ನವರಾತ್ರಿಯಲ್ಲಿ 'ಆಯುಧ ಪೂಜೆ'ಗೆ ಮಹತ್ವದ ಸ್ಥಾನ

ವನವಾಸದಲ್ಲಿದ್ದ ಪಾಂಡವರು ತಮ್ಮ ಅಜ್ಞಾತ ವಾಸ ಮುಗಿಸಿ ಅದರಲ್ಲೂ ಬೃಹನ್ನಳೆ ವೇಷದಲ್ಲಿದ್ದ ಅರ್ಜುನ ತನ್ನ ಆಯುಧ ಇಟ್ಟಿದ್ದ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಆಯುಧ ಪಡೆದ ದಿನದ ಪ್ರತೀಕವಾಗಿ ನವರಾತ್ರಿಯಲ್ಲಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುವ ಪದ್ದತಿಯೂ ಇದೆ.

Last Updated : Oct 25, 2020, 08:20 AM IST
  • ವನವಾಸದಲ್ಲಿದ್ದ ಪಾಂಡವರು ತಮ್ಮ ಅಜ್ಞಾತ ವಾಸ ಮುಗಿಸಿ ಮಹಾ ನವಮಿಯ ದಿನದಂದು ಆಯುಧ ಪೂಜೆ ಮಾಡಿರುವುದಾಗಿ ಐತಿಹ್ಯವಿದೆ.
  • ಅದೇ ರೀತಿ ಮೈಸೂರು ಮಹಾರಾಜರ ಕಾಲದಲ್ಲೂ ನವಮಿಯಂದು ಆಯುಧ ಪೂಜೆ ಮಾಡಲಾಗುತ್ತದೆ.
ನವರಾತ್ರಿಯಲ್ಲಿ 'ಆಯುಧ ಪೂಜೆ'ಗೆ ಮಹತ್ವದ ಸ್ಥಾನ title=
File Image

ಮೈಸೂರು: ಕರೋನಾವೈರಸ್ ಸಂಕಷ್ಟದ ನಡುವೆಯೂ ಸರಳವಾಗಿ ನಾಡಹಬ್ಬ ದಸರಾ (Dasara) ಆಚರಿಸಲಾಗುತ್ತಿದೆ. ವನವಾಸದಲ್ಲಿದ್ದ ಪಾಂಡವರು ತಮ್ಮ ಅಜ್ಞಾತ ವಾಸ ಮುಗಿಸಿ ಮಹಾ ನವಮಿಯ ದಿನದಂದು ಆಯುಧ ಪೂಜೆ (Ayudhapooja) ಮಾಡಿರುವುದಾಗಿ ಹೇಳಲಾಗುತ್ತದೆ.  ಅದರಲ್ಲೂ ಬೃಹನ್ನಳೆ ವೇಷದಲ್ಲಿದ್ದ ಅರ್ಜುನ ತನ್ನ ಆಯುಧ ಇಟ್ಟಿದ್ದ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಆಯುಧ ಪಡೆದ ದಿನದ ಪ್ರತೀಕವಾಗಿ ನವರಾತ್ರಿಯಲ್ಲಿ ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸುವ ಪದ್ದತಿಯೂ ಇದೆ.

ಅದೇ ರೀತಿ ಮೈಸೂರು (Mysore) ಮಹಾರಾಜರ ಕಾಲದಲ್ಲೂ ನವಮಿಯಂದು ಆಯುಧ ಪೂಜೆ ಮಾಡಲಾಗುತ್ತದೆ.  ಮೈಸೂರಿನ 'ಅಂಬಾ ವಿಲಾಸ' ಅರಮನೆಯಲ್ಲಿ ಆಯುಧ ಪೂಜಾ ದಿನದಂದು ಬೆಳಿಗ್ಗಿನಿಂದ ಚಂಡಿಹೋಮ ನಡೆಸಲಾಗುತ್ತದೆ. 

ಜಯಮಾರ್ತಾಂಡ ದ್ವಾರದ ಮೂಲಕ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಪಂಚಲೋಹದ ಪಲ್ಲಕ್ಕಿಯಲ್ಲಿ 'ಖಾಸಾ ಖತ್ತಿ' ಸೇರಿದಂತೆ ಯುದ್ದೋಪಕರಣಗಳು ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗುವುದು. ನಂತರ ದೇವಾಲಯದಲ್ಲಿ ಪೂಜೆ ನೆರವೇರಿಸಿ ಖಾಸಾ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ವಾಪಸ್ ತರಲಾಗುವುದು. 

ಸಾಮಾಜಿಕ ಅಂತರದೊಂದಿಗೆ ದಸರಾ, ಮಾಸ್ಕ್ ಹಾಕದಿದ್ದರೆ ದಂಡ; ಸಚಿವ ಎಸ್.ಟಿ.‌ ಸೋಮಶೇಖರ್

ತದನಂತರ ಮೈಸೂರಿನ ಮಹಾರಾಜರು ಆಯುಧಗಳಿಗೆ ಪೂಜೆ ಮತ್ತು ರಾಜ ಪುರೋಹಿತರಿಂದ ಫಿರಂಗಿಗಳಿಗೆ ಆಯುಧಪೂಜೆ ನೆರವೇರಿಸುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ 
ಆಚರಣೆಯಾಗಿದೆ. ಇಂದಿಗೂ ಕೂಡ ಈ ಆಚರಣೆ ಮುಂದುವರೆದಿದೆ.

ಆಯುಧ ಪೂಜೆಯಂದು ನಗರಗಳಲ್ಲಿ ಮನೆಗಳಲ್ಲಿ ಮಾತ್ರವಲ್ಲದೆ ಕಾರ್ಖಾನೆಗಳು, ಅಂಗಡಿಗಳು, ಕೆಲಸದ ಸ್ಥಳಗಳಲ್ಲಿ ಕೆಲಸದ ಪರಿಕರಗಳನ್ನು ಸ್ವಚ್ಚಗೊಳಿಸಿ ಅಲಂಕರಿಸಿ ಪೂಜಿಸುವ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಕೃಷಿ ಸಾಮಾಗ್ರಿಗಳು, ಗಾಡಿ ಸೇರಿದಂತೆ ಎಲ್ಲಕ್ಕೂ ವಿಶೇಷವಾಗಿ ಪೂಜಿಸುತ್ತಾರೆ. ನವಮಿಯ ದಿನ ಎಲ್ಲಾ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆದ್ದರಿಂದಲೇ ಇದನ್ನು 'ಆಯುಧಪೂಜೆ' ಎಂದು ಕರೆಯಲಾಗುವುದು. 

Trending News