Laxman Savadi : 'ಸದ್ಯಕ್ಕಿಲ್ಲ KSRTC, BMTC ಬಸ್ ಟಿಕೆಟ್ ದರ ಏರಿಕೆ'

ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟ ಪಡಿಸಿದ್ದಾರೆ.

Last Updated : Jun 8, 2021, 02:56 PM IST
  • ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ
  • ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟ ಪಡಿಸಿದ್ದಾರೆ
  • ಪ್ರಯಾಣ ದರ ಏರಿಕೆಯ ಬಗ್ಗೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ
Laxman Savadi : 'ಸದ್ಯಕ್ಕಿಲ್ಲ KSRTC, BMTC ಬಸ್ ಟಿಕೆಟ್ ದರ ಏರಿಕೆ' title=

ಬೆಂಗಳೂರು : ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಬಸ್ ಟಿಕೆಟ್ ದರ ಹೆಚ್ಚಳ ಇಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಇಂದು ವಿಧಾನಸೌಧದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ಲಕ್ಷ್ಮಣ್ ಸವದಿ(Laxman Savadi), ಈಗಾಗಲೇ ಲಾಕ್ ಡೌನ್ ನಿಂದಾಗಿ ರಾಜ್ಯದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವವರು ಬಡವರೆ ಆಗಿದ್ದಾರೆ. ಸಾರಿಗೆ ಪ್ರಯಾಣಿಕರಿಗೆ ಆರ್ಥಿಕ ಸಂಕಷ್ಟದ ನಡುವೆಯೂ ಮತ್ತೊಂದು ಬರೆ ಎಳೆಯೋದಕ್ಕೆ ಸರ್ಕಾರ ಮುಂದಾಗಲ್ಲ. ಸದ್ಯಕ್ಕೆ ಕೆ.ಎಸ್.ಆರ್.ಟಿ.ಸಿ. ಹಾಗೂ ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Oath Taking Ceremony : ಪ್ರಮಾಣವಚನ ಸ್ವೀಕರಿಸಿದ 'ಬೈ ಎಲೆಕ್ಷನ್' ನಲ್ಲಿ ಗೆದ್ದ ಇಬ್ಬರು ಶಾಸಕರು!

ಪ್ರಯಾಣ ದರ ಏರಿಕೆ(Bus Ticket Fare Hike)ಯ ಬಗ್ಗೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದ್ರೆ, ಈ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ ಎಂಬುದಾಗಿ ತಿಳಿಸಿದ್ದೇವೆ. ಈ ಮೂಲಕ ಸಾರಿಗೆಯ 4 ನಾಲ್ಕು ನಿಗಮದ ಪ್ರಯಾಣ ದರ ಏರಿಕೆಯನ್ನು ಸದ್ಯಕ್ಕೆ ಮಾಡೋದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಓದಿ : KCET 2021 Exam Dates : ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ : ಆಗಸ್ಟ್ 28, 29ಕ್ಕೆ CET ಪರೀಕ್ಷೆ! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News