Jio Airtel Plans: ಇಂದಿನಿಂದ ದುಬಾರಿಯಾಗಲಿದೆ ಜಿಯೋ, ಏರ್‌ಟೆಲ್ ಯೋಜನೆಗಳು

Jio Airtel Plans: ನೀವು ರಿಲಯನ್ಸ್ ಜಿಯೋ, ಏರ್‌ಟೆಲ್  ಗ್ರಾಹಕರಾಗಿದ್ದರೆ ಇದು ನಿಮಗೆ ತುಂಬಾ ಮುಖ್ಯವಾದ ಸುದ್ದಿ. ಇಂದಿನಿಂದ ಜಿಯೋ, ಏರ್‌ಟೆಲ್  ಬಳಕೆದಾರರು ಹೊಸ ರೀಚಾರ್ಜ್‌ಗಾಗಿ ಅಧಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

Written by - Yashaswini V | Last Updated : Jul 3, 2024, 11:13 AM IST
  • ಜಿಯೋ, ಏರ್‌ಟೆಲ್ ಪರಿಷ್ಕೃತ ದರಗಳು ಇಂದಿನಿಂದ (ಜುಲೈ 03) ಜಾರಿಗೆ ಬರಲಿದದೆ
  • ಇಂದಿನಿಂದ ಜಿಯೋ, ಏರ್‌ಟೆಲ್ ಗ್ರಾಹಕರು ರೀಚಾರ್ಜ್‌ಗಾಗಿ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
  • ನಾಳೆಯಿಂದ ವೋಡಾಫೋನ್-ಐಡಿಯಾ ರಿಚಾರ್ಜ್ ಯೋಜನೆಗಳ ದರ ಕೂಡ ಹೆಚ್ಚಾಗಲಿದೆ.
Jio Airtel Plans: ಇಂದಿನಿಂದ ದುಬಾರಿಯಾಗಲಿದೆ ಜಿಯೋ, ಏರ್‌ಟೆಲ್  ಯೋಜನೆಗಳು  title=

Jio Airtel Plans: ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ (Reliance Jio) ಮತ್ತು ಏರ್‌ಟೆಲ್ ರಿಚಾರ್ಜ್ ಯೋಜನೆಗಳು (Airtel Recharge Plans) ಇಂದಿನಿಂದ ದುಬಾರಿಯಾಗಲಿದೆ. ಜಿಯೋ, ಏರ್‌ಟೆಲ್ ಪರಿಷ್ಕೃತ ದರಗಳು ಇಂದಿನಿಂದ (ಜುಲೈ 03) ಜಾರಿಗೆ ಬರಲಿದ್ದು,  ರೀಚಾರ್ಜ್‌ಗಾಗಿ ಗ್ರಾಹಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವೋಡಾಫೋನ್-ಐಡಿಯಾ (Vodafone-Idea) ಕೂಡ ರಿಚಾರ್ಜ್ ಯೋಜನೆಗಳ ದರ ಹೆಚ್ಚಳ ಘೋಷಿಸಿದ್ದು, ಇದು ನಾಳೆಯಿಂದ (ಜುಲೈ 04) ಜಾರಿಗೆ ಬರಲಿದೆ. 

ಯೋಜನೆಗಳ ದರಗಳನ್ನು 10-20% ಹೆಚ್ಚಿಸಿದ ಏರ್‌ಟೆಲ್: 
ಭಾರತದ ಪ್ರಸಿದ್ದ ಟೆಲಿಕಾಂ ಕಂಪನಿಯಾದ ಏರ್‌ಟೆಲ್ (Airtel) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ  ಹಲವು ಯೋಜನೆಗಳ  ದರಗಳನ್ನು ಪರಿಷ್ಕರಿಸಿದೆ. ಈ ಬೆಲೆಗಳನ್ನು ಸುಮಾರು 10-20% ಹೆಚ್ಚಿಸಲಾಗಿದೆ. 

ಏರ್‌ಟೆಲ್ ರಿಚಾರ್ಜ್ ಯೋಜನೆಗಳ ಪರಿಷ್ಕೃತ ಬೆಲೆಗಳು: 
ಏರ್‌ಟೆಲ್ 28 ದಿನಗಳ ವ್ಯಾಲಿಡಿಟಿಯ ಅನಿಯಮಿತ ಕರೆಗಳು ಮತ್ತು 2ಜಿಬಿ ಡೇಟಾ ಹೊಂದಿರುವ ಯೋಜನೆಗೆ ಇದೀಗ 199ರೂ. ಶುಲ್ಕವನ್ನು ವಿಧಿಸುತ್ತದೆ.  ಮೊದಲಿಗೆ  455 ರೂ.ಗೆ   ಲಭ್ಯವಿದ್ದ 84 ದಿನಗಳ ರಿಚಾರ್ಜ್ ಯೋಜನೆಯನ್ನು (Recharge Plans)  ಕಂಪನಿ ಕೈಬಿಟ್ಟಿದೆ. ಬದಲಿಗೆ ಅನ್ಲಿಮಿಟೆಡ್ ಕಾಲ್, 6ಜಿಬಿ ಡೇಟಾ ಜೊತೆಗೆ ಈ ಯೋಜನೆಯ ಬೆಲೆಯನ್ನು 509ರೂ.ಗಳಿಗೆ ಹೆಚ್ಚಿಸಲಾಗಿದೆ. 

ಇದನ್ನೂ ಓದಿ- Airtel, Jio ಬಳಿಕ VI ಗ್ರಾಹಕರಿಕ್ ಶಾಕ್, ಮೊಬೈಲ್ ಟ್ಯಾರಿಫ್ ಪ್ಲಾನ್‌ಗಳ ಬೆಲೆ ಹೆಚ್ಚಳ

ಇದಲ್ಲದೆ, 1799 ರೂ.ಗಳ  ವಾರ್ಷಿಕ ಯೋಜನೆಯ ಬೆಲೆಯನ್ನು ಕೂಡ ಪರಿಷ್ಕರಿಸಿರುವ ಏರ್‌ಟೆಲ್ ಅಗ್ಗದ ವಾರ್ಷಿಕ ರೀಚಾರ್ಜ್ ಯೋಜನೆಯ ಶುಲ್ಕವನ್ನು 1999 ರೂ.  ಗಳಿಗೆ  ಹೆಚ್ಚಿಸಿದೇ. 

ರಿಲಯನ್ಸ್ ಜಿಯೋದ ಅಗ್ಗದ ರೀಚಾರ್ಜ್‌ಗಳ ಪರಿಷ್ಕೃತ ಬೆಲೆ: 
ರಿಲಯನ್ಸ್ ಜಿಯೋ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳ (Reliance Jio Prepaid Recharge Plans) ದರವನ್ನು ಹೆಚ್ಚಿಸಿದ್ದು ಪರಿಷ್ಕೃತ ದರಗಳು ಕೆಳಕಂಡಂತಿವೆ... 

ಮಾಸಿಕ ರೀಚಾರ್ಜ್ ಯೋಜನೆ: 
ಜಿಯೋ 155ರೂ. ಇದ್ದ ಮಾಸಿಕ ರಿಚಾರ್ಜ್ ಶುಲ್ಕವನ್ನು 189ರೂಗಳಿಗೆ ಏರಿಸಿದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿರುವ ಈ ಯೋಜನೆಯಲ್ಲಿ ಅನ್ಲಿಮಿಟೆಡ್ ಕಾಲ್, 2ಜಿಬಿ ಡೇಟಾ ಲಭ್ಯವಿರಲಿದೆ. 

ಇದನ್ನೂ ಓದಿ- 

84 ದಿನಗಳ  ರಿಚಾರ್ಜ್ ಯೋಜನೆ ಬೆಲೆ: 
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ 666ರೂ.ಗಳಲ್ಲಿ ನೀಡುತ್ತಿದ್ದ 84 ದಿನಗಳ ವ್ಯಾಲಿಡಿಟಿಯೊಂದಿಗಿನ  ಅಗ್ಗದ ರೀಚಾರ್ಜ್ ಯೋಜನೆಯ ಬೆಲೆಯನ್ನು 799ರೂ.ಗಳಿಗೆ ಹೆಚ್ಚಿಸಿದೆ. ಇದರಲ್ಲಿ ಗ್ರಾಹಕರು ಅನಿಯಮಿತ ಕರೆ, ನಿತ್ಯ 1.5ಜಿಬಿ ಹೈ ಸ್ಪೀಡ್ ಇಂಟರ್ನೆಟ್  ಸೌಲಭ್ಯವನ್ನು ಕೂಡ ಪಡೆಯುತ್ತಾರೆ. 

ಜಿಯೋ ಅಗ್ಗದ ವಾರ್ಷಿಕ ಯೋಜನೆ: 
ಜಿಯೋ 1559 ರೂ.ಗಳಿಗೆ ಲಭ್ಯವಿದ್ದ ಅಗ್ಗದ ವಾರ್ಷಿಕ ರಿಚಾರ್ಜ್ ಯೋಜನೆಯ ಬೆಲೆಯನ್ನು 1899 ರೂ.ಗಳಿಗೆ ಹೆಚ್ಚಿಸಿದೆ.  ಇದರಲ್ಲಿ ಗ್ರಾಹಕರು 336ದಿನಗಳ ಮಾನ್ಯತೆಯೊಂದಿಗೆ ಅನ್ಲಿಮಿಟೆಡ್ ಕಾಲ್, 24ಜಿಬಿ ಡೇಟಾ, 3600 ಉಚಿತ ಸಂದೇಶ ಸೌಲಭ್ಯವನ್ನು ಆನಂದಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News