Jasprit Bumrah world record: ಜಸ್ಪ್ರೀತ್ ಬುಮ್ರಾ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾದ ಬೌಲಿಂಗ್ ಲೈನ್‌ಅಪ್‌ನ್ನು ಮುನ್ನಡೆಸುತ್ತಿದ್ದು, ಯಶಸ್ವಿಯಾಗಿದ್ದಾರೆ. ಇವರ ಬೌಲಿಂಗ್‌ನಿಂದ ಆಸೀಸ್ ಕಂಗಾಲಾಗಿದ್ದು, ಇದೀಗ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಕಡಿಮೆ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ಕಪಿಲ್ ದೇವ್ ದಾಖಲೆಯನ್ನು ಬುಮ್ರಾ ಹಿಂದಿಕ್ಕಿದ್ದಾರೆ.
ಇದನ್ನೂ ಓದಿ: ಟಿ20 ಬಳಿಕ ಟೆಸ್ಟ್‌ಗೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಿವೃತ್ತಿ..!? ಬಿಸಿಸಿಐನಿಂದಲೇ ಹೊರಬಿತ್ತು ಶಾಕಿಂಗ್ ಅಪ್ಡೇಟ್
ಇದರೊಂದಿಗೆ ಬುಮ್ರಾ ಟೆಸ್ಟ್ ಇತಿಹಾಸದಲ್ಲಿ ಹಿಂದೆಂದೂ ಮಾಡದ ಸಾಧನೆಯೊಂದನ್ನು ಮಾಡಿದ್ದಾರೆ. ಟೆಸ್ಟ್‌ನಲ್ಲಿ ಅತ್ಯಂತ ಕಡಿಮೆ ಸರಾಸರಿಯಲ್ಲಿ 190 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಆಗಿದ್ದಾರೆ. 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಬೌಲರ್ ಒಬ್ಬರು ಟೆಸ್ಟ್‌ನಲ್ಲಿ 19.81 ಸರಾಸರಿಯಲ್ಲಿ 190 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವುದು ಇದೇ ಮೊದಲು. ಈ ಮೊದಲು, ವಿಶ್ವದ ಯಾವುದೇ ಬೌಲರ್‌ಗಳು ಇಷ್ಟು ಕಡಿಮೆ ಸರಾಸರಿಯಲ್ಲಿ 190 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಗಳಿಸಲು ಸಾಧ್ಯವಾಗಿರಲಿಲ್ಲ.
ಇನ್ನು ಬುಮ್ರಾ WTC 2023-25 ರ ಸಾಲಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 13 ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಅಶ್ವಿನ್ 60 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಮಿಚೆಲ್ ಸ್ಟಾರ್ಕ್ 60 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಬುಮ್ರಾ ಮ್ಯಾಚ್ ವಿನ್ನಿಂಗ್ ಬೌಲರ್ ಆಗಿದ್ದು, ತಮ್ಮ ಅತ್ಯುತ್ತಮ ಬೌಲಿಂಗ್‌ನಿಂದ ತಂಡವನ್ನು ಹಲವು ಬಾರಿ ಗೆಲ್ಲಲು ಸಹಾಯ ಮಾಡಿದ್ದಾರೆ.
200 ವಿಕೆಟ್‌ಗಳಸಾಧನೆ:
ಮೆಲ್ಬೋರ್ನ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಇನ್ನಿಂಗ್ಸ್ ಆಡುತ್ತಿರುವ ಬುಮ್ರಾ, ಈ ಸರಣಿಯಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್‌ಗಳನ್ನು ಪಡೆದ ಭಾರತೀಯ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ವಿಷಯದಲ್ಲೂ ಶ್ರೇಷ್ಠ ನಾಯಕ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಟೆಸ್ಟ್‌ನಲ್ಲಿ ವೇಗವಾಗಿ 200 ವಿಕೆಟ್‌ಗಳನ್ನು ಪಡೆದ ಭಾರತೀಯ ಕ್ರಿಕೆಟಿಗ
- ರವಿಚಂದ್ರನ್ ಅಶ್ವಿನ್ - 37 ಪಂದ್ಯಗಳು (ಸೆಪ್ಟೆಂಬರ್ 2016)
- ರವೀಂದ್ರ ಜಡೇಜಾ - 44 ಪಂದ್ಯಗಳು (ಅಕ್ಟೋಬರ್ 2019)
- ಜಸ್ಪ್ರೀತ್ ಬುಮ್ರಾ - 44 ಪಂದ್ಯಗಳು (ಡಿಸೆಂಬರ್ 2024)
- ಹರ್ಭಜನ್ ಸಿಂಗ್ – 46 ಪಂದ್ಯಗಳು (ಸೆಪ್ಟೆಂಬರ್ 2005)
- ಅನಿಲ್ ಕುಂಬ್ಳೆ – 47 ಪಂದ್ಯಗಳು (ಅಕ್ಟೋಬರ್ 1998)
ಇದನ್ನೂ ಓದಿ: Diabetes: ಮಜ್ಜಿಗೆಗೆ ಈ ಪುಡಿ ಬೆರಸಿ ಕುಡಿದರೆ ನಿಮಿಷಗಳಲ್ಲಿ ಕಂಟ್ರೋಲ್‌ಗೆ ಬರುತ್ತೆ ಬ್ಲಡ್ ಶುಗರ್..!
ಬುಮ್ರಾ ಹೆಸರಿನಲ್ಲಿ ಈ ವಿಶೇಷ ಸಾಧನೆ:
31 ವರ್ಷದ ಬುಮ್ರಾ ಅವರು 8484 ಎಸೆತಗಳಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು (ಚೆಂಡುಗಳ ವಿಷಯದಲ್ಲಿ) ಪಡೆದ ನಾಲ್ಕನೇ ವೇಗದ ಬೌಲರ್ ಎನಿಸಿಕೊಂಡರು. ಈ ದಾಖಲೆ ಪಾಕಿಸ್ತಾನದ ವಕಾರ್ ಯೂನಿಸ್ (7725) ಹೆಸರಿನಲ್ಲಿದೆ. ಅವರ ನಂತರ ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ (7848) ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (8153) ಇದ್ದಾರೆ. ಬುಮ್ರಾ ಈ ಸಾಧನೆಯನ್ನು 19.56 ಸರಾಸರಿಯಲ್ಲಿ ಸಾಧಿಸಿದ್ದು, ಇದು ಎಲ್ಲಾ ಬೌಲರ್‌ಗಳಲ್ಲಿ ಅತ್ಯಂತ ಕಡಿಮೆಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