Karnataka Budget 2023 : ಸಿಎಂ ಸಿದ್ದು ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು ?

Karnataka budget 2023 : 2023-24ನೇ ಸಾಲಿನ ರಾಜ್ಯ  ಬಜೆಟ್ ನಲ್ಲಿ  ರಾಜ್ಯ ರಾಜಧಾನಿ ಬೆಂಗಳೂರಿಗೆ ಸಿಕ್ಕಿರುವ ಅನುದಾನ ಎಷ್ಟು ? 

Written by - Ranjitha R K | Last Updated : Jul 7, 2023, 01:49 PM IST
  • ಬೆಂಗಳೂರಿಗೆ ಸಿದ್ದರಾಮಯ್ಯ ಕೊಡುಗೆ
  • ಘೋಷಿಸಿದ ಹೊಸ ಯೋಜನೆಗಳು ಯಾವುವು ?
  • ನೀಡಿರುವ ಒಟ್ಟು ಅನುದಾನ ಎಷ್ಟು ?
Karnataka Budget 2023 : ಸಿಎಂ ಸಿದ್ದು ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು ? title=

Karnataka budget 2023 : ಸಿಎಂ ಸಿದ್ದರಾಮಯ್ಯ  ಮಂಡಿಸಿರುವ ರಾಜ್ಯ ಬಜೆಟ್ ನಲ್ಲಿ ರಾಜ್ಯ ರಾಜಧಾನಿಗೆ ನೀಡಿರುವ ಕೊಡುಗೆಗೆಳು ಏನು? ಸಿಎಂ ಘೋಷಿಸಿದ ಹೊಸ ಯೋಜನೆಗಳು  ಯಾವುವು ಎನ್ನುವುದರ ವಿವರವಾದ ಮಾಹಿತಿ ಇಲ್ಲಿದೆ. 

ರಾಜ್ಯ ರಾಜಧಾನಿಗೆ ಸಿದ್ದು ಬಜೆಟ್ ನಲ್ಲಿ ಸಿಕ್ಕಿದೆಷ್ಟು : 
• ಬೈಯಪ್ಪನಹಳ್ಳಿ ಸರ್ ಎಂವಿ ರೈಲ್ವೇ ಟರ್ಮಿನಲ್ ಗೆ ಸಂಪರ್ಕ‌ ಕಲ್ಪಿಸಲು ಹೊಸ ಮೇಲ್ಸೇತುವೆ. ಮೆಟ್ರೋದಿಂದ ಟರ್ಮಿನಲ್ ಗೆ ಸಂಪರ್ಕ ಕಲ್ಪಿಸುವಂತೆ ಫ್ಲೈ ಓವರ್. ಇದಕ್ಕೆ 263 ಕೋಟಿ ನಿಗದಿ. 
• ನಗರದಲ್ಲಿ ಹೊಸದಾಗಿ 1,411 ಕೋಟಿಯ 20 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ನಿರ್ಮಾಣ
• 2023 - 24ನೇ ಸಾಲಿನಲ್ಲಿ ನಗರದಲ್ಲಿ 800 ಕೋಟಿ ವೆಚ್ಚದಲ್ಲಿ ಹೊಸ 100 km ವೈಟ್ ಟಾಪಿಂಗ್ ರಸ್ತೆ ನಿರ್ಮಾಣ
• 2023-24ರಲ್ಲಿ ಈಗಾಗಲೇ  ಹೈಡೆನ್ಸೆಟಿ ಕಾರಿಡಾರ್ ಗಳಾಗಿ ಗುರುತಿಸಿರುವ 83km ರಸ್ತೆಗಳ ಅಭಿವೃದ್ಧಿಗೆ 273 ಕೋಟಿ ರೂ. ಮೀಸಲು

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಎಂ ಸಿದ್ದು ಸರ್ಕಾರದ ಕೊಡುಗೆಗಳಿವು

• ಬೆಂಗಳೂರಿನ ತ್ಯಾಜ್ಯ ವಿಲೇವಾರಿ ಜಾಗವನ್ನು 256 ಉದ್ಯಾನವನವಾಗಿ ಪರಿವರ್ತನೆ
• ಮುಂದಿನ ಮೂರು ವರ್ಷಗಳಲ್ಲಿ 70 km ಇರುವ ಮೆಟ್ರೋವನ್ನು 176 kmಗೆ ವಿಸ್ತರಣೆ
• ಹೆಬ್ಬಾಳದಿಂದ ಸರ್ಜಾಪುರ ವರೆಗಿನ 37km ಉದ್ದದ ಮೆಟ್ರೋ ಯೋಜನೆಯನ್ನು, 15 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸುವ ಸಲುವಾಗ ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಸಲ್ಲಿಕೆ
ಬೆಂಗಳೂರು ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದಲೇ ಸಾವಿರ ಕೋಟಿ ಅನುದಾನ
• ನಗರದ ಕೆರೆಗಳ ತ್ಯಾಜ್ಯ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ 1,250 ಕೋಟಿ ವೆಚ್ಚದಲ್ಲಿ ಕಾಮಗಾರಿ
• ಇಂದಿರಾ ಕ್ಯಾಂಟೀನ್ ಗಳ ನವೀಕರಣ, ದುರಸ್ತಿ,‌ ಕೆಲ‌ ಹೊಸ ಕ್ಯಾಂಟೀನ್ ನಿರ್ಮಾಣಕ್ಕಾಗಿ 100 ಕೋಟಿ
• BSWMCL ಸಂಸ್ಥೆಗೆ ಘನ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ 100 ಕೋಟಿ ಅನುದಾನ

ಇದನ್ನೂ ಓದಿ :  Karnataka Budget 2023 : ಸಿದ್ದರಾಮಯ್ಯ ಬಜೆಟ್ ನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಭರ್ಜರಿ ಕೊಡುಗೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=38l6m8543Vk

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News