Special trains: ವಿವಿಧ ನಗರಗಳಿಗೆ ಏಕಮಾರ್ಗದ ವಿಶೇಷ ರೈಲುಗಳ ಸಂಚಾರ

Special train List: ಈ ವಿಶೇಷ ರೈಲುಗಳ ಎಸಿ ಬೋಗಿಗಳಲ್ಲಿ ಬೆಡ್‌ ಶೀಟ್‌ ಮತ್ತು ಹೊದಿಕೆಗಳನ್ನು ಒದಗಿಸಲಾಗುವುದಿಲ್ಲವೆಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಹೇಳಿದ್ದಾರೆ.

Written by - Manjunath Hosahalli | Edited by - Puttaraj K Alur | Last Updated : May 24, 2023, 07:25 PM IST
  • ಪ್ರಯಾಣಿಕರ ಸುಖಕರ ಪ್ರಯಾಣ ಸೇರಿ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸುವ ಹಿನ್ನೆಲೆ
  • ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಿಭಾಗದಿಂದ ನಿರ್ಧಾರ
  • ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ವಿಶೇಷ ರೈಲುಗಳ ಸಂಚಾರ
Special trains: ವಿವಿಧ ನಗರಗಳಿಗೆ ಏಕಮಾರ್ಗದ ವಿಶೇಷ ರೈಲುಗಳ ಸಂಚಾರ title=
ವಿವಿಧ ನಗರಗಳಿಗೆ ವಿಶೇಷ ರೈಲು!

ಬೆಂಗಳೂರು: ಪ್ರಯಾಣಿಕರ ಸುಖಕರ ಪ್ರಯಾಣ ಸೇರಿ ಹೆಚ್ಚುವರಿ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ವಿವಿಧ ನಗರಗಳಿಗೆ ವಿಶೇಷ ರೈಲುಗಳನ್ನು ಓಡಿಸಲು ನೈರುತ್ಯ ರೈಲ್ವೆ ವಿಭಾಗ ನಿರ್ಧರಿಸಿದೆ. ಇವುಗಳ  ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.

1. ಹುಬ್ಬಳ್ಳಿ- ಉತ್ತರ ಪ್ರದೇಶದ ಕಾನ್ಪುರ ನಡುವೆ ವಿಶೇಷ ರೈಲು (06557)

ಮೇ 27ರಂದು ರಾತ್ರಿ 11:50ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು ಮೇ 29ರ ಬೆಳಗ್ಗೆ 11:10ಗಂಟೆಗೆ ಕಾನ್ಪುರ ಸೆಂಟ್ರಲ್ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಗದಗ (01:00/01:05AM), ಬಾದಾಮಿ (02:12/02:13AM), ಬಾಗಲಕೋಟೆ (02:53/02:55AM), ಬಸವನಬಾಗೇವಾಡಿ ರೋಡ್‌ (04:04/04:05AM), ವಿಜಯಪುರ (05:25/05:30AM), ಸೊಲ್ಲಾಪುರ (08:35/08:40AM), ಕುರ್ದುವಾಡಿ (09:40/09:42AM), ದೌಂಡ್ (11:10/11:15AM), ಅಹ್ಮದ್‌ನಗರ (12:35/12:38PM), ಕೋಪರಗಾಂವ್ (02:55/02:57PM), ಮನ್ಮಾಡ್ (04:50/04:55PM), ಭೂಸಾವಲ್ (07:35/07:40PM), ಇಟಾರ್ಸಿ (12:48/12:50AM), ರಾಣಿ ಕಮಲಾಪತಿ (02:04/02:12), ವಿರಂಗನಾ ಲಕ್ಷ್ಮೀಬಾಯಿ ಝಾನ್ಸಿ (06:20/06:25AM) ಮತ್ತು ಓರೈ (07:40/07:42AM) ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ವಿಶೇಷ ರೈಲು (2) ಎಸಿ ತ್ರಿ ಟೈಯರ್ ಬೋಗಿ, (11) ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು, (6) ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು (2) ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿವೆ.

2. ಯಶವಂತಪುರ - ವಡೋದರಾದ ವಿಶ್ವಾಮಿತ್ರಿ ನಡುವೆ ವಿಶೇಷ ರೈಲು

ಈ ರೈಲು (06565) ಮೇ 27ರಂದು ಬೆಳಗ್ಗೆ 8:15ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ಸಂಜೆ 4:30ಗಂಟೆಗೆ ವಡೋದರಾ ನಗರದ ವಿಶ್ವಾಮಿತ್ರಿ ಜಂಕ್ಷನ್‌ಗೆ ತಲುಪಲಿದೆ.

ಈ ರೈಲು ಮಾರ್ಗದಲ್ಲಿ ತುಮಕೂರು (09:05/09:06AM), ಅರಸೀಕೆರೆ (11:00/11:05AM), ಚಿಕ್ಕಜಾಜೂರು (12:25/12:27PM), ದಾವಣಗೆರೆ(01:00/01:02PM), ಕೊಟ್ಟೂರು (02:40/02:42PM), ಕೊಪ್ಪಳ (05:43/05:45PM), ಗದಗ (06:55/07:00PM), ಎಸ್‌ಎಸ್‌ಎಸ್‌ ಹುಬ್ಬಳ್ಳಿ (08:00/08:10PM), ಧಾರವಾಡ (08:40/08:42PM), ಬೆಳಗಾವಿ (11:00/11:02PM), ಮೀರಜ್ (02:20/02:25AM), ಪುಣೆ (08:20/08:30AM), ವಸಾಯಿ ರೋಡ್ (12:10/12:20PM), ವಾಪಿ (01:25/01:27PM) ಮತ್ತು ಸೂರತ್ (02:40/02:45PM) ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ವಿಶೇಷ ರೈಲು (1) ಎಸಿ ತ್ರಿ ಟೈಯರ್ ಬೋಗಿ, (18) ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು (2) ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿರಲಿದೆ.

ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕಾರಕ್ಕೆ ಮುಂದಾದ ಪ್ರತಿಪಕ್ಷಗಳು 

3. ಬೆಂಗಳೂರು - ಹೌರಾ ನಡುವೆ ವಿಶೇಷ ರೈಲು

ಈ ರೈಲು (06569) ಮೇ 28ರಂದು 12:30 PMಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣದಿಂದ ಹೊರಟು ಮರುದಿನ ಬೆಳಗ್ಗೆ 11:45ಗಂಟೆಗೆ ಹೌರಾ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ (12.43/12.45AM), ಬಂಗಾರಪೇಟೆ (01.23/01.25AM), ಜೋಲಾರ್‌ಪೇಟೆ (03.35/03.40AM), ಕಟಪಾಡಿ (04.40/04.45AM), ರೇಣಿಗುಂಟಾ (07.00/07.05AM), ವಿಜಯವಾಡ (02.20/02.30PM), ರಾಜಮಂಡ್ರಿ (04.50/04.52PM), ದುವ್ವಾಡ (09.03/09.05PM), ಕೊಟ್ಟವಲಸಾ (09.56/09.58PM), ವಿಜಯನಗರಂ ಜಂ. (10.35/10.45PM), ಶ್ರೀಕಾಕುಲಂ (11.45/11.47PM), ಪಲಾಸ (12.40/12.50AM), ಬ್ರಹ್ಮಪುರ (01.50/01.55AM), ಖುರ್ದಾ ರೋಡ್‌ (03.50/04.00AM), ಭುವನೇಶ್ವರ (04.25/04.30AM) ಕಟಕ್‌ (05.00/05.05AM), ಜಾಜ್‌ಪುರ ಕೆ. ರೋಡ್‌ (06.00/06.05AM), ಭದ್ರಖ್ (06.45/06.47AM), ಖರಗ್‌ಪುರ ಜಂ. (09.10/09.18AM) ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಈ ವಿಶೇಷ ರೈಲು (1) ಎಸಿ ತ್ರಿ ಟೈಯರ್ ಬೋಗಿ, (14) ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು ಮತ್ತು (2) ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಹೊಂದಿರಲಿವೆ.

4. ಬೆಂಗಳೂರು – ಬಿಹಾರದ ದಾನಪುರ ನಡುವೆ ವಿಶೇಷ ರೈಲು

ಈ ರೈಲು (06567) ಮೇ 30ರಂದು ಬೆಳಗ್ಗೆ 6:50ಗಂಟೆಗೆ ಯಶವಂತಪುರ ನಿಲ್ದಾಣದಿಂದ ಹೊರಟು 3ನೇ ದಿನ ಬೆಳಗ್ಗೆ 8ಗಂಟೆಗೆ ದಾನಪುರ್‌ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಕೃಷ್ಣರಾಜಪುರಂ (07.05/07.07AM), ಜೋಲಾರ್‌ಪೆಟ್ಟೈ (09.50/10.10AM), ಕಟ್ಪಾಡಿ (11.15/11.20AM), ಅರಕ್ಕೋಣಂ (12.08/12.10PM), ಪೆರಂಬೂರ್ (01.03/01.05PM) ಗುಡೂರು (04.08/04.10PM), ವಿಜಯವಾಡ (09.10/09.20PM), ವಾರಂಗಲ್ (12.05/12.06AM), ಬಲ್ಹರಷ್ಹಾ (03.55/04.00AM), ನಾಗ್ಪುರ (07.25/07.30AM), ಇಟಾರ್ಸಿ (01.40/01.50PM), ಜಬ್ಬಲಪುರ (05.10/05.20PM), ಸತ್ನಾ (08.10/08.20PM), ಪ್ರಯಾಗ ರಾಜ್‌ ಛೋಕಿ (12.10/12.15AM), ದೀನ-ದಯಾಳ-ಉಪಾದ್ಯಯ (04.10/04.20AM), ಬಕ್ಸರ್ (05.50/05.52AM), ಆರಾ ಜಂ. (06:50/06.52) ಈ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.

ಇದನ್ನೂ ಓದಿ: ಪಂಜಾಬ್ ಟಾಪ್ ದರೋಡೆಕೋರ ಜರ್ನೈಲ್ ಸಿಂಗ್ ಹತ್ಯೆ, ಸಿಸಿಟಿವಿಯಲ್ಲಿ ಸೆರೆ

ಈ ವಿಶೇಷ ರೈಲು (1) ಎಸಿ ಟು ಟೈಯರ್ ಬೋಗಿ, (1) ಎಸಿ ತ್ರಿ ಟೈಯರ್ ಬೋಗಿ, (15) ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿಗಳು, (2) ಜನರಲ್‌ ಸೆಕೆಂಡ್ ಕ್ಲಾಸ್ ಬೋಗಿಗಳು ಮತ್ತು (2) ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಮತ್ತು ಬ್ರೇಕ್ ವ್ಯಾನ್ ಇರಲಿವೆ.

ಪ್ರಯಾಣಿಕರಲ್ಲಿ ವಿಶೇಷ ಸೂಚನೆ: ಈ ಮೇಲಿನ ವಿಶೇಷ ರೈಲುಗಳ ಎಸಿ ಬೋಗಿಗಳಲ್ಲಿ ಬೆಡ್‌ ಶೀಟ್‌ ಮತ್ತು ಹೊದಿಕೆಗಳನ್ನು ಒದಗಿಸಲಾಗುವುದಿಲ್ಲವೆಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News