Money Plant Vastu Tips : ಮನೆಯಲ್ಲಿ ಮನಿ ಪ್ಲಾಂಟ್ ಹಾಕಿದ್ದರೆ ಈ ನಿಯಮಗಳು ತಿಳಿದಿರಲಿ , ಇಲ್ಲವಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು

Money Plant Vastu Tips :  ಹೆಚ್ಚಿನ ಜನರು ಮನೆಯಲ್ಲಿ ಮನಿ ಪ್ಲಾಂಟ್ ಹಾಕಿರುತ್ತಾರೆ. ಮನಿ ಪ್ಲಾಂಟ್ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ವಾಸ್ತು ಪ್ರಕಾರ ಕೂಡಾ ಇದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ.

Written by - Ranjitha R K | Last Updated : Jul 9, 2021, 07:57 PM IST
  • ಮನಿ ಪ್ಲಾಂಟ್ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.
  • ವಾಸ್ತು ಪ್ರಕಾರ ಕೂಡಾ ಇದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ.
  • ಮನಿ ಪ್ಲಾಂಟ್ ನೆಟ್ಟು ಬೆಳೆಸುವುದಕ್ಕೂ ನಿಯಮಗಳಿವೆ
Money Plant Vastu Tips : ಮನೆಯಲ್ಲಿ ಮನಿ ಪ್ಲಾಂಟ್ ಹಾಕಿದ್ದರೆ ಈ ನಿಯಮಗಳು ತಿಳಿದಿರಲಿ , ಇಲ್ಲವಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು  title=
ಮನಿ ಪ್ಲಾಂಟ್ ನೆಟ್ಟು ಬೆಳೆಸುವುದಕ್ಕೂ ನಿಯಮಗಳಿವೆ (photo inda.com)

ನವದೆಹಲಿ: Money Plant Vastu Tips :  ಹೆಚ್ಚಿನ ಜನರು ಮನೆಯಲ್ಲಿ ಮನಿ ಪ್ಲಾಂಟ್ ಹಾಕಿರುತ್ತಾರೆ. ಮನಿ ಪ್ಲಾಂಟ್ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ವಾಸ್ತು ಪ್ರಕಾರ ಕೂಡಾ ಇದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ, ಮನಿ ಪ್ಲಾಂಟ್  ಬಗ್ಗೆ ಅನೇಕ ನಿಯಮಗಳನ್ನು (Money Plant Vastu Tips) ತಿಳಿಸಲಾಗಿದೆ. ಈ ನಿಯಮಗಳನ್ನು ಅನುಸರಿಸುವ ಮೂಲಕ,  ದುರದೃಷ್ಟವನ್ನು ಅದೃಷ್ಟವನ್ನಾಗಿ ಬದಲಿಸಬಹುದು ಎನ್ನುತ್ತಾರೆ ವಾಸ್ತು ಪಂಡಿತರು. ಆದರೆ ನಿಯಮ ತಪ್ಪಿದರೆ ಅದೃಷ್ಟಕ್ಕೆಂದು ಹಾಕುವ ಸಸಿ ದುರದೃಷ್ಟವನ್ನೇ ತಂದೊಡ್ಡಬಹುದು.   

ವಾಸ್ತು ಪ್ರಕಾರ (Vastu tips) , ಮನೆಯ ಆಗ್ನೀಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಸಸಿ ನೆಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ (positive energy) ನೆಲೆಗೊಳ್ಳುತ್ತದೆಯಂತೆ. ಇದರಿಂದ ಆರ್ಥಿಕ ಸ್ಥಿತಿ ಕೂಡಾ ಸುಧಾರಿಸುತ್ತದೆ ಎನ್ನುವುದು ನಂಬಿಕೆ. 

ಇದನ್ನೂ ಓದಿ : Crying Benefits: ಅಳುವುದರಿಂದ ಸಿಗುವ ಪ್ರಯೋಜನ ಬಗ್ಗೆ ತಿಳಿದರೆ ನಿಮಗೆ ಅಚ್ಚರಿಯಾಗಬಹುದು

ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ (Money plant) ಹಾಕುವುದು ಶುಭವೆಂದು ಪರಿಗಣಿಸಲಾಗಿದೆ. ಮನಿ ಪ್ಲಾಂಟ್ ಅನ್ನು ಆಗ್ನೇಯ ಮೂಲೆಯಲ್ಲಿ ಇಡುವುದರಿಂದ ವ್ಯಕ್ತಿಯ ಅದೃಷ್ಟದ ಬಾಗಿಲು ತೆರೆಯುತ್ತದೆ ಎನ್ನಲಾಗಿದೆ. 

ಮನಿ ಪ್ಲಾಂಟ್ ಅನ್ನು ಯಾವತ್ತೂ ಈಶಾನ್ಯ ದಿಕ್ಕಿನಲ್ಲಿ ಇಡಬಾರದು. ಹೀಗೆ ಮಾಡಿದರೆ ನಕಾರಾತ್ಮಕ ಪರಿಣಾಮ (Negetive energy) ಬೀರುತ್ತದೆ. ಸಸ್ಯವನ್ನು ಈ ದಿಕ್ಕಿನಲ್ಲಿ ಇಡುವುದು ತುಂಬಾ ಹಾನಿಕಾರಕ ಎಂದು ಪರಿಗಣಿಸಲಾಗಿದೆ.

ಇನ್ನು ಮನಿ ಪ್ಲಾಂಟ್ ಬಳ್ಳಿ ನೆಲವನ್ನು ಮುಟ್ಟಲು ಬಿಡಬಾರದು. ಒಂದು ವೇಳೆ ಮನಿ ಪ್ಲಾಂಟ್ ಬಳ್ಳಿ , ಅಲೆಗಳು ನೆಲಕ್ಕೆ ತಾಕಲು ಆರಂಭಿಸಿದರೆ, ಆರ್ಥಿಕ ತೊಂದರೆ ಎದುರಾಗಬಹುದು. ಸಂತೋಷ ಮತ್ತು ಸಮೃದ್ಧಿಯಲ್ಲಿ ಅಡೆತಡೆಗಳನ್ನು ತರಬಹುದು. ಆದ್ದರಿಂದ, ಮಣಿ ಪ್ಲಾಂಟ್ ಬಳ್ಳಿ ಯಾವತ್ತೂ ಎತ್ತರಕ್ಕೆ ಏರುತ್ತಲೇ ಇರಬೇಕು . 

ಇದನ್ನೂ ಓದಿ : Birthday: ಶುಭ ಫಲಿತಾಂಶ ಪಡೆಯಲು ಜನ್ಮದಿನದಂದು ಈ ಕೆಲಸಗಳನ್ನು ತಪ್ಪದೇ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News