ಗಾರೆ ಕೆಲಸಕ್ಕೆ ನಿಂತ Bigg Boss Winner..! ಲಕ್ಷ ಲಕ್ಷ ಹಣ.. ಕಾರು, ಪ್ಲಾಟ್‌ ಎಲ್ಲಾ ಎಲ್ಲೊಯ್ತು.. ಏಕೆ ಈ ಪರಿಸ್ಥಿತಿ..?

Bigg Boss winner : ಬಿಗ್‌ ಬಾಸ್‌ ಎನ್ನುವ ಜನಪ್ರೀಯ ಕಾರ್ಯಕ್ರಮದಲ್ಲಿ ಗೆದ್ದನಂತರ.. ಕೈ ತುಂಬಾ ಹಣ.. ಕಾರು ಬಂಗಲೇ.. ಹೆಸರು ಎಲ್ಲಾ ಬರುತ್ತೆ.. ಸಾಲದಕ್ಕೆ ಸಿನಿಮಾ ಆಫರ್‌ಗಳು ಸಹ.. ಆದರೆ ಈ ಬಿಗ್‌ಬಾಸ್‌ ವಿನ್ನರ್‌ ಇದೀಗ ಗಾರೆ ಕೆಲಸಕ್ಕೆ ನಿಂತಿದ್ದಾನೆ.. ಅಸಲಿಗೆ ಈತನ ಈ ಸ್ಥಿತಿಗೆ ಕಾರಣವಾದ್ರೂ ಏನು..? ಬನ್ನಿ ನೋಡೋಣ..

Written by - Krishna N K | Last Updated : Dec 29, 2024, 07:58 PM IST
    • ಬಿಗ್‌ ಬಾಸ್‌ ಎನ್ನುವ ಜನಪ್ರೀಯ ಕಾರ್ಯಕ್ರಮದಲ್ಲಿ ಗೆದ್ದ ಸ್ಪರ್ಧಿ
    • ಈ ಬಿಗ್‌ಬಾಸ್‌ ವಿನ್ನರ್‌ ಇದೀಗ ಗಾರೆ ಕೆಲಸಕ್ಕೆ ನಿಂತಿದ್ದಾನೆ..
    • ಶೋನಲ್ಲಿ ಗೆದ್ದ ಹಣ ಎಲ್ಲೋಯ್ತು.. ಈತನಿಗೆ ಏಕೆ ಸ್ಥಿತಿ
ಗಾರೆ ಕೆಲಸಕ್ಕೆ ನಿಂತ Bigg Boss Winner..! ಲಕ್ಷ ಲಕ್ಷ ಹಣ.. ಕಾರು, ಪ್ಲಾಟ್‌ ಎಲ್ಲಾ ಎಲ್ಲೊಯ್ತು.. ಏಕೆ ಈ ಪರಿಸ್ಥಿತಿ..? title=

Bigg Boss news : ಬಿಗ್ ಬಾಸ್ ಶೋನಲ್ಲಿ ರೋಚಕ ಗೆಲುವು ಸಾಧಿಸಿದ ನಂತರವೂ ಸ್ಪರ್ಧಿ ಗಾರೆ ಕೆಲಸಕ್ಕೆ ನಿಂತಿದ್ದಾನೆ. ಈ ಕುರಿತು ವಿಡಿಯೋ ಸೋಷಿಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಈ ದೃಶ್ಯಗಳನ್ನು ನೋಡಿದ ನೆಟ್ಟಿಗರು ಶೋನಲ್ಲಿ ಗೆದ್ದ ಹಣ ಎಲ್ಲೋಯ್ತು.. ಈತನಿಗೆ ಏಕೆ ಸ್ಥಿತಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ..

ಹೌದು.. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ಸೂರಜ್ ಚವಾಣ್ 'ಬಿಗ್ ಬಾಸ್ ಮರಾಠಿ' ಐದನೇ ಸೀಸನ್ ಟೈಟಲ್ ಗೆದ್ದಿದ್ದಾರೆ. ಬಿಗ್ ಬಾಸ್ ನಂತರ ಸೂರಜ್ ಅಭಿಮಾನಿ ಬಳಗ ಮತ್ತಷ್ಟು ಹೆಚ್ಚಿತು. ದೊಡ್ಮನೆ ಮನೆಗೆ ಪ್ರವೇಶಿಸುವ ಮುನ್ನ ಸೂರಜ್ ಒಂದು ಕನಸು ಕಂಡಿದ್ದರು. ಅದು ಸ್ವಂತ ಮನೆ ಕಟ್ಟುವುದು..

ಇದನ್ನೂ ಓದಿ:ಸ್ಟಾರ್‌ ನಟಿ ಜೊತೆ ಪ್ರಭಾಸ್‌ ಡೇಟಿಂಗ್‌..! ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಅರ್ಧಂಬರ್ಧ ಬಟ್ಟೆಯಲ್ಲಿ ನಟ.. ಫೋಟೋಸ್‌ ವೈರಲ್‌

ಇದೀಗ ಕಾರ್ಯಕ್ರಮ ಮುಗಿದ ಬಳಿಕ ತಮ್ಮ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಸೂರಜ್ ತಮ್ಮ ಹೊಸ ಮನೆಯ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಮನೆಯ ಒಂದು ನೋಟವನ್ನು ತೋರಿಸಿದ್ದಾರೆ.. ಅಲ್ಲದೆ ಸ್ವತಃ ತಾವೇ ಮನೆ ಕಟ್ಟಲು ನಿಂತಿದ್ದಾರೆ.. 

ಬಿಗ್ ಬಾಸ್ ಮರಾಠಿ ವಿಜೇತರಾದ ನಂತರ, ಸೂರಜ್ ಹಳ್ಳಿಯಲ್ಲಿ ಸರಿಯಾದ ಮನೆಯನ್ನು ನಿರ್ಮಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಅಷ್ಟೇ ಅಲ್ಲ ಆ ಮನೆಗೆ ‘ಬಿಗ್ ಬಾಸ್’ ಎಂದು ಹೆಸರಿಡುವುದಾಗಿಯೂ ಹೇಳಿದ್ದಾರೆ. ಇದೀಗ ಅದೇ ಮನೆಯ ನಿರ್ಮಾಣದ ವಿಡಿಯೋವನ್ನು ಪೋಸ್ಟ್ ಮಾಡಿರುವ ಸೂರಜ್, 'ನನ್ನ ಮನೆ.. ಶೀಘ್ರದಲ್ಲೇ ಬಿಗ್ ಬಾಸ್ ಬಂಗಲೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಶಸ್ತ್ರ ಚಿಕಿತ್ಸೆ ಒಳಗಾದ ಗ್ಲಾಮರ್‌ ಬ್ಯೂಟಿ ಡಿಂಪಲ್..! 3 ತಿಂಗಳು ಬೆಡ್‌ ರೆಸ್ಟ್‌.. ಈಗ ಹೇಗಿದ್ದಾಳೆ ಸುಂದರಿ..?

ಸೂರಜ್ ಹುಟ್ಟಿದ್ದು ಪುಣೆ ಜಿಲ್ಲೆಯ ಬಾರಾಮತಿ ತಾಲೂಕಿನ ಮೋಡ್ವೆ ಗ್ರಾಮದಲ್ಲಿ. ಅವರ ಮನೆಯ ಸ್ಥಿತಿ ತುಂಬಾ ಕಳಪೆಯಾಗಿತ್ತು. ಸೂರಜ್ ನ ಬಾಲ್ಯ ಸಾಮಾನ್ಯ ಮಕ್ಕಳಂತಿರಲಿಲ್ಲ. ಚಿಕ್ಕವನಿರುವಾಗಲೇ ತಂದೆ ತೀರಿಕೊಂಡರು. ಆ ಬಳಿಕ ತಾಯಿಯೂ ಅನಾರೋಗ್ಯದಿಂದ ಪ್ರಾಣ ಕಳೆದುಕೊಂಡಿದ್ದಾರೆ. 

ಸೂರಜ್‌ಗೆ ಐವರು ಅಣ್ಣ ತಂಗಿಯರಿದ್ದಾರೆ. ಅವರನ್ನೆಲ್ಲ ನೋಡಿಕೊಂಡು, ದುಡಿದು ಕೂಲಿ ಮಾಡುತ್ತಾ ಜೀವನದ ಬಂಡಿ ಓಡಿಸುತ್ತಿದ್ದ. ಹೀಗಾಗಿಯೇ ಅವರಿಗೆ ಸಾಮಾಜಿಕ ಜಾಲತಾಣಗಳು ಸಾಕಷ್ಟು ಖ್ಯಾತಿ ತಂದುಕೊಟ್ಟಿವೆ. ಆರಂಭದಲ್ಲಿ, ಸೂರಜ್ ಅವರ ವೀಡಿಯೊಗಳು ಟಿಕ್‌ಟಾಕ್ ಮತ್ತು ನಂತರ ಇನ್‌ಸ್ಟಾಗ್ರಾಮ್‌ನಂತಹ ಮಾಧ್ಯಮಗಳಲ್ಲಿ ವೈರಲ್ ಆಗಲು ಪ್ರಾರಂಭಿಸಿದವು. ಸೂರಜ್ ತನ್ನ ವಿಚಿತ್ರ ಶೈಲಿಯಿಂದಾಗಿ ನೆಟಿಜನ್‌ಗಳಿಂದ ಇಷ್ಟವಾಗಲು ಪ್ರಾರಂಭಿಸಿದರು. ಅಂತೀಮವಾಗಿ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಹೋಗಿ ಗೆದ್ದಿದ್ದಾನೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News