ಮೊಬೈಲ್ ನೋಡ್ಬೆಡಾ ಅಂದಿದಕ್ಕೆ ನೇಣಿಗೆ ಶರಣಾದ ಯುವತಿ

ಮನೆಯಲ್ಲಿ ಇದ್ದದ್ದು  ಒಂದೇ ಮೊಬೈಲ್. ಕುಟುಂಬ ಸದಸ್ಯರೆಲ್ಲರೂ ಇದೇ ಮೊಬೈಲ್  ಬಳಸ್ತಾ ಇದ್ರು.. ಚಾರ್ಚಿಂಗ್  ಹಾಕಿದ ಮೊಬೈಲ್  ನೋಡುತ್ತಿದ್ದ ಮಗಳನ್ನ  ಮೊಬೈಲ್ ನೋಡ್ಬೆಡಾ ಅಂದಿದಕ್ಕೆ ಆ ಯುವತಿ ನೇಣಿಗೆ  ಶರಣಾಗಿದ್ದಾಳೆ. 

Written by - Zee Kannada News Desk | Last Updated : May 17, 2022, 08:51 AM IST
  • ಮೊಬೈಲ್ ಸಿಗದಿದ್ದಕ್ಕೆ ಬಾಲಕಿ ಆತ್ಮಹತ್ಯೆ
  • ಚಾರ್ಜಿಂಗ್ ಹಾಕಿದ ಮೊಬೈಲ್ ನೋಡ್ತಿದ್ದ‌ ಮಗಳು
  • ಮೊಬೈಲ್ ನೋಡ್ಬೆಡಾ ಎಂದು ಗದರಿದ್ದ ಪೋಷಕರು
ಮೊಬೈಲ್ ನೋಡ್ಬೆಡಾ ಅಂದಿದಕ್ಕೆ ನೇಣಿಗೆ ಶರಣಾದ ಯುವತಿ title=
Suicide for not getting mobile

ಬೆಂಗಳೂರು: ಇಂದು ಮೊಬೈಲ್ ಪೋನ್ ಗಳು ಮಕ್ಕಳ ಜೀವನದಲ್ಲಿ ಏನೆಲ್ಲಾ ಆಟವಾಡಿಸುತ್ತಿದೆ ಅನ್ನೋದು ಗೊತ್ತೇ ಇದೆ.. ಆನ್ಲೈನ್ ಕ್ಲಾಸ್ ಶುರುವಾದಾಗಿನಿಂದ ಮಕ್ಕಳು ಮೊಬೈಲ್ ಪೋನ್, ಇಂಟರ್ನೆಟ್ ಇರಲಾಗದ ಸ್ಥಿತಿಗೆ ತಲುಪಿದ್ದಾರೆ. ಮೊಬೈಲ್ ಇಲ್ಲದಿದ್ರೆ ತಮ್ಮ ಪ್ರಾಣವನ್ನೇ ಬಿಡುವಂತ ಮನಸ್ಥಿತಿಗೆ ಕೆಲವೊಂದು ಮಕ್ಕಳು ತಲುಪಿರ್ತಾರೆ.. ಇದೇ ರೀತಿ ಮೊಬೈಲ್ ಹುಚ್ಚಿನಿಂದ ಯುವತಿಯೊಬ್ಬಳು  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಯಲ್ಲಿ ಇದ್ದದ್ದು  ಒಂದೇ ಮೊಬೈಲ್. ಕುಟುಂಬ ಸದಸ್ಯರೆಲ್ಲರೂ ಇದೇ ಮೊಬೈಲ್  ಬಳಸ್ತಾ ಇದ್ರು.. ಚಾರ್ಚಿಂಗ್  ಹಾಕಿದ ಮೊಬೈಲ್  ನೋಡುತ್ತಿದ್ದ ಮಗಳನ್ನ  ಮೊಬೈಲ್ ನೋಡ್ಬೆಡಾ ಅಂದಿದಕ್ಕೆ ಆ ಯುವತಿ ನೇಣಿಗೆ  ಶರಣಾಗಿದ್ದಾಳೆ. ಹೌದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ  ನಗರ ಹೊರವಲಯ ಮಾದಗೊಂಡನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ (ತಳಗವಾರ ಕೆರೆ)  ಘಟನೆ ನಡೆದಿದೆ. 

ದೊಡ್ಡಬಳ್ಳಾಪುರ  ನಗರ ರಾಜೀವ್ ಗಾಂಧಿ ಬಡಾವಣೆಯ ನಿವಾಸಿ 19 ವರ್ಷದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಗ್ರಾಮದ ನರಸಪ್ಪ ಮತ್ತು ಜಯಲಕ್ಷ್ಮಮ್ಮ ದಂಪತಿಗೆ ಮೂವರು ಮಕ್ಕಳು, ಮೃತ ಜಯಲಕ್ಷ್ಮಿ ಎರಡನೇ ಮಗಳು. ಮನೆಯಲ್ಲಿ ಮೊಬೈಲ್ ಪೋನ್ ಚಾರ್ಜ್ ಹಾಕಿದ್ದು, ಅದನ್ನು ನೋಡಬೇಡ ಅಂತ ಅವರ ಅಮ್ಮ ಹೇಳಿದಕ್ಕೆ ಮನೆಯ ಬಾಗಿಲು ಹಾಕಿ ಕೋಪದಿಂದ ಹೊರ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಇದನ್ನೂ ಓದಿ- ಬಿಬಿಎಂಪಿ ದಾಸಪ್ಫ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಿಸಲು ಸಜ್ಜು!

