ಬೆಂಗಳೂರು : ಇಬ್ಬರು ಮಹಿಳಾ ಅಧಿಕಾರಿಗಾಳ ಕಿತ್ತಾಟ ವಿಚಾರವಾಗಿ ಗಮನಹರಿಸಲಾಗಿದೆ. ಮುಖ್ಯಕಾರ್ಯದರ್ಶಿಯವರು ಇಬ್ಬರು ಅಧಿಕಾರಿಗಳನ್ನ ಕರೆದು ಮಾತನಾಡಿದ್ದಾರೆ. ಅವರಿಗೆ ಡೈರೆಕ್ಷನ್ ಇಷ್ಯು ಮಾಡಿದ್ದಾರೆ. ಇಬ್ಬರಿಗೂ ಶಿಸ್ತು ಕಾಪಾಡಿಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೆ, ಇಬ್ಬರು ರೈಟಿಂಗ್ ನಲ್ಲಿ ಬರೆದುಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಹಾಗು ಡಿ ರೂಪಾ ಜಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಇಬ್ಬರು ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿಯವರು ಕರೆದು ಮಾತನಾಡಿದ್ದಾರೆ. ಇಬ್ಬರಿಗೂ ರೂಲ್ಸ್ ಫಾಲೋ ಮಾಡುವಂತೆ ತಿಳಿಸಿದ್ದಾರೆ. ಅವರು ಸಹ ರೈಟಿಂಗ್ನಲ್ಲಿ ಬರೆದುಕೊಟ್ಟಿದ್ದಾರೆ. Indian service conduct rules ಪ್ರಕಾರ ಪರಿಶೀಲನೆ ಮಾಡ್ತಿದ್ದಾರೆ. ಸದ್ಯ ರೂಲ್ಸ್ ಪಾಲೋ ಮಾಡುವ ವಿಶ್ವಾಸವಿದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ: ಐಎಎಸ್ ಅಧಿಕಾರಿ ʼಆʼ ಫೋಟೋಸ್ ಕಳಿಸಬಹುದಾ...! ಆ ʼನಂಬರ್ʼ ಅವ್ರದ್ದೇ ತಾನೆ
ಅಲ್ಲದೆ, ರೂಪಾ, ಸಿಂಧೂರಿ ಕಿತ್ತಾಟಕ್ಕೆ ಕಾನೂನು ಸಚಿವ ವಾರ್ನಿಂಗ್ ನೀಡಿದ್ದಾರೆ. ವಿಧಾನಸೌಧದವರೆಗೂ ಬಂದಿದೆ ಅಂದ್ರೆ ಸುಮ್ಮನಿರಲು ಆಗಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಕಾನೂನಿನಡಿ ಈ ಬಗ್ಗೆ ಏನು ಕ್ರಮ ತಗೋಬಹುದು ನೋಡ್ತೀವಿ, ಈ ಬಗ್ಗೆ ಸರ್ಕಾರ ಬೇರೆ ರೀತಿ ಆಲೋಚನೆ ಮಾಡಬೇಕಾಗುತ್ತದೆ. ಅವರವರ ಮನೆ ವಿಚಾರಗಳನ್ನು ಸಾರ್ವಜನಿಕವಾಗಿ ತರಬಾರದು. ಯಾವ ಸ್ಥಾನದಲ್ಲಿ ಇದ್ದೇವೆ ಎಂದು ಆಲೋಚನೆ ಮಾಡಬೇಕಿತ್ತು ಎಂದು ರೂಪಾ, ಸಿಂಧೂರಿ ಕಿತ್ತಾಟಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಕಿಡಿಕಾರಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ರೋಹಿಣಿ ಹಾಗೂ ಡಿ ರೂಪಾ ಅವರ ವಿಚಾರ ಸಖತ್ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ಡಿ ರೂಪಾ ಅವರು ರೋಹಿಣಿ ಸಿಂಧೂರಿಯವರ ಹೊಸ ಮನೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿನ್ನೆ ರೋಹಿಣಿ ಸಿಂಧೂರಿಯವರ ಖಾಸಗಿ ಫೋಟೋಗಳನ್ನು ಹಂಚಿಕೊಂಡು ರೂಪಾ ಅವರು ಸೆನ್ಸೆಷನ್ ಕ್ರಿಯೇಟ್ ಮಾಡಿದ್ದರು. ಇದೀಗ ಇಬ್ಬರು ಅಧಿಕಾರಿಗ ಜಗಳದಲ್ಲಿ ಸರ್ಕಾರ ಕೈ ಹಾಕಿದ್ದು, ಇನ್ನಾದರೂ ಇವರ ಜಗಳ ನಿಲ್ಲುತ್ತಾ ಅಂತ ಕಾಯ್ದು ನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.