ಸಿನಿಮಾ ಇಂಡಸ್ಟ್ರಿಗೆ ಆಘಾತ.. ಖ್ಯಾತ ನಟಿ ದುರ್ಮರಣ! ಕಣ್ಣೀರಿಟ್ಟ ಅಭಿಮಾನಿಗಳು

Olivia Hussey Eisley: ರೋಮಿಯೋ ಜೂಲಿಯೆಟ್  ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಆಗಿನ ಕಾಲಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ್ದ ಸಿನಿಮಾಗಳಲ್ಲಿ ಒಂದಾಗಿದ್ದ ಈ ಸಿನಿಮಾ ಇಂದಿಗೂ ಕೂಡ ಅಗಾದವಾದ ಫ್ಯಾನ್‌ ಬೇಸ್‌ ಅನ್ನು ಗಿಟ್ಟಿಸಿಕೊಂಡಿದೆ. ಈ ಸಿನಿಮಾದಲ್ಲಿದ್ದ ಪಾತ್ರಗಳ ನಟನೆಯಂತೂ ಇಂದಿಗೂ ಕೂಡ ಕಣ್ಣಿಗೆ ಕಟ್ಟಿದಂತೆ ಗೋಚರವಾಗುತ್ತದೆ. ಇದೀಗ ಈ ಸಿನಿಮಾದ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌ ಸಿಕ್ಕಿದೆ. 

Written by - Zee Kannada News Desk | Last Updated : Dec 29, 2024, 07:45 AM IST
  • ಈ ಸಿನಿಮಾದಲ್ಲಿದ್ದ ಪಾತ್ರಗಳ ನಟನೆಯಂತೂ ಇಂದಿಗೂ ಕೂಡ ಕಣ್ಣಿಗೆ ಕಟ್ಟಿದಂತೆ ಗೋಚರವಾಗುತ್ತದೆ.
  • 'ರೋಮಿಯೋ ಅಂಡ್ ಜೂಲಿಯೆಟ್' ಚಿತ್ರದಲ್ಲಿ ಜೂಲಿಯೆಟ್ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧರಾದರು.
ಸಿನಿಮಾ ಇಂಡಸ್ಟ್ರಿಗೆ ಆಘಾತ.. ಖ್ಯಾತ ನಟಿ ದುರ್ಮರಣ! ಕಣ್ಣೀರಿಟ್ಟ ಅಭಿಮಾನಿಗಳು title=

Olivia Hussey Eisley: ರೋಮಿಯೋ ಜೂಲಿಯೆಟ್  ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಆಗಿನ ಕಾಲಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಸೃಷ್ಟಿಸಿದ್ದ ಸಿನಿಮಾಗಳಲ್ಲಿ ಒಂದಾಗಿದ್ದ ಈ ಸಿನಿಮಾ ಇಂದಿಗೂ ಕೂಡ ಅಗಾದವಾದ ಫ್ಯಾನ್‌ ಬೇಸ್‌ ಅನ್ನು ಗಿಟ್ಟಿಸಿಕೊಂಡಿದೆ. ಈ ಸಿನಿಮಾದಲ್ಲಿದ್ದ ಪಾತ್ರಗಳ ನಟನೆಯಂತೂ ಇಂದಿಗೂ ಕೂಡ ಕಣ್ಣಿಗೆ ಕಟ್ಟಿದಂತೆ ಗೋಚರವಾಗುತ್ತದೆ. ಇದೀಗ ಈ ಸಿನಿಮಾದ ಅಭಿಮಾನಿಗಳಿಗೆ ಬ್ಯಾಡ್‌ ನ್ಯೂಸ್‌ ಸಿಕ್ಕಿದೆ. 

ರೋಮಿಯೋ ಜೂಲಿಯೆಟ್ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಸಿದ್ದ ಹಾಲಿವುಡ್‌ ನಟಿ ಒಲಿವಿಯಾ ಹಸ್ಲಿ ಅವರು ನಿಧನರಾಗಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಇದೀಗ ಶಾಕ್‌ ಆಗಿದ್ದಾರೆ. ಅರ್ಜೆಂಟೀನಾದಲ್ಲಿ ಹುಟ್ಟಿ ಲಂಡನ್‌ನಲ್ಲಿ ಬೆಳೆದ ನಟಿ ಒಲಿವಿಯಾ ಹಸ್ಲಿ 1968 ರಲ್ಲಿ ಫ್ರಾಂಕೋ ಗೆಬ್ರೆಲ್ಲಿ ನಿರ್ದೇಶನದ 'ರೋಮಿಯೋ ಅಂಡ್ ಜೂಲಿಯೆಟ್' ಚಿತ್ರದಲ್ಲಿ ಜೂಲಿಯೆಟ್ ಪಾತ್ರವನ್ನು ನಿರ್ವಹಿಸುವ ಮೂಲಕ ಪ್ರಸಿದ್ಧರಾದರು.

ಒಲಿವಿಯಾ ಅತ್ಯುತ್ತಮ ನಟಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ಸಿನಿಮಾದಲ್ಲಿ ಯಾವ ಪಾತ್ರ ಕೊಟ್ಟರೂ ಕೂಡ, ಓಲಿವಿಯಾ ಆ ಪಾತ್ರವೇ ತಾವಾಗಿ ಪಾತ್ರದಲ್ಲಿ ಮುಳುಗಿ ಹೋಗುತ್ತಿದ್ದರು. ಒಲಿವಿಯಾ ಹಸ್ಲಿ ಅವರು ಜೀಸಸ್ ಆಫ್ ನಜರೆತ್ ಟಿವಿ ಸರಣಿಯಲ್ಲಿ ಯೇಸುವಿನ ತಾಯಿಯಾದ ಮೇರಿ ಪಾತ್ರವನ್ನು ನಿರ್ವಹಿಸುವ ಮೂಲಕ ಜನ ಮನವನ್ನು ಗೆದ್ದುಕೊಂಡಿದ್ದರು.

70ರ ದಶಕದಲ್ಲಿ ಸಿನಿಮಾದಲ್ಲಿ ನಟನೆಯ ಮೂಲಕ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದ ಮೂಲಕ ಸಾಗರದಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದ ನಟಿ, ವ್ರದ್ಧಾಪ್ಯದಲ್ಲಿ ಮರನ ಹೊಂದಿದ್ದಾರೆ ಎಂದು ಅವರ ಕುಟುಂಬದವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇನ್ನೂ, ಹಾಲಿವುಡ್‌ ಸಿನಿಮಾಗಳ ಮೂಲಕ ಅಭಿಮಾನಿಗಲ ಎದೆಯಲ್ಲಿ ತಮ್ಮ ಹೆಜ್ಜೆ ಗುರುತನ್ನು ಹಚ್ಚೆ ಹಾಕಿದ ಒಲಿವಿಯಾ ಅವರು ತಮ್ಮ 73 ರನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News