“ರಾಮಮಂದಿರ ಹೆಸರಿನಲ್ಲಿ ಆಗಲಿ ರಾವಣ ಹೆಸರಿನಲ್ಲಿ ಆಗಲಿ ಒಟ್ನಲ್ಲಿ ಒಳ್ಳೆಯದು ಮಾಡಿ”

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು “ಮುಂದಿನ ಸಂಕ್ರಾಂತಿ ಒಳಗೆ ರಾಮಮಂದಿರದ ಒಂದು ಹಂತದ ಕಾಮಗಾರಿ ಮುಗದಿರತ್ತೆ.ಒಂದು ಕಾಲಕ್ಕೆ ರಾಮಮಂದಿರ ನಿರ್ಮಾಣ ಅನ್ನೋದು ಕನಸಾಗಿತ್ತು.ಆದ್ರೆ ಇನ್ನೊಂದು ವರ್ಷದಲ್ಲಿಕಾಮಗಾರಿ ಮುಗದ ಹೋಗುತ್ತೆ ಮತ್ತು ರಾಮಮಂದಿರ ನಿರ್ಮಾಣವಾಗುತ್ತೆ, ಆದರೆ ಮುಂದೇನು ಎಂದು ಅವರು ಪ್ರಶ್ನಿಸುತ್ತಲೇ ಮುಂದೆ ರಾಮ ರಾಜ್ಯ ನಿರ್ಮಾಣವಾಗಬೇಕೆಂದು ಆಶಿಸಿದರು.

Written by - Zee Kannada News Desk | Last Updated : Jan 16, 2023, 06:44 PM IST
  • ಎಲ್ಲ ಕಡೆ ಇವತ್ತು ಹುಂಡಿಯಲ್ಲಿ ಹಾಕಿದ ಕಾಣಿಕೆ ಎಲ್ಲಿ ಹೋಯ್ತು ಅನ್ನೋ ಅಪವಾದ ಇದೆ
  • ನಾವು ಒಂದು ವರ್ಷಕ್ಕೆ ಐದು ಲಕ್ಷ ರೂಪಾಯಿ ಖರ್ಚು ಮಾಡೋರು ಇದ್ದೇವೆ
  • ಐದು ಲಕ್ಷ ಖರ್ಚು ಮಾಡಿದ್ರೆ ಸುಂದರ ಸಣ್ಣ ಮನೆ ನಿರ್ಮಾಣವಾಗತ್ತೆ
 “ರಾಮಮಂದಿರ ಹೆಸರಿನಲ್ಲಿ ಆಗಲಿ ರಾವಣ ಹೆಸರಿನಲ್ಲಿ ಆಗಲಿ ಒಟ್ನಲ್ಲಿ ಒಳ್ಳೆಯದು ಮಾಡಿ” title=
screengrab

ಹುಬ್ಬಳ್ಳಿ: ರಾಮ ಮಂದಿರ ಹೆಸರಲ್ಲಿ ಆದರೂ ಒಳ್ಳೆದ ಮಾಡಿ, ರಾವಣನ ಹೆಸರಲ್ಲಿ ಆದ್ರೂ ಒಳ್ಳೆದ ಮಾಡಿ ಒಟ್ಟಿನಲ್ಲಿ ದೇಶಕ್ಕೆ ಒಳ್ಳೆದ ಆಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಆಶಿಸಿದ್ದಾರೆ.

ಇದನ್ನೂ ಓದಿ: Miss Universe 2022 : ಯುಸ್‌ನ ಚೆಲುವೆಯ ಮುಡಿಗೆ ಭುವನ ಸುಂದರಿ ಕಿರೀಟ, ಭಾರತದ ದಿವಿತಾ ರೈಗೆ ನಿರಾಸೆ

