Astrology : ಮಕರರಾಶಿಯೊಳಗೆ ಶನಿ, ಗುರು, ಬುಧ, ಶುಕ್ರ ಸೂರ್ಯ..! ಗ್ರಹಗತಿಯ ಶಕುನ ಏನು.?

 ಉತ್ತರಾಖಂಡದ ಚಮೋಲಿಯಲ್ಲಿ (Chamoli) ಹಿಮಶಿಖರ ಸ್ಫೋಟಿಸಿ ಅಪಾರಅನಾಹುತವಾಗಿದೆ. ಮತ್ತೊಂದು ಕಡೆಯಲ್ಲಿ ಅಮೇರಿಕದ (America) ಯುದ್ದ ಹಡಗನ್ನು ಬೆನ್ನಟ್ಟಿಕೊಂಡು ಹೋಗಿದೆ ಚೀನಾ .

Written by - Ranjitha R K | Last Updated : Feb 9, 2021, 09:37 AM IST
  • ಮಕರ ರಾಶಿಯಲ್ಲಿ 5ಕ್ಕಿಂತ ಹೆಚ್ಚು ಗ್ರಹ ಸೇರಿಕೊಂಡರೆ ಪರಮ ಅಶುಭ ಫಲವಂತೆ.
  • ಫೆ. 14 ರಂದು ಬ್ರಹಸ್ಪತಿ ಅಂದರೆ ಗುರುಗ್ರಹದ ಉದಯ ಕಾಲ, ಕಂಟಕ ಖಚಿತವಂತೆ
  • ಗ್ರಹಗಳ ಈ ಚಲನೆ ರಾಜಕೀಯ ವಲಯದಲ್ಲೂ ಉತ್ಪಾತ ಸೃಷ್ಟಿಸಲಿದೆಯಂತೆ
Astrology : ಮಕರರಾಶಿಯೊಳಗೆ ಶನಿ, ಗುರು, ಬುಧ, ಶುಕ್ರ ಸೂರ್ಯ..! ಗ್ರಹಗತಿಯ  ಶಕುನ ಏನು.? title=
ಮಕರ ರಾಶಿಯಲ್ಲಿ 5ಕ್ಕಿಂತ ಹೆಚ್ಚು ಗ್ರಹ ಸೇರಿಕೊಂಡರೆ ಪರಮ ಅಶುಭ ಫಲವಂತೆ (FIle photo)

ಬೆಂಗಳೂರು : ಉತ್ತರಾಖಂಡದ ಚಮೋಲಿಯಲ್ಲಿ (Chamoli) ಹಿಮಶಿಖರ ಸ್ಫೋಟಿಸಿ ಅಪಾರಅನಾಹುತವಾಗಿದೆ. ಮತ್ತೊಂದು ಕಡೆಯಲ್ಲಿ ಅಮೇರಿಕದ (America) ಯುದ್ದ ಹಡಗನ್ನು ಬೆನ್ನಟ್ಟಿಕೊಂಡು ಹೋಗಿದೆ ಚೀನಾ (China). ಹಿಮಾಲಯದಲ್ಲಿ ಭಾರತ-ಚೀನಾ ಸೇನೆಗಳು ಮರಗಟ್ಟುವ ಚಳಿಯಲ್ಲೂ ಎದುರುಬದುರಾಗಿ  ನಿಂತಿವೆ. ಈ ಬಿಕ್ಕಟ್ಟಿನ ಹೊತ್ತಿನಲ್ಲಿ ಜ್ಯೋತಿಷಿಗಳು ಇನ್ನೊಂದು ಗಾಬರಿಯಾಗುವ ವಿಚಾರ ತಂದಿದ್ದಾರೆ

ಮಕರ ರಾಶಿಗೆ ಇಂದು ಆರನೇ ಗ್ರಹ ಪ್ರವೇಶ : 
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಇಂದು ಮಕರ ರಾಶಿಗೆ ಚಂದ್ರ  ಪ್ರವೇಶಿಸಲಿದ್ದಾನೆ. ಅದರಲ್ಲೇನು ದೊಡ್ಡ ವಿಶೇಷ ಅನ್ನ ಬೇಡಿ. ಈಗಾಗಲೇ ಮಕರ ರಾಶಿಯಲ್ಲಿ ಐದು ಗ್ರಹಗಳು ರಾರಾಜಿಸುತ್ತಿವೆ. ಶನಿ (Saturn), ಗುರು, ಬುಧ, ಶುಕ್ರ (Venus) ಮತ್ತು ಸೂರ್ಯ ಈಗಾಗಲೇ ಮಕರರಾಶಿಯಲ್ಲಿದ್ದಾರೆ.  ಒಂದೇ ರಾಶಿಯಲ್ಲಿ ಐದು ಗ್ರಹಗಳು ಒಟ್ಟಿಗೆ ಇರುವುದು ಶುಭವಲ್ಲ ಎಂಬುದು  ಜ್ಯೋತಿಷಿಗಳ ನಿಲುವು. ಆದರೆ, ಇವತ್ತು ಆರನೇ ಗ್ರಹವಾಗಿ ಚಂದ್ರ ಮಕರ ರಾಶಿ ಪ್ರವೇಶಿಸುತ್ತಿದ್ಧಾನೆ.  ಒಂದೇ ರಾಶಿಯಲ್ಲಿ ಐದಕ್ಕಿಂತ ಹೆಚ್ಚು ಗ್ರಹಗಳು ಸೇರಿಕೊಂಡರೆ ಅದನ್ನು ಗೋಲಯೋಗ ಎಂದು ಕರೆಯಲಾಗುತ್ತದೆ. ಈ ಯೋಗ ಪರಮ ಅಶುಭ ಫಲ ನೀಡುತ್ತದೆ ಎನ್ನಲಾಗುತ್ತದೆ.  ಈ ರೀತಿಯ ಯೋಗ ಬಹಳಅಪರೂಪ. 59 ವರ್ಷಗಳ ಹಿಂದೆ ಅಂದರೆ, 1962ರಲ್ಲಿ ಇದೇ ರೀತಿಯ ಸಂಯೋಗ ಉಂಟಾಗಿತ್ತು. ಆಗ ಮಕರ ರಾಶಿಯಲ್ಲಿ ಒಟ್ಟಿಗೆ ಏಳು ಗ್ರಹಗಳು ಸೇರಿಕೊಂಡಿದ್ದವು. ಯೋಗಾಯೋಗ ನೋಡಿ..! ಭಾರತ ಮತ್ತು ಚೀನಾ (China) ನಡುವೆ ಯುದ್ಧ ಸಂಭವಿಸಿದ್ದು ಅದೇ ವರ್ಷ. ಆಗ ಇಡೀ ವಿಶ್ವವೇ ಎರಡು  ಗುಂಪುಗಳಾಗಿ ವಿಭಜನೆ ಹೊಂದಿ, ಮಹಾಯುದ್ಧದ ಮುನ್ಸೂಚನೆ ನೀಡಿತ್ತು. ರಾಜಕೀಯ ವಲಯದಲ್ಲೂ ಏರುಪೇರಾಗಿತ್ತು.  

 ಈ ವಸ್ತಇದನ್ನೂ ಓದಿ :ುಗಳನ್ನು ಮನೆಯಲ್ಲಿ ಸಂಗ್ರಹಿಸಬೇಡಿ, ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ

ಧನುರಾಶಿಯಲ್ಲಿ ಐದು ಗ್ರಹಗಳು ಸೇರಿದ್ದಾಗ ಆವರಿಸಿತ್ತು ಮಹಾಮಾರಿ ಕರೋನಾ : 
ನಿಮಗೆ ಗೊತ್ತಿರಲಿ, ಡಿ.26, 2019ರಂದು ಧನು ರಾಶಿಯಲ್ಲಿ ಐದು ಗ್ರಹಗಳು ಸೇರಿಕೊಂಡಿದ್ದವು. ಆದರ ಬಳಿಕ ಕಾಣಿಸಿಕೊಂಡು ತಾಂಡವ ಆಡಿದ್ದೇ ಕರೋನಾ (coronavirus) ಎಂಬ ರಕ್ಕಸ . ಸಂಪೂರ್ಣ ಪ್ರಪಂಚ ಕರೋನಾ ಸಂಕಟ ಎದುರಿಸಬೇಕಾಗಿ ಬಂತು. ಮಕರ ರಾಶಿಯಲ್ಲಿರುವುದು ಪ್ರಥ್ವಿಯ ತತ್ವ. ಹಾಗಾಗಿ ಮಕರ ರಾಶಿಯಲ್ಲಿ ಐದಕ್ಕಿಂತ ಹೆಚ್ಚುಗ್ರಹಗಳು ಸೇರಿಕೊಂಡಾಗ ಭೂಮಿಗೆ (earth) ಕಂಟಕ  ಎದುರಾಗುತ್ತದೆಯಂತೆ. ಭೂಕಂಪ, ಹಿಮಪಾತ, ಹಠಾತ್ ಹಿಮ ಬೀಳುವುದು, ಪ್ರವಾಹ,ಅಕಾಲ ಮಳೆ ಇತ್ಯಾದಿ ಪ್ರಾಕೃತಿಕ ಪ್ರಕೋಪಗಳು ಎದುರಾಗಬಹುದು ಎನ್ನುವುದು ಜ್ಯೋತಿಷಿಗಳ ಅಭಿಮತ. ಭಾರತದಲ್ಲಿ ಈ ಕಂಟಕ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಗೋಲಯೋಗದ ಪ್ರಭಾವ ರಾಜಕೀಯ ಕ್ಷೇತ್ರದ ಮೇಲೂ ಉಂಟಾಗುತ್ತದೆಯಂತೆ. ರಾಜಕೀಯ ಕ್ಷೇತ್ರಗಳಲ್ಲೂ ಅಲ್ಲೋಲ ಕಲ್ಲೋಲ ಏರ್ಪಡುವ ಸಾಧ್ಯತೆಗಳಿವೆಯಂತೆ.  

ಫೆ. 14 ಬ್ರಹಸ್ಪತಿಯ ಉದಯಕಾಲ.!
ಫೆ. 9ರಂದು ನ್ಯಾಯ ಕಾರಕ ಶನಿ ಉದಯವಾಗುತ್ತಾನೆ. ಫೆ. 14 ರಂದು ಬ್ರಹಸ್ಪತಿ (Jupiter) ಅಂದರೆ ಗುರುಗ್ರಹದ ಉದಯ ಕಾಲ.  ಆ ಹೊತ್ತಿಗೆ ಮತ್ತೊಂದು ಸಲ ಭಾರೀ ಸಂಕಟ ಸೃಷ್ಟಿಯಾಗಬಹುದು. ಹಣಕಾಸು ವಿಚಾರದಲ್ಲಿ ತೀರಅಡೆತಡೆಗಳು ಉಂಟಾಗಬಹುದು. ಮುಂದಿನ ಎರಡು ತಿಂಗಳು ಪರಿಸ್ಥಿತಿ ಹೀಗೆ ಇರಲಿದೆ. ಪ್ರಾಕೃತಿಕ ಮತ್ತು ರಾಜಕೀಯ ಸಂಕಟಗಳ ಕಾರ್ಮೋಡ ದಟ್ಟವಾಗಲಿದೆ. 

ಇದನ್ನೂ ಓದಿ Home Cleaning Tips : ಮನೆಯನ್ನು ಫಟಾಫಟ್ ಚಮ್ಕಾಯಿಸುವುದು ಹೇಗೆ..? ಇಲ್ಲಿದೆ ಸಿಂಪಲ್ 8 ಸೂತ್ರ..!

ಉತ್ತರಾಖಂಡದ ಘಟನೆ ಮುನ್ಸೂಚನೆಯೇ.?
ಮಕರ ರಾಶಿಗೆ ಆರನೇ ಗ್ರಹ ಪ್ರವೇಶಿಸುವುದು. ಉತ್ತರಾಖಂಡದ ಚಮೋಲಿಯಲ್ಲಿ (Chamoli) ರುದ್ರ ಭೀಕರ ಜಲಪ್ರಳಯ ಉಂಟಾಗಿರುವುದು. ದೇಶದಲ್ಲಿ ರೈತರ ಹೋರಾಟ (farmer protest) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವುದು. ಮುಂಬರುವ ಅನಾಹುತದ ಮುನ್ಸೂಚನೆಯೇ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News