ಮರಗಳ ಹನನ ಪ್ರಕರಣ: ಪ್ರತಾಪ್ ಸಿಂಹ ಸಹೋದರ‌ ವಿಕ್ರಂ ಸಿಂಹಗೆ ಜಾಮೀನು

ಬೇಲೂರು ತಾಲೂಕಿನ ನಂದಗೋಡನಹಳ್ಳಿ ಮರಗಳ ಹನನ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಪ್ರತಾಪ್  ಸಿಂಹ ಸಹೋದರ‌ವಿಕ್ರಂ ಸಿಂಹ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

Written by - Manjunath N | Last Updated : Dec 31, 2023, 08:51 PM IST
  • ಪ್ರತಾಪ ಸಿಂಹ ಸಹೋದರ ವಿಕ್ರಂ ಸಿಂಹ ನಮಗೆ ನ್ಯಾಯಾಲಯದಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ .
  • ಯಾವುದೇ ತಪ್ಪು ಮಾಡದ ನನ್ನ ಮೇಲೆ ರಾಹಕೀಯ ಪಿತೂರಿಗೆ ಹಾಗೂ ರಾಜಕೀಯ ದ್ವೇಷಕ್ಕೆ ನನ್ನ ಮೇಲೆ ಆರೋಪಿ ಪಟ್ಟವನ್ನು ಕಟ್ಟಿದ್ದಾರೆ.
  • ನಾನು ಯಾವುದೇ ಮರವನ್ನು ಕಡೆದಿಲ್ಲ‌.ನಾನು ಬೆಳೆ ಮಾಡಲು ಹೋದವನಿಗೆ ಇಂತಹ ಆರೋಪಗಳನ್ನು ಎದುರಿಸಬೇಕಾಯಿತು.
ಮರಗಳ ಹನನ ಪ್ರಕರಣ: ಪ್ರತಾಪ್ ಸಿಂಹ ಸಹೋದರ‌ ವಿಕ್ರಂ ಸಿಂಹಗೆ ಜಾಮೀನು title=

ಹಾಸನ: ಬೇಲೂರು ತಾಲೂಕಿನ ನಂದಗೋಡನಹಳ್ಳಿ ಮರಗಳ ಹನನ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಪ್ರತಾಪ್  ಸಿಂಹ ಸಹೋದರ‌ವಿಕ್ರಂ ಸಿಂಹ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ.

ಕಳೆದ ೧೫ ದಿನಗಳ ಹಿಂದೆ ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ನಂದಗೋಡನಹಳ್ಳಿ ಗ್ರಾಮದ ಸರ್ವೆ ನಂಬರ್ ೧೬ ರಲ್ಲಿ ಹಾಗು ಪಕ್ಕದ ಸರ್ಕಾರಿ ಜಮೀನಿನಲ್ಲಿ ಮರಗಳ ಹನನ ಆಗಿದ್ದನ್ನು ಕಂಡು ಬೇಲೂರು ದಂಡಾಧಿಕಾರಿ ದೂರಿನ ಅನ್ವಯ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿತ್ತು.ಅದರಂತೆ ವಿಚಾರಣೆಗೆ ಆಗಮಿಸುವಂತೆ ವಿಕ್ರಮ್ ಸಿಂಹ ಅವರಿಗೆ ನೋಟಿಸ್ ನೀಡಿದ್ದರು ಅದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ.ಇದಕ್ಕೆ ವ್ಯಾಪಕ ಚರ್ಚೆಯಾಗಿ ಇವರನ್ನು ಬಂಧಿಸುವಂತೆ ಒತ್ತಡ ಬಂದ ಹಿನ್ನಲೆಯಲ್ಲಿ ಶನಿವಾರ ಅವರನ್ನು ಬೆಂಗಳೂರಿನಲ್ಲಿ ವಿಕ್ರಮ ಸಿಂಹ ಅವರನ್ನು ಬಂಧಿಸಿ ಭಾನುವಾರ ಬೇಲೂರಿನ ಜೆಎಮ್ ಎಫ್ ಸಿ ನ್ಯಾಯಾಧೀಶರಾದ ಪ್ರಕಾಶ್ ನಾಯಕ್ ಎದುರು ಅರಣ್ಯ ಇಲಾಖೆಯ ತನಿಖಾ ತಂಡ ಅವರನ್ನು ಹಾಜರುಪಡಿಸಿದರು.

ಇದನ್ನೂ ಓದಿ: ರಾಜಧಾನಿಯಲ್ಲಿ ನ್ಯೂ ಇಯರ್‌ ಸಂಭ್ರಮ : ಅಹಿತಕರ ಘಟನೆ ನಡೆಯದಂತೆ ಬೆಸ್ಕಾಂ ಅಲರ್ಟ್‌

ವಿಕ್ರಮ್ ಸಿಂಹ ಪರವಾಗಿ ವಕೀಲರಾದ ಚಂದ್ರೇಗೌಡ ಹಾಗೂ ಧರ್ಮೇಗೌಡ ಜಾಮೀನು ಅರ್ಜಿಯನ್ನು ಸಲ್ಲಿಸಿದರು.ಸುಮಾರು ಒಂದು ಗಂಟೆಗಳ ಕಾಲ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಧೀಶರು ವಿಕ್ರಮ್ ಸಿಂಹ ಅವರಿಗೆ ಜಾಮೀನು  ಮಂಜೂರು ಮಾಡಿದರು.ಇದೇ ವೇಳೆ ಮಾತನಾಡಿದ ವಿಕ್ರಮ ಸಿಂಹ ಪರ ವಾದಿಸಿದ ವಕೀಲರಾದ ಚಂದ್ರೇಗೌಡ ಕರ್ನಾಟಕ ಅರಣ್ಯ ಕಾಯ್ದೆ ಕಾಲಂ ೩೩(೫)೬೨.೮೦,೭೧ಎ ,೭೧ ಜಿ,೧೪೪/ಅನ್ವಯ ಅರಣ್ಯ ಇಲಾಖೆ ಕಾಯ್ದೆಗಳು ಜಾಮೀನಿಗೆ ಒಳಪಡುವ ಹಿನ್ನಲೆಯಲ್ಲಿ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.ಯಾವುದೇ ಶರತ್ತಿಲ್ಲದೆ ಜಾಮೀನಿನ ಪ್ರಕರಣವಾಗಿರುವುದರಿಂದ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸುವ ಸಂದರ್ಭದಲ್ಲಿ ಸಹ ವಿಕ್ರಮ್ ಸಿಂಹ ಅವರೇ ಮತಗಳನ್ನು ಕಡರದಿದ್ದಾರೆ ಎಂಬ ಯಾವುದೇ ದಾಖಲೆ ಇಲ್ಲದೆ ಕೇವಲ ಶಂಕಿತ ಆರೋಪಿ ಎಂದು ಬಂಧಿಸಲಾಗಿತ್ತು.ಈಗಾಗಲೇ ಸಂಪೂರ್ಣ ದಾಖಲಾತಿಯನ್ನು ಪರಿಶೀಲಿಸಿದ ನಂತರ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ ಎಂದರು.

ಇದನ್ನೂ ಓದಿ: ಬೇಲೂರು ಶ್ರೀವೀರಾಂಜನೇಯ ಸ್ವಾಮಿ ಶೋಭಾಯಾತ್ರೆ

ನಂತರ ಮಾತನಾಡಿದ ಪ್ರತಾಪ ಸಿಂಹ ಸಹೋದರ ವಿಕ್ರಂ ಸಿಂಹ ನಮಗೆ  ನ್ಯಾಯಾಲಯದಲ್ಲಿ ಸತ್ಯಕ್ಕೆ ಜಯ ಸಿಕ್ಕಿದೆ .ಯಾವುದೇ ತಪ್ಪು ಮಾಡದ ನನ್ನ ಮೇಲೆ ರಾಹಕೀಯ ಪಿತೂರಿಗೆ ಹಾಗೂ ರಾಜಕೀಯ ದ್ವೇಷಕ್ಕೆ ನನ್ನ ಮೇಲೆ ಆರೋಪಿ ಪಟ್ಟವನ್ನು ಕಟ್ಟಿದ್ದಾರೆ.ನಾನು ಯಾವುದೇ ಮರವನ್ನು ಕಡೆದಿಲ್ಲ‌.ನಾನು ಬೆಳೆ ಮಾಡಲು ಹೋದವನಿಗೆ ಇಂತಹ ಆರೋಪಗಳನ್ನು ಎದುರಿಸಬೇಕಾಯಿತು. ಇದು ಒಂದು ರೀತಿಯಲ್ಲಿ ರಾಜಕೀಯ ಷಡ್ಯಂತ್ರ.ಇದು ಎಲ್ಲರಿಗೂ ತಿಳಿದಿರುವ ವಿಷಯ.ಇದು ಸತ್ಯಕ್ಕೆ ಜಯ ಎಂಬುವುದಕ್ಕೆ ಸಾಕ್ಷಿ ಎಂದು ಮಾದ್ಯಮಕ್ಕೆ ತಿಳಿಸಿದರು.ಇದೇ ವೇಳೆ ಅವರನ್ನು ಕರೆ ತಂದ ಸಂದರ್ಭದಲ್ಲಿ ನ್ಯಾಯಾಲಯದ ಬಳಿ ಬಿಗಿ ಪೊಲೀಸ್ ಬಂದೋಭಸ್ತ್ ಮಾಡಲಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News