ಹಿರಿಯ ಮಗಳಿಗೆ ಮದುವೆ ಫಿಕ್ಸ್ ಆಗಿದ್ದು, ಭಾನುವಾರ  ಮಧ್ಯಾಹನ್ನದ  ಸಮಯಕ್ಕೆ ಮದುವೆ ಖರ್ಚಿಗೆ ಹಣ  ಕೊಡುವರು ಪೋನ್ ಮಾಡುವರಿದ್ದರು. ಕರೆ ಸ್ವೀಕರಿಸಲು ಮೊಬೈಲ್  ಚಾರ್ಚಿಂಗ್  ಹಾಕಿದ್ರು, ಚಾರ್ಚಿಂಗ್  ಹಾಕಿದ್ದ ಮೊಬೈಲ್  ಅನ್ನು ಜಯಲಕ್ಷ್ಮಿ  ನೋಡುತ್ತಿದ್ದಳು. ಹಣ ಕೊಡುವವರ ಕರೆಯ ನಿರೀಕ್ಷೆಯಲ್ಲಿದ್ದ ನರಸಪ್ಪನಿಗೆ ಇದೇ ಸಮಯದಲ್ಲಿ ಮಗಳು ಮೊಬೈಲ್  ನೋಡುತ್ತಿದದ್ದು ಕೋಪ ತರಿಸಿದೆ. ಮೊಬೈಲ್ ನೋಡ್ಬೆಡಾ ಎಂದು ಗದರಿದ್ದಾರೆ. ಇದರಿಂದ ಕೋಪಗೊಂಡ  ಜಯಲಕ್ಷ್ಮಿ  ಮೊಬೈಲ್  ಹೊಡೆದಾಕಿ ಮನೆಗೆ ಚಿಲಕ ಹಾಕಿ ಹೊರಗೆ ಹೋಗಿದ್ದಾರೆ, ಮನೆಯವರು ಮಧ್ಯಾಹ್ನದಿಂದ ಇಡೀ ರಾತ್ರಿ ಜಯಲಕ್ಷ್ಮಿಗಾಗಿ ಹುಡುಕಾಡಿದ್ದಾರೆ. ಆದರೆ ಆಕೆಯ ಪತ್ತೆಯೇ ಆಗಿಲ್ಲ, ಸಂಬಂಧಿಕರ ಮನೆಗೆ ಹೋಗಿರ್ಬೇಕು ಎಂಬ ನಂಬಿಕೆಯ ಮೇಲೆ ಸುಮ್ಮನಾಗಿದ್ದಾರೆ. ಆದ್ರೆ ಬೆಳಗ್ಗೆದ್ದ ತಕ್ಷಣವೇ ಮಗಳ ಸಾವಿನ ಸುದ್ದಿ ಮನೆಯ ಬಾಗಿಲಿಗೆ ಬಡಿಯಿತು. ಮಾದಗೊಂಡನಹಳ್ಳಿಯ ನಿರ್ಜನ ಪ್ರದೇಶದ ಜಾಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಜಯಲಕ್ಷ್ಮಿಯ ಶವ ಪತ್ತೆಯಾಗಿತ್ತು. ಅಕ್ಕಪಕ್ಕದವರು ವಿಷಯವನ್ನು ನರಸಪ್ಪ ಕುಟುಂಬಕ್ಕೆ ತಿಳಿಸಿದ್ರು.   ಸ್ಥಳಕ್ಕೆ ಬಂದ ನರಸಪ್ಪ ತನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. 

ಇನ್ನು ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ  ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಯಲಕ್ಷ್ಮಿಯ ಸಾವು ಅನುಮಾನಸ್ಪದವಾಗಿದ್ದು,  ಮರಕ್ಕೆ ಹತ್ತಿ ಎತ್ತರದ ಸ್ಥಳದಿಂದ ನೇಣು ಬಿಗಿದು ಕೊಂಡು ಆತ್ಮಹತ್ಯೆ ಶರಣಾಗಿರುವುದರಿಂದ ಅನುಮಾನ ಉಂಟಾಗಿದೆ. ಇದರಿಂದ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೋದು ಪೊಲೀಸರಿಗೆ ಡೌಟ್ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಶವ ಪರೀಕ್ಷೆಗೆ ರವಾನಿಸಿದ್ದು, ಶವ ಪರೀಕ್ಷೆ ನಂತರ ಆಕೆಯ ಸಾವಿನ ಅಸಲಿ ಸತ್ಯ ಬಯಲಾಗಲಿದೆ.

ಇದನ್ನೂ ಓದಿ- ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜೀವಂತವಾಗಿದೆಯೇ?: ಸಿದ್ದರಾಮಯ್ಯ ಟೀಕಾಪ್ರಹಾರ

ಅದೇನೇ ಇರಲಿ, ಯುವತಿ ಸಾವಿಗೆ ಮೊಬೈಲ್ ಪೋನ್ ಬಳಕೆಯೇ ಕಾರಣ ಅನ್ನೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇನ್ನಾದ್ರೂ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಮೊಬೈಲ್ ಪೋನ್ ಅನ್ನು ಯಾವ ಬಳಸಬೇಕು ಎಂಬುದನ್ನು ತಿಳಿಸುವುದರ ಜೊತೆಗೆ ನಾವು ಜೀವನದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂಬ ಬಗ್ಗೆಯೂ ಪ್ರೀತಿಯಿಂದ ಕಲಿಸುವುದು ಅತ್ಯಗತ್ಯವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News