ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..ಕಲ್ಕಿ ಚಿತ್ರದ ಟಿಕೆಟ್ ದರ ಇಳಿಕೆ!

Ticket price of Kalki: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಕಲ್ಕಿ ಇತ್ತೀಚೆಗೆ ಬಿಡುಗಡೆಯಾಗಿ ದೊಡ್ಡ ಯಶಸ್ಸನ್ನು ಪಡೆದಿದೆ.. ಈಗಾಗಲೇ ಥಿಯೇಟರ್‌ಗಳಲ್ಲಿ ಓಡುತ್ತಿರುವ ಈ ಸಿನಿಮಾ ದಾಖಲೆಗಳ ಸುರಿಮಳೆ ಸುರಿಸುತ್ತಿದೆ..

Written by - Savita M B | Last Updated : Jul 2, 2024, 04:11 PM IST
  • ಬಿಗ್ ಬಜೆಟ್ ಸಿನಿಮಾ ಕಲ್ಕಿ ಜೂನ್ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು
  • ಈಗಿನ ದರಕ್ಕಿಂತ ಸಾಮಾನ್ಯ ದರದಲ್ಲಿ ಟಿಕೆಟ್‌ಗಳು ಬರಲಿವೆಯಂತೆ.
ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..ಕಲ್ಕಿ ಚಿತ್ರದ ಟಿಕೆಟ್ ದರ ಇಳಿಕೆ! title=

Kalki: ಬಿಗ್ ಬಜೆಟ್ ಸಿನಿಮಾ ಕಲ್ಕಿ ಜೂನ್ 27 ರಂದು ವಿಶ್ವದಾದ್ಯಂತ ಬಿಡುಗಡೆಯಾಯಿತು.. ಆದರೆ, ಸದ್ಯದಲ್ಲೇ ಕಲ್ಕಿ ಚಿತ್ರದ ಟಿಕೆಟ್ ದರ ಕಡಿಮೆಯಾಗಲಿದ್ದು, ಸದ್ಯ ಈ ಸಿನಿಮಾದ ಟಿಕೆಟ್ ದರ ಜನಸಾಮಾನ್ಯರಿಗೆ ಕೈಗೆಟುಕುವಂತಿದೆ.

ಮಾಹಿತಿ ಪ್ರಕಾರ ಸಿಂಗಲ್ ಸ್ಕ್ರೀನ್ ನಲ್ಲಿ 250 ರೂ., ಮಲ್ಟಿಪ್ಲೆಕ್ಸ್ ನಲ್ಲಿ 500 ರೂ.ಗಿಂತ ಹೆಚ್ಚಿತ್ತು.. ಇಡೀ ಕುಟುಂಬ ಸಮೇತ ಈ ಸಿನಿಮಾಗೆ ಹೋಗೋದು ಕಷ್ಟವಾಗಿತ್ತು.. ಹೀಗಾಗಿ ಮುಂದಿನ ದಿನಗಳಲ್ಲಿ ಟಿಕೆಟ್ ದರ ಇಳಿಕೆಯಾಗಲಿದೆ ಎಂದು ವರದಿಯಾಗಿದೆ. ಈಗಿನ ದರಕ್ಕಿಂತ ಸಾಮಾನ್ಯ ದರದಲ್ಲಿ ಟಿಕೆಟ್‌ಗಳು ಬರಲಿವೆಯಂತೆ.

ಇದನ್ನೂ ಓದಿ-ಸೇನೆ ಸೇರಿ ದೇಶ ಸೇವೆಯ ಕನಸು, ಆದ್ರೆ ಆಗಿದ್ದು ಸಿನಿ ಇಂಡಸ್ಟ್ರಿಯ ಗ್ಲಾಮರ್ ಬ್ಯೂಟಿ..! ಯಾರು ಈಕೆ..?

 ಬಾಹುಬಲಿ ನಂತರ ಪ್ರಭಾಸ್ ಅವರ ಹಿಟ್ ಸಿನಿಮಾ ಕಲ್ಕಿ. ಹಲವು ಬಾಲಿವುಡ್ ತಾರೆಯರು ಈ ಸಿನಿಮಾದಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯದಲ್ಲೇ ಕಲ್ಕಿ ಚಿತ್ರದ ಟಿಕೆಟ್ ದರದ ಬಗ್ಗೆ ನಿರ್ಮಾಪಕರು ನಿರ್ಧಾರ ಕೈಗೊಳ್ಳಲಿದ್ದು, ಕಲ್ಕಿ ಚಿತ್ರದ ಟಿಕೆಟ್ ದರ ಇಳಿಕೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ವಾರದವರೆಗೆ ಚಿತ್ರಕ್ಕೆ ಬರುವವರ ಸಂಖ್ಯೆಗೆ ಅನುಗುಣವಾಗಿ ಕಲ್ಕಿ ಟಿಕೆಟ್ ದರ ಮಲ್ಟಿಪ್ಲೆಕ್ಸ್‌ಗಳಲ್ಲಿ 235 ರೂ ಮತ್ತು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 150 ರೂ ಆಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ-ಬಾರ್ಬಿ ಡಾಲ್‌ನಂತೆ ಮಿಂಚಿದ ನಿವೇದಿತಾ..! ಇಲ್ಲಿವೆ ನೋಡಿ ಗೊಂಬೆಯ ಕ್ಯೂಟ್‌ ಫೋಟೋಸ್‌

 ಟಿಕೆಟ್ ದರ ಕಡಿಮೆಯಾದರೆ ಅನೇಕರು ಕುಟುಂಬ ಸಮೇತ ಸಿನಿಮಾ ನೋಡುವ ಅವಕಾಶ ಸಿಗಲಿದೆ. ಸದ್ಯದ ದರದಲ್ಲಿ ಫ್ಯಾಮಿಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಸಾಧ್ಯವೇ ಇಲ್ಲ. ಇದನ್ನರಿತ ಸಿನಿಮಾ ನಿರ್ಮಾಪಕರು ಟಿಕೆಟ್ ದರ ಇಳಿಸಲು ಮುಂದಾಗಿದ್ದಾರೆ. ಹೀಗೆ ಮಾಡುವುದರಿಂದ ಫ್ಯಾಮಿಲಿ ಆಡಿಯನ್ಸ್ ಕೂಡ ಸಿನಿಮಾವನ್ನು ಹೆಚ್ಚು ಬಾರಿ ನೋಡುವ ಅವಕಾಶ ಸಿಗುತ್ತದೆ. 

ಕಲ್ಕಿ 2898 AD ಅನ್ನು ನಾಗ್ ಅಶ್ವಿನ್ ಅವರು ಪುರಾಣಗಳು ಮತ್ತು ದಂತಕಥೆಗಳನ್ನು ಆಧರಿಸಿದ ವೈಜ್ಞಾನಿಕ ನಾಟಕವನ್ನಾಗಿ ನಿರ್ದೇಶಿಸಿದ್ದಾರೆ. ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮುಂತಾದ ಅನೇಕ ತಾರೆಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಇನ್ನೂ ಹಲವರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News