ. ಬಹುತೇಕ ಕೆಲಸಗಳನ್ನು ಕುಳಿತಿರುವಲ್ಲಿಯೇ ಪೂರ್ಣಗೊಳಿಸಲು ಇದು ಸಹಕಾರಿ ಆಗಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಫೋನ್ ಚಾರ್ಜ್ ಮಾಡುವಾಗ ಮಾಡುವ ಕೆಲವು ತಪ್ಪುಗಳಿಗೆ ನೀವು ಭಾರೀ ಬೆಲೆ ತೆತ್ತಬೇಕಾಗುತ್ತದೆ.
ಹೌದು, ಫೋನ್ ಅದರಲ್ಲೂ ವಿಶೇಷವಾಗಿ ಸ್ಮಾರ್ಟ್ಫೋನ್ ಅನ್ನು ಚಾರ್ಜಿಂಗ್ನಲ್ಲಿ (Smartphone Charging) ಇರಿಸಿದಾಗ ಅಪ್ಪಿತಪ್ಪಿಯೂ ಕೂಡ ನಿಮ್ಮಿಂದ ಕೆಲವು ತಪ್ಪುಗಳಾಗದಂತೆ ನಿಗಾವಹಿಸಿ. ಇಲ್ಲದಿದ್ದರೆ, ಈ ತಪ್ಪುಗಳು ನಿಮ್ಮ ಫೋನ್ ಬ್ಯಾಟರಿಯನ್ನಷ್ಟೇ ಹಾಳು ಮಾಡುವುದಿಲ್ಲ. ನಿಮ್ಮ ಜೀವಕ್ಕೂ ಆಪತ್ತು ತಂದೊಡ್ಡಬಹುದು.
ಫೋನ್ ಚಾರ್ಜಿಂಗ್ನಲ್ಲಿಟ್ಟು ಎಂದಿಗೂ ಈ 5 ತಪ್ಪುಗಳನ್ನು ಮಾಡಬೇಡಿ:
ಚಾರ್ಜ್ ಮಾಡುವಾಗ ಫೋನ್ ಬಳಕೆ:
ಮೊದಲೇ ತಿಳಿಸಿದಂತೆ ಫೋನ್ ಚಾರ್ಜಿಂಗ್ನಲ್ಲಿಟ್ಟಾಗಲೂ (Phone Charging) ಕೆಲವರು ಫೋನ್ ಅನ್ನು ಬಿಡುವುದೇ ಇಲ್ಲ. ಆದರೆ, ನಿಮ್ಮ ಈ ತಪ್ಪಿನಿಂದ ಫೋನ್ ಬಲು ಬೇಗ ಬಿಸಿಯಾಗಿ ಬ್ಯಾಟರಿ ಸ್ಫೋಟಗೊಳ್ಳುವ ಸಂಭವವಿರುತ್ತದೆ.
ಇದನ್ನೂ ಓದಿ- Airtel, Jio, Vi ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿದ ಬಿಎಸ್ಎನ್ಎಲ್, ಶೀಘ್ರದಲ್ಲೇ ಆರಂಭವಾಗಲಿದೆ ಈ ಸೇವೆ
ಸರಿಯಾದ ಚಾರ್ಜರ್ ಬಳಸದಿರುವುದು:
ನಮ್ಮಲ್ಲಿ ಬಹುತೇಕ ಜನರು ಫೋನ್ ಬ್ಯಾಟರಿ ಖಾಲಿಯಾದೊಡನೆ ಸಿಕ್ಕ ಸಿಕ್ಕ ಚಾರ್ಜರ್ ಗಳನ್ನು ಫೋನ್ ಚಾರ್ಜ್ ಮಾಡಲು ಬಳಸುತ್ತಾರೆ. ಆದರೆ, ಇದು ಬ್ಯಾಟರಿಯ ಸಾಮರ್ಥ್ಯವನ್ನು ಬಹಳ ಬೇಗ ಕುಗ್ಗಿಸುತ್ತದೆ.
ಹೀಟ್ ಇರುವ ಜಾಗದಲ್ಲಿ ಫೋನ್ ಚಾರ್ಜ್ ಮಾಡುವುದು:
ಬೆಚ್ಚಗಿನ ಸ್ಥಳದಲ್ಲಿ, ಇಲ್ಲವೇ ಹೀಟ್ ಹೆಚ್ಚಾಗಿರುವ ಜಾಗದಲ್ಲಿ ಫೋನ್ ಅನ್ನು ಚಾರ್ಜಿಂಗ್ನಲ್ಲಿ ಇಡುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ಫೋನ್ ಬ್ಲಾಸ್ಟ್ ಆಗಲು ಪ್ರಮುಖ ಕಾರಣವಾಗಬಹುದು.
ಇದನ್ನೂ ಓದಿ- Apple iOS 18 ಅಪ್ಡೇಟ್ ಡೌನ್ಲೋಡ್ ಮಾಡುವ ಹಂತ-ಹಂತದ ಪ್ರಕ್ರಿಯೆ..!
ಫೋನ್ ಫುಲ್ ಚಾರ್ಜ್ ಮಾಡದಿರುವುದು:
ನಮ್ಮಲ್ಲಿ ಕೆಲವರು ಫೋನ್ ಅನ್ನು ಚಾರ್ಜ್ ಹಾಕಿದ ಬಳಿಕ ಅದನ್ನು ಫುಲ್ ಚಾರ್ಜ್ ಆಗಲು ಬಿಡುವುದೇ ಇಲ್ಲ. ಸ್ವಲ್ಪ ಬ್ಯಾಟರಿ ಚಾರ್ಜ್ ಆಗುತ್ತಿದ್ದಂತೆ ಅದನ್ನು ತೆಗೆಯುತ್ತಾರೆ. ಪದೇ ಪದೇ ಈ ರೀತಿ ಮಾಡುವುದರಿಂದ ನಿಮ್ಮ ಫೋನ್ ಬೇಗ ಹಾಳಾಗುತ್ತದೆ.
ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವುದು:
ರಾತ್ರಿಯಿಡೀ ಫೋನ್ ಚಾರ್ಜಿಂಗ್ನಲ್ಲಿಟ್ಟು ಮಲಗುವ ಅಭ್ಯಾಸ ನಿಮಗೂ ಇದ್ದರೆ ಇಂದೇ ಈ ತಪ್ಪನ್ನು ಬಿಟ್ಟು ಬಿಡಿ. ಇದರಿಂದ ಫೋನ್ ಬ್ಯಾಟರಿ ಬೇಗ ಹಾಳಾಗಬಹುದು. ಮಾತ್ರವಲ್ಲ, ಫೋನ್ ಓವರ್ ಹೀಟ್ ಆಗಿ ಬ್ಲಾಸ್ಟ್ ಕೂಡ ಆಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.