ಕಲ್ಕಿ ಹಿಟ್‌ ಬೆನ್ನಲ್ಲೆ, ಪ್ರಭಾಸ್ 'ದಿ ರಾಜಾ ಸಾಬ್' ಫಸ್ಟ್‌ ಲುಕ್‌ ಔಟ್‌..! ಕುತೂಹಲ ಹುಟ್ಟಿಸುತ್ತಿದೆ ಡಾರ್ಲಿಂಗ್‌ ಲುಕ್‌

Prabhas in The Raja Saab : ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರ ಬ್ಲಾಕ್ಬಸ್ಟರ್‌ ಹಿಟ್‌ ಆಗಿದೆ.. ವಿಶ್ವದಾದ್ಯಂತ ಈ ಸಿನಿಮಾಗೆ ಸಿನಿ ಪ್ರೇಕ್ಷಕರ ಫಿದಾ ಆಗಿದ್ದಾನೆ. ಈ ಚಿತ್ರವು ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ.. ಸಧ್ಯ ಕಲ್ಕಿ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ರೆಬಲ್‌ ತಮ್ಮ ಮುಂದಿನ ಸಿನಿಮಾ ‘ದಿ ರಾಜಾ ಸಾಬ್’ ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.

Written by - Krishna N K | Last Updated : Jul 28, 2024, 05:57 PM IST
    • ಪ್ರಭಾಸ್ 'ಬಾಹುಬಲಿ' ಸರಣಿಯೊಂದಿಗೆ ಸತತ ಪ್ಯಾನ್ ಇಂಡಿಯಾ ಯೋಜನೆಗಳಲ್ಲಿ ನಟಿಸುತ್ತಿದ್ದಾರೆ.
    • ಪ್ರಭಾಸ್ ನಟನೆಯ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರ ಬ್ಲಾಕ್ಬಸ್ಟರ್‌ ಹಿಟ್‌ ಆಗಿದೆ..
    • ಈ ಸಿನಿಮಾದ ನಂತರ ಮಾರುತಿ ನಿರ್ದೇಶನದಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ತಯಾರಾಗುತ್ತಿದೆ.
ಕಲ್ಕಿ ಹಿಟ್‌ ಬೆನ್ನಲ್ಲೆ, ಪ್ರಭಾಸ್ 'ದಿ ರಾಜಾ ಸಾಬ್' ಫಸ್ಟ್‌ ಲುಕ್‌ ಔಟ್‌..! ಕುತೂಹಲ ಹುಟ್ಟಿಸುತ್ತಿದೆ ಡಾರ್ಲಿಂಗ್‌ ಲುಕ್‌ title=
the raja saab movie

The Raja Saab first glimpse : ಪ್ರಭಾಸ್ 'ಬಾಹುಬಲಿ' ಸರಣಿಯೊಂದಿಗೆ ಸತತ ಪ್ಯಾನ್ ಇಂಡಿಯಾ ಯೋಜನೆಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗೆ ತೆರೆಕಂಡ ಚಿತ್ರ 'ಕಲ್ಕಿ' ಬಾಕ್ಸ್ ಆಫೀಸ್‌ನಲ್ಲಿ ಸುಮಾರು 1100 ಕೋಟಿಗೂ ಹೆಚ್ಚು ಲೂಟಿ ಮಾಡಿದೆ. ಬಾಹುಬಲಿ 2 ನಂತರ ರೂ. 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಚಿತ್ರ ಎಂಬ ದಾಖಲೆಯನ್ನು 'ಕಲ್ಕಿ' ನಿರ್ಮಿಸಿದೆ. 

ಈ ಸಿನಿಮಾದ ನಂತರ ಮಾರುತಿ ನಿರ್ದೇಶನದಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ತಯಾರಾಗುತ್ತಿದೆ. ಒಂದೆಡೆ ಪ್ರಭಾಸ್ ‘ಸಾಲಾರ್ ಪಾರ್ಟ್ 2 ಶೌರ್ಯಾಂಗ ಪರ್ವಂ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವಾಗಲೇ ಡಾರ್ಲಿಂಗ್‌ ಫ್ಯಾನ್ಸ್‌ಗೆ ಡಬಲ್‌ ಧಮಾಕ ಸಿಕ್ಕಿದೆ.. 

ಇದನ್ನೂ ಓದಿ:ಜೇನಿಗಿಂತಲೂ ಮಧುರ ಧ್ವನಿ.. 25 ಸಾವಿರಕ್ಕೂ ಹೆಚ್ಚು ಹಾಡಿಗೆ ಜೀವ ತುಂಬಿದ ಗಾಯಕಿ..! ಯಾರು ಅಂತ ಗೊತ್ತಾಯ್ತಾ..? 

‘ದಿ ರಾಜಾಸಾಬ್’ ಸಿನಿಮಾದ ಅವರ ಭಾಗದ ಚಿತ್ರೀಕರಣ ಆಗಸ್ಟ್‌ನಲ್ಲಿ ಪೂರ್ಣಗೊಳ್ಳಲಿದೆ. ನಾಳೆ ಈ ಸಿನಿಮಾದ ಬಗ್ಗೆ ಬಿಗ್ ಅಪ್ಡೇಟ್ ಹೊರ ಬೀಳಲಿದೆ. 'ದಿ ರಾಜಾ ಸಾಬ್' ನ ಮೊದಲ ಗ್ಲಿಂಪ್ಸಸ್ ಸೋಮವಾರ (29-7-2024) ಸಂಜೆ 5:30 ಕ್ಕೆ ಬಿಡುಗಡೆಯಾಗಲಿದೆ. ಜೊತೆಗೆ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗುತ್ತದೆ. 

ಹಾರರ್ ಕಥಾ ಹಿನ್ನೆಲೆಯಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ, ಪ್ರಭಾಸ್ ಆತ್ಮದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಟಿಜಿ ವಿಶ್ವಪ್ರಸಾದ್ ನಿರ್ಮಿಸುತ್ತಿದ್ದಾರೆ. ನಿರ್ದೇಶಕರಾಗಿ ಮಾರುತಿ ಅವರ ಟ್ರಾಕ್ ರೆಕಾರ್ಡ್ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಅವರ ಕಥೆ ಪ್ರಭಾಸ್‌ಗೆ ಇಷ್ಟವಾಗಿದೆ ಎನ್ನಲಾಗಿದೆ..

ಇದನ್ನೂ ಓದಿ:ಛಲ ಅಂದ್ರೆ ಹೀಗಿರಬೇಕು... 23 ಸರ್ಜರಿ.. 4 ವರ್ಷ ವ್ಹೀಲ್‌ಚೇರ್‌ಗೆ ಸೀಮಿತ.. ಸತ್ತು ಬದುಕುಳಿದ ವ್ಯಕ್ತಿ ಈಗ ಸ್ಟಾರ್..!

ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಜೊತೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ನಟಿಸುತ್ತಿದ್ದಾರೆ. ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಪ್ರಭಾಸ್ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದಂತೆ ವರ್ಷಕ್ಕೆ ಎರಡು ಚಿತ್ರಗಳನ್ನು ನೀಡುತ್ತಿದ್ದಾರೆ.. ಇದರಿಂದ ಡಾರ್ಲಿಂಗ್‌ ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News