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು “ಮುಂದಿನ ಸಂಕ್ರಾಂತಿ ಒಳಗೆ ರಾಮಮಂದಿರದ ಒಂದು ಹಂತದ ಕಾಮಗಾರಿ ಮುಗದಿರತ್ತೆ.ಒಂದು ಕಾಲಕ್ಕೆ ರಾಮಮಂದಿರ ನಿರ್ಮಾಣ ಅನ್ನೋದು ಕನಸಾಗಿತ್ತು.ಆದ್ರೆ ಇನ್ನೊಂದು ವರ್ಷದಲ್ಲಿಕಾಮಗಾರಿ ಮುಗದ ಹೋಗುತ್ತೆ ಮತ್ತು ರಾಮಮಂದಿರ ನಿರ್ಮಾಣವಾಗುತ್ತೆ, ಆದರೆ ಮುಂದೇನು ಎಂದು ಅವರು ಪ್ರಶ್ನಿಸುತ್ತಲೇ ಮುಂದೆ ರಾಮ ರಾಜ್ಯ ನಿರ್ಮಾಣವಾಗಬೇಕೆಂದು ಆಶಿಸಿದರು.

ಎಲ್ಲ ಕಡೆ ಇವತ್ತು ಹುಂಡಿಯಲ್ಲಿ ಹಾಕಿದ ಕಾಣಿಕೆ ಎಲ್ಲಿ ಹೋಯ್ತು ಅನ್ನೋ ಅಪವಾದ ಇದೆ.ನಾವು ಒಂದು ವರ್ಷಕ್ಕೆ ಐದು ಲಕ್ಷ ರೂಪಾಯಿ ಖರ್ಚು ಮಾಡೋರು ಇದ್ದೇವೆ. ಐದು ಲಕ್ಷ ಖರ್ಚು ಮಾಡಿದ್ರೆ ಸುಂದರ ಸಣ್ಣ ಮನೆ ನಿರ್ಮಾಣವಾಗತ್ತೆ.ಹೀಗಾಗಿ ದಿನ ದಲೀತರಿಗೆ ಕಟ್ಟಿಸಿಕೊಡೋಣ ಆ ನಿಟ್ಟಿನಲ್ಲಿ ಫಲಾನುಭವಿಗಳನ್ನು ನಾವೇ ಗುರುತಿಸಿ ನಿರ್ಗತಿಕರಿಗೆ ನಾವೇ ಮನೆ ಕಟ್ಟಿಸಿ ಕೊಡುತ್ತೇವೆ ಎಂಡ್ ಸ್ವಾಮಿಜಿ ಹೇಳಿದರು.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ

ರಾಮ ದೇವರ ಹೆಸರಲ್ಲಿ ಹಣ ಕೂಡಿಡೋಣ ರಾಮ ದೇವರ ಹೆಸರಲ್ಲಿ ಮನೆ ಕಟ್ಟಿಸಿ ದಾನ ಮಾಡೋಣ. ರಾಮನ ಭಕ್ತಿಯಾಗಲಿ ದೈವ ಭಕ್ತಿಯಾಗಲಿ ಅಥವಾ ದೇಶ ಭಕ್ತಿಯಾಗಲಿ ಬೇರೆ ಅಲ್ಲ, ಆದ್ದರಿಂದ ಇವತ್ತು ರಾಜ್ಯರಾಜ್ಯ ನಿರ್ಮಾಣವಾಗಬೇಕೆಂದರೆ ಪ್ರಜೆಗಳು ರಾಜರಾಗಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.

ಮುಂದಿನ ಮಾರ್ಚ್ ವೇಳೆಗೆ ನಮಗೆ 60 ವರ್ಷ ತುಂಬಲಿದೆ ಹೀಗಾಗಿ ಆರು ಮನೆ ದಾನ ಮಾಡಲು ತಿರ್ಮಾನ ಮಾಡಿದ್ದೇವೆ ಮತ್ತು ರಾಮ ರಾಜ್ಯದ ಸಂಕಲ್ಪ ಮಾಡಲು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡುತ್ತೇವೆ.ರಾಮರಾಜ್ಯದ ಕಲ್ಪನೆ ಕೃಷ್ಣನ ಸನ್ನಿದಾನದಿಂದ ಆಗಬೇಕೆಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News