ತನ್ನ ತಂದೆಯನ್ನೇ ಕೊಲೆ ಮಾಡಲು ಹೋಗಿದ್ದ ಫಯಾಜ್‌..! ಶಾಕಿಂಗ್‌ ವಿಚಾರ ಬಿಚ್ಚಟ್ಟ ನೇಹಾ ತಂದೆ

Neha murder case updates : ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಗ್‌ ವಿಚಾರವೊಂದು ಹೊರ ಬಿದ್ದಿದೆ. ಆರೋಪಿ ಫಯಾಜ್‌ ತನ್ನ ತಂದೆಯನ್ನೇ ಕೊಲೆ ಮಾಡಲು ಮುಂದಾಗಿದ್ದ ಎಂದು ತಿಳಿದು ಬಂದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Apr 21, 2024, 04:30 PM IST
    • ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌
    • ಆರೋಪಿ ಫಯಾಜ್‌ ತನ್ನ ತಂದೆಯನ್ನೇ ಕೊಲೆ ಮಾಡಲು ಮುಂದಾಗಿದ್ದನಂತೆ
    • ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನೇಹಾ ತಂದೆ ನಿರಂಜನ ಹಿರೇಮಠ
ತನ್ನ ತಂದೆಯನ್ನೇ ಕೊಲೆ ಮಾಡಲು ಹೋಗಿದ್ದ ಫಯಾಜ್‌..! ಶಾಕಿಂಗ್‌ ವಿಚಾರ ಬಿಚ್ಚಟ್ಟ ನೇಹಾ ತಂದೆ title=

Neha Hiremath murder case : ನೇಹಾ ಪ್ರಕರಣಕ್ಕೆ ಸಂಬಂಧಿಸಿ ಹೊಸ ಹೊಸ ವಿಚಾರಗಳು ಬಯಲಿಗೆ ಬರುತ್ತಿವೆ. ಇದೀಗ ಆರೋಪಿ ಫಯಾಜ್‌ ಸ್ವತಃ ತನ್ನ ತಂದೆಯನ್ನೇ ಹತ್ಯೆ ಮಾಡಲು ಹೋಗಿದ್ದಾಗಿ ತಿಳಿದು ಬಂದಿದ್ದು, ಈ ಕುರಿತು ಪೊಲೀಸರಿಗೂ ಮಾಹಿತಿ ಇತ್ತು ಎಂದು ಮೃತ ನೇಹಾ ತಂದೆ ಆರೋಪಿಸಿದ್ದಾರೆ.

ಮಗಳ ಸಾವಿನ ನ್ಯಾಯಕ್ಕಾಗಿ ಹೋರಾಡುತ್ತಿರುವ ನೇಹಾ ತಂದೆ ನಿರಂಜನ ಹಿರೇಮಠ, ಶಾಕಿಂಗ್‌ ವಿಚಾರವೊಂದನ್ನು ಬಹಿರಂಗ ಪಡಿಸಿದ್ದಾರೆ. ಆರೋಪಿ ಫಯಾಜ್‌ ಆಸ್ತಿಗಾಗಿ ತನ್ನ ತಂದೆಯನ್ನು ಕೊಲೆ ಹೋಗಿದ್ದ ಎಂದು ತಿಳಿಸಿದ್ದಾರೆ. ಅಲ್ಲದೆ, ಇಬ್ಬರು ಲವ್‌ ಮಾಡುತ್ತಿರಲಿಲ್ಲ, ಫಯಾಜ್‌ ಮಗಳಿಗೆ ಪ್ರೀತಿಸುವಂತೆ ಕಾಟ ಕೊಡುತ್ತಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮುಸ್ಲಿಂ ಮತಾಂಧವಾದಿಗಳಿಗೆ ಈ ಸರ್ಕಾರದಲ್ಲಿ ಬಹಳ ಗೌರವವಿದೆ : ಆರ್‌ ಅಶೋಕ್‌

ಅಲ್ಲದೆ, ಫಯಾಜ್‌ ತಂದೆ ತಾಯಿ ತಮಗೆ ಕರೆ ಮಾಡಿಲ್ಲ. ಮಗನ ಲವ್‌ ಕುರಿತು ಯಾವುದೇ ವಿಚಾರ ನನ್ನ ಜೊತೆ ಚರ್ಚೆ ನಡೆಸಿಲ್ಲ. ಒಂದು ವೇಳೆ ನನಗೆ ತಿಳಿದಿದ್ದರೆ, ನನ್ನ ಮಗಳನ್ನು ನಾನು ಅವನಿಂದ ರಕ್ಷಿಸಿಕೊಳ್ಳುತ್ತಿದ್ದೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು ಅಂತ ನಿರಂಜನ ಹಿರೇಮಠ ಅವರು ಆಗ್ರಹಿಸಿದ್ದಾರೆ.

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ  ಕೆಲವು ಕಿಡಿಗೇಡಿಗಳು ನನ್ನ ಮಗಳ ಹೆಸರು ಕೆಡಿಸಲು ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ನನ್ನ ಮನೆತನದ ಹೆಸರನ್ನು ಹಾಳು ಮಾಡಲು ಹೊರಟಿದ್ದಾರೆ. ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